ಹಸಿರು ಮಾರ್ಗದ 4 ಮೆಟ್ರೋ ನಿಲ್ದಾಣಗಳಿಗೆ 4 ದಿನ ಮೆಟ್ರೋ ಇಲ್ಲ

ಬೆಂಗಳೂರು, ನವೆಂಬರ್ 13: ನಾಳೆಯಿಂದ ನಾಲ್ಕು ದಿನ ಈ ಮಾರ್ಗದಲ್ಲಿ ಮೆಟ್ರೋ ಸಂಚಾರ ಇರುವುದಿಲ್ಲ.

ಹಸಿರು ಮಾರ್ಗದ ನಾಲ್ಕು ನಿಲ್ದಾಣಗಳಿಗೆ ಮೆಟ್ರೋ ಸಂಚಾರ ಇರುವುದಿಲ್ಲ. ನವೆಂಬರ್ 14-17ರವರೆಗೆ ಈ ನಾಲ್ಕು ನಿಲ್ದಾಣಗಳಿಗೆ ಮೆಟ್ರೋ ಸೇವೆ ಸ್ಥಗಿತಗೊಳಿಸಲಾಗಿದೆ.

ಆರ್​.ವಿ.ರಸ್ತೆ ಮೆಟ್ರೋ ನಿಲ್ದಾಣ ಕಾಮಗಾರಿ ಹಿನ್ನೆಲೆ, ಹಸಿರು ಮಾರ್ಗದ ಮೆಟ್ರೋ ಸಂಚಾರದಲ್ಲಿ ವ್ಯತ್ಯಯವಾಗಲಿದೆ. ಹೀಗಾಗಿ 4 ದಿನ ಯಲಚೇನಹಳ್ಳಿ ಮಾರ್ಗದ ಮೆಟ್ರೋ ಸಂಚಾರ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ.

ಬೊಮ್ಮಸಂದ್ರ ಸಂಪರ್ಕಿಸುವ ಹೊಸ ನಮ್ಮ ಮೆಟ್ರೋ ರೈಲು ಮಾರ್ಗದಲ್ಲಿನ ವಿದ್ಯುತ್ ಪೂರೈಕೆ ಲೈನ್ ಕಾಮಗಾರಿ ಹಿನ್ನಲೆಯಲ್ಲಿ ಆರ್. ವಿ. ರಸ್ತೆ-ಯೆಲಚೇನಹಳ್ಳಿ ನಡುವಿನ ಮಾರ್ಗದಲ್ಲಿ ಮೆಟ್ರೋ ರೈಲು ಸಂಚಾರ ರದ್ದುಗೊಳಿಸಲಾಗುತ್ತಿದೆ.

ಯಾವತ್ತಿಂತ ಯಾವತ್ತಿನವರೆಗೆ ಮೆಟ್ರೋ ಇಲ್ಲ

ಯಾವತ್ತಿಂತ ಯಾವತ್ತಿನವರೆಗೆ ಮೆಟ್ರೋ ಇಲ್ಲ

ನವೆಂಬರ್​​ 14ರಿಂದ 17ರವರೆಗೆ ಯಲಚೇನಹಳ್ಳಿ ಮಾರ್ಗದ ಮೆಟ್ರೋ ಸಂಚಾರ ಸ್ಥಗಿತಗೊಳ್ಳಲಿದೆ. ಆರ್.ವಿ.ರಸ್ತೆಯಿಂದ ಯಲಚೇನಹಳ್ಳಿ ಮಾರ್ಗದ ಮೆಟ್ರೋ ಸಂಚಾರ ಸ್ಥಗಿತ ಹಿನ್ನೆಲೆ, ಪ್ರಯಾಣಿಕರ ಅನುಕೂಲಕ್ಕಾಗಿ ಆರ್​.ವಿ.ರಸ್ತೆ ಮೆಟ್ರೋ ನಿಲ್ದಾಣದಿಂದ ಯಲಚೇನಹಳ್ಳಿವರೆಗೆ ಬಿಎಂಟಿಸಿ ಬಸ್ ಸೌಲಭ್ಯ ವ್ಯವಸ್ಥೆ ಮಾಡಲಾಗುತ್ತದೆ. ಬೆಳಗ್ಗೆ 5 ರಿಂದ ರಾತ್ರಿ 11.30ರವರೆಗೂ ಬಿಎಂಟಿಸಿ ಬಸ್ ಸಂಚಾರ ಇರುತ್ತದೆ.

ಆರ್‌.ವಿ. ರಸ್ತೆ-ಬೊಮ್ಮಸಂದ್ರ ಮೆಟ್ರೋ ಕಾಮಗಾರಿ

ಆರ್‌.ವಿ. ರಸ್ತೆ-ಬೊಮ್ಮಸಂದ್ರ ಮೆಟ್ರೋ ಕಾಮಗಾರಿ

ನವೆಂಬರ್ 14ರ ಬೆಳಗ್ಗೆ 5 ಗಂಟೆಯಿಂದ 17ರ ರಾತ್ರಿ 11 ಗಂಟೆವರೆಗೆ ಮೆಟ್ರೋ ಸಂಚಾರ ಇರುವುದಿಲ್ಲ. ಆರ್​.ವಿ.ರಸ್ತೆ-ಬೊಮ್ಮಸಂದ್ರ ಮಾರ್ಗದ ಮೆಟ್ರೋ ಕಾಮಗಾರಿಗಾಗಿ ಮೆಟ್ರೋ ಸಂಚಾರ ಸ್ಥಗಿತ ಮಾಡಲಾಗುತ್ತದೆ ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ.

ಜಯನಗರ-ನಾಗಸಂದ್ರ ಯಾವುದೇ ವ್ಯತ್ಯಯ ಇಲ್ಲ

ಜಯನಗರ-ನಾಗಸಂದ್ರ ಯಾವುದೇ ವ್ಯತ್ಯಯ ಇಲ್ಲ

ಆರ್​​.ವಿ. ರಸ್ತೆಯಲ್ಲಿ ಇಂಟರ್​​ ಚೇಂಜ್​ ನಿಲ್ದಾಣ ನಿರ್ಮಾಣ ಕಾರ್ಯ ನಡೆಯಲಿದೆ. ಉಳಿದಂತೆ ಜಯನಗರ-ನಾಗಸಂದ್ರ ಮೆಟ್ರೋ ಸಂಚಾರದಲ್ಲಿ ಯಾವುದೇ ವ್ಯತ್ಯಯ ಇರುವುದಿಲ್ಲ.

ಹಸಿರು ಮಾರ್ಗದಲ್ಲಿ ಬರುವ ನಾಲ್ಕು ನಿಲ್ದಾಣಗಳು

ಹಸಿರು ಮಾರ್ಗದಲ್ಲಿ ಬರುವ ನಾಲ್ಕು ನಿಲ್ದಾಣಗಳು

ಯಲಚೇನಹಳ್ಳಿ, ಜೆಪಿನಗರ, ಬನಶಂಕರಿ ಹಾಗೂ ಆರ್‌ವಿ ರಸ್ತೆ ನಿಲ್ದಾಣಗಳಿಗೆ ಮೆಟ್ರೋ ಸಂಚಾರ ಇರುವುದಿಲ್ಲ. ನವೆಂಬರ್ 18ರಂದು ಬೆಳಗ್ಗೆ 5 ಗಂಟೆಗೆ ನಮ್ಮ ಮೆಟ್ರೋ ಸಂಚಾರ ಎಂದಿನಂತೆ ಆರಂಭವಾಗಲಿದೆ. ನೇರಳೆ ಮಾರ್ಗದಲ್ಲಿನ ಸಂಚಾರಕ್ಕೆ ಯಾವುದೇ ಅಡಚಣೆ ಇಲ್ಲ ಎಂದು ಬಿಎಂಆರ್‌ಸಿಎಲ್ ಸ್ಪಷ್ಟಪಡಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+