Power Cut in Bengaluru : ಬೆಂಗಳೂರಿಗರೇ ಗಮನಿಸಿ: 3 ದಿನ ವಿದ್ಯುತ್ ಕಡಿತದ ಸ್ಥಳಗಳ ಮಾಹಿತಿ ತಿಳಿಯಿರಿ.
ಬೆಂಗಳೂರಿನಲ್ಲಿ ಫೆಬ್ರವರಿ ತಿಂಗಳಲ್ಲಿ ವಿದ್ಯುತ್ ಕಡಿತಗೊಳ್ಳಲಿದೆ. ಇಂದಿನಿಂದ (ಫೆ.7) ಫೆಬ್ರವರಿ 9ರವರೆಗೆ ನಗರದ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ. ಸ್ಥಳಗಳ ಮಾಹಿತಿ ತಿಳಿಯಿರಿ.
ಬೆಂಗಳೂರು, ಫೆಬ್ರವರಿ 07: ಬೆಂಗಳೂರಿನಲ್ಲಿ ಫೆಬ್ರವರಿ ತಿಂಗಳಲ್ಲಿ ವಿದ್ಯುತ್ ಕಡಿತಗೊಳ್ಳಲಿದೆ. ಇಂದಿನಿಂದ (ಫೆ.7) ಫೆಬ್ರವರಿ 9ರವರೆಗೆ ನಗರದ ವಿವಿಧ ಭಾಗಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.
ಬೆಂಗಳೂರು ವಿದ್ಯುತ್ ವಿತರಣಾ ಕೇಂದ್ರ ವ್ಯಾಪ್ತಿಯಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (KPTCL) ನಿರ್ವಹಣಾ ಕಾರ್ಯಗಳು ನಡೆಯುತ್ತಿವೆ. ಹಾಲಿ ಟ್ರಾನ್ಸ್‌ಫಾರ್ಮರ್‌ಗಳ ಬದಲಾವಣೆ, ಅಸ್ತಿತ್ವದಲ್ಲಿರುವ ಟ್ರಾನ್ಸ್‌ಫಾರ್ಮರ್ ಸ್ತಂಭದ ಎತ್ತರ ಮತ್ತು ವಿಸ್ತರಣೆ, ಕೇಬಲ್ ಅಳವಡಿಕೆ ಸೇರಿದಂತೆ ಇನ್ನಿತರ ಕಾರ್ಯಚಟುವಟಿಕೆಗಳು ನಡೆಯುತ್ತವೆ. ಈ ಕಾರಣಕ್ಕೆ ಇಂದಿನಿಂದ ಮೂರು ದಿನ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ಮಂಗಳವಾರ ಸಂಜೆ 5ಗಂಟೆವರೆಗೆ ಹಾಗೂ ಬುಧವಾರ ಫೆಬ್ರವರಿ 8 ಮತ್ತು ಗುರುವಾರ ಫೆಬ್ರವರಿ 9 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 05 ಗಂಟೆವರೆಗೆ ವಿದ್ಯುತ್ ಸರಬರಾಜು ಆಗದಿರುವ ಸ್ಥಳಗಳ ಮಾಹಿತಿ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (BESCOM) ನೀಡಿದೆ.

ಮಂಗಳವಾರದಂದು ಬೆಂಗಳೂರಿನ ಇಸ್ರೋ ಬಡಾವಣೆ, ಇಸ್ರೋ ಬಡಾವಣೆ ಕೈಗಾರಿಕಾ ಪ್ರದೇಶ, ಕುಮಾರಸ್ವಾಮಿ ಬಡಾವಣೆ, ವಿಕ್ರಂ ನಗರ, ಇಲ್ಯಾಜ್ ನಗರ, ವಿಟ್ಲ ನಗರ, ಯಲಚೇನಹಳ್ಳಿ ಮತ್ತು ಸುತ್ತಮುತ್ತಲಿನ ಪ್ರದೇಶ, ವೀವರ್ಸ್ ಕಾಲೋನಿ, ಗೊಟ್ಟಿಗೆರೆ, ಎಎಂಸಿ ಕಾಲೇಜು, ರಾಗಿಹಳ್ಳಿ, ಕಾಸರಗುಪ್ಪೆ, ಬೈತಾರ, ಮೈಲಸಂದರಡ್ಡಿ, ಲಕ್ಷ್ಮೀಪುರ, ರಾಷ್ಟ್ರೀಯ ಉದ್ಯಾನವನ, ಬಸವನಪುರ ಹಾಗೂ ಶಿವನಹಳ್ಳಿ ಮತ್ತದರ ಸುತ್ತಮುತ್ತಲಿನ ಪ್ರದೇಶಗಳು. ಬೆಸ್ಕಾಂ ನೀಡಿದ ಮಾಹಿತಿ ಪ್ರಕಾರ ಕೆಲವು ಪ್ರದೇಶಗಳಿಗೆ ಪರ್ಯಾಯ ಪೂರೈಕೆಯೊಂದಿಗೆ ಸರಬರಾಜು ಮಾಡಲಾಗುವುದು. ಕೆಲವೆಡೆ ಲೋಡ್ ಶೆಡ್ಡಿಂಗ್ ಅನ್ನು ಸಹ ಮಾಡಲಾಗುವುದು ಎಂದು ತಿಳಿಸಿದೆ.
ನಾಳೆ-ನಾಡಿದ್ದು ಇಲ್ಲಿ ವಿದ್ಯುತ್ ಕಡಿತ
ಇನ್ನೂ ಫೆಬ್ರವರಿ 8 ರಂದು ನಗರದ ಅಲ್ಲಿಮಾರನಹಳ್ಳಿ, ಚಿಕ್ಕೇನಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳು. ಅದೇ ರೀತಿ ಟೆಲಿಕಾಂ ಬಡಾವಣೆ, ಆರ್‌ಪಿಸಿ ಬಡಾವಣೆ, ಹಂಪಿನಗರ, ಅಗ್ರಹಾರ ದಾಸರಹಳ್ಳಿ, ಇಂದಿರಾನಗರದಲ್ಲಿ ವಿದ್ಯುತ್ ಕಡಿತವಾಗಲಿದೆ.
ಫೆಬ್ರವರಿ 9 ರಂದು ನಗರದ ಸಾಸಲುಹಳ್ಳ ಎಂಯುಎಸ್‌ಎಸ್, ಆನಗೋಡು, ಅತ್ತಿಗೆರೆ, ಮಾಯಕೊಂಡ, ನಿಲುವಂಜಿ, ಮುತ್ತಿಗಿ, ಬಡಾ, ಮಟ್ಟಿಹಳ್ಳಿ, ಹುಣಸೇನಹಳ್ಳಿ, ಚಿಗಟೇರಿ,ನಾಗರಕೊಂಡ, ಬೆಣ್ಣೆಹಳ್ಳಿ, ಹಗರಿಗುಡಿಹಳ್ಳಿ, ಗೌರಿಪುರ, ಎಲ್ಲಾ 11ಕೆವಿ ಫೀಡರ್ ಗಳು, ವಿಡಿ ಹಳ್ಳಿ, ದುಗಾವರ, ರೆಡ್ಡಿಹಳ್ಳಿ, ಸಿದ್ದಾಪುರ, ನನ್ನಿವಾಳ, ರಮೇಶ್ ನಗರ, ಪ್ರಾವಿಡೆಂಟ್ ಹೌಸಿಂಗ್ ಅಪಾರ್ಟ್‌ಮೆಂಟ್ ಹಂತ 1 ಹಾಗೂ ಎರಡರಲ್ಲಿ ವಿದ್ಯುತ್ ಕಡಿತಗೊಳ್ಳಲಿದೆ ಎಂದು ಅವರು ಬೆಂಸ್ಕಾ ಪ್ರಕಟಣೆ ತಿಳಿಸಿದೆ.












Click it and Unblock the Notifications