ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರೈಬೋ ಲೇಔಟ್ ನಿವಾಸಿಗಳಿಗೀಗ ಕಳ್ಳರ ಕಾಟ - ಸರಣಿ ಕಳ್ಳತನ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 12 : ಬೆಂಗಳೂರಿನಲ್ಲಿ ವಿಪರೀತ ಮಳೆಗೆ ವಿಲ್ಲಾ, ಅಪಾರ್ಟ್ ಮೆಂಟ್ ನಿವಾಸಿಗಳು ಪರದಾಡುತ್ತಿದ್ದಾರೆ. ಇನ್ನೊಂದೆಡೆ ಕಳ್ಳರು ಸದ್ದಿಲ್ಲದೇ ತಮ್ಮ ಕೈಚಳಕವನ್ನು ತೋರಿದ್ದಾರೆ. ಅಂದಹಾಗೆ ಈ ಘಟನೆ ನಡೆದಿರುವುದು ರೈನ್ ಬೋ ಲೇಔಟ್ ನಲ್ಲಿ ಎಂಬುದು ವಿಶೇಷ.

ಬೆಂಗಳೂರಿನ ರೈನ್ ಬೋ ಲೇಔಟ್‌ ನಲ್ಲಿ ಜನರ ಪರದಾಡ್ತಿದ್ದರೆ, ಇದನ್ನೆ ಇಲ್ಲೊಂದು ಕಳ್ಳರ ಗುಂಪು ಸದುಪಯೋಗ ಪಡಿಸಿಕೊಂಡಿದೆ. ನೆರೆ ಬಂದ‌ ಮನೆಗೆ ಬರೆ ಎಳೆದಂತೆ ಕಳ್ಳರು ನೀರು ತುಂಬಿದ್ದ ಮನೆಯಲ್ಲಿ ಕಳ್ಳತನ ಮಾಡಿದ್ದಾರೆ. ಮಳೆಯಿಂದ ಮುಳುಗಡೆಗೊಂಡಿದ್ದ ರೈನ್ ಬೋ ಲೇಔಟ್‌ನಲ್ಲಿ ಸರಣಿ ಕಳ್ಳತನವಾಗಿದ್ದು, ಮೂರು ಮನೆಗಳಲ್ಲಿ ಕಳ್ಳರು ಕಳ್ಳತನ ಮಾಡಿದ್ದಾರೆ.

ಬೆಂಗಳೂರು ಟ್ರಾಫಿಕ್ ಜಾಮ್; ರಸ್ತೆಯಲ್ಲೇ ಕಾರ್ ಇಳಿದು ಆಸ್ಪತ್ರೆಗೆ ಓಡಿದ ವೈದ್ಯ!ಬೆಂಗಳೂರು ಟ್ರಾಫಿಕ್ ಜಾಮ್; ರಸ್ತೆಯಲ್ಲೇ ಕಾರ್ ಇಳಿದು ಆಸ್ಪತ್ರೆಗೆ ಓಡಿದ ವೈದ್ಯ!

ರೈನ್ ಬೋ ಲೇಔಟ್‌ ಕೆಲವು ಮನೆಗಳಲ್ಲಿ ಸರಣಿ ಮನೆಗಳ್ಳತನ ಮಾಡಿರುವ ದುಷ್ಕರ್ಮಿಗಳು ಮನೆಯನ್ನು ದೋಚಿದ್ದರು. ಒಂದೆಡೆ ಮನೆಯಲ್ಲಿದ್ದ ಚಿನ್ನಾಭರಣ ದೋಚಿರುವ ಕಳ್ಳರಿಗೆ ಮನೆಯವರು ಹಿಡಿ ಶಾಪ‌ ಹಾಕಿದ್ದಾರೆ. ಸರಣಿ ಮನೆಗಳ್ಳತನ ಪ್ರಕರಣ ಸಂಬಂಧಿಸಿದಂತೆ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

Series of house burglaries and looted gold jewellery In Flooded Rainbow Layout

ಇನ್ನೂ ಮಳೆಯಿಂದಾಗಿ ಇಡೀ ಲೇಔಟ್‌ನಲ್ಲಿ ನೀರು ನುಗ್ಗಿ ಜನ ಪರದಾಡುದ್ದರು. ಇಡೀ ಲೇಔಟ್ ನಲ್ಲಿ ಕರೆಂಟ್ ಕೂಡ ಇರಲಿಲ್ಲ ಸಿಸಿಟಿವಿ ಕೂಡ ವರ್ಕ್ ಆಗ್ತಿರ್ಲಿಲ್ಲ. ಸಾಲದಕ್ಕೆ ಸಾಕಷ್ಟು ಜನ ಮನೆ ಬಿಟ್ಟು ಬೇರೆಡೆ ತಾತ್ಕಾಲಿಕವಾಗಿ ವಾಸವಾಗಿದ್ದರು ಇದನ್ನ ಕನ್ಫರ್ಮ್ ಮಾಡಿಕೊಂಡು ಖದೀಮರು ಈ ಕೃತ್ಯವೆಸಗಿದ್ದಾರೆ.

ರೈನ್ ಬೋ ಲೇಔಟ್ ನಿವಾಸಿಗಳಿಗೆ ಕಳ್ಳರ ಕಾಟ
ಮನೆ ನಲ್ಲಿ ನೀರು ತುಂಬಿದ್ದರಿಂದ ತಕ್ಷಣಕ್ಕೆ ಮನೆಗೆ ಬೀಗ ಜಡಿದು ಮನೆಯವರೆಲ್ಲಾ ಲಾಡ್ಜ್, ಸಂಬಂಧಿಕರ ಮನೆಗೆ ಹೋಗಿದ್ದರು. ರೈನ್ ಬೋ ಲೇಔಟ್‌ನಲ್ಲಿ ನೀರು, ವಿದ್ಯುತ್ ಸಮಸ್ಯೆ, ರಸ್ತೆ ತುಂಬೆಲ್ಲಾ ಕೆಸರು ತುಂಬಿದ್ದರಿದ ಮನೆಗೆ ವಾಪಸ್ ಬಂದಿರಲಿಲ್ಲ. ಇದನ್ನೆ ಬಂಡವಾಳ ಮಾಡಿಕೊಂಡಿರುವ ಕಳ್ಳರ ಗ್ಯಾಂಗ್ ರಾತ್ರಿಯಲ್ಲಿ ರೈನ್ ಬೋ ಲೇಔಟ್‌ನ ವಿಲ್ಲಾಗಳಿಗೆ ಲಗ್ಗೆಯಿಟ್ಟಿದ್ದಾರೆ. ಮಳೆಯ ನೀರು ನುಗ್ಗಿ ಕಾಂಪೌಂಡ್ ಕೂಡ ಬಿದ್ದಿದ್ದ ಮನೆಗೆ ಬಂದು ಕಳ್ಳತನ ಮಾಡಿದ್ದಾರೆ. ಮನೆಯವರು ಮನೆಗೆ ವಾಪಸ್ಸು ಬಂದು ನೋಡಿದಾಗ ಕೃತ್ಯ ಬಯಲಿಗೆ ಬಂದಿದ್ದು, ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬೆಳ್ಳಂದೂರು ಪೊಲೀಸರು ಬಲೆ ಬೀಸಿದ್ದಾರೆ.

Series of house burglaries and looted gold jewellery In Flooded Rainbow Layout

ಮನೆಯಲ್ಲಿದ್ದ ಚಿನ್ನಾಭರಣ ದೋಚಿರುವ ಕಳ್ಳರು
ರೈನ್ ಬೋ ಲೇಔಟ್‌ನ ಮೂರು ಮನೆಗಳಿಗೆ ಕಳ್ಳರು ಲಗ್ಗೆಯನ್ನು ಇಟ್ಟಿದ್ದಾರೆ. ಮನೆಯಲ್ಲಿದ್ದ ಚಿನ್ನಾಭರಣವನ್ನು ದೋಚಿಕೊಂಡು ಪರಾರಿಯಾಗಿದ್ದಾರೆ. ಮಳೆಯಿಂದಾಗಿ ವಿದ್ಯುತ್ ಸಮಸ್ಯೆ ಉಂಟಾಗಿರುವುದು ಕಳ್ಳರಿಗೆ ಪ್ಲಸ್ ಪಾಯಿಂಟ್ ಆಗಿದೆ. ಇನ್ನು ಸಿಸಿಟಿವಿಗಳು ಸಹ ಸರಿಯಾಗಿ ವರ್ಕ್‌ ಆಗಿಲ್ಲ ಎಮದು ತಿಳಿದು ಬಂದಿದೆ. ಆದರು ಕಳ್ಳರನ್ನು ಭೇಟೆಯಾಡಲು ಬೆಳ್ಳಂದೂರು ಪೊಲೀಸರು ಸಜ್ಜಾಗಿದ್ದಾರೆ.

English summary
Residents of villas and apartments are struggling due to heavy rains in Bengaluru. On the other hand, thieves have shown their skill silently. They have committed a series of house burglaries and looted gold jewellery, Know More,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X