ಖಾಸಗಿ ಮಾಲೀಕರಿಂದ ಪ್ರಯಾಣಿಕರ ಜೇಬಿಗೆ ಕತ್ತರಿ
ಬೆಂಗಳೂರು, ಏ. 30 : ಸರಣಿ ರಜೆಯ ಲಾಭ ಪಡೆದ ಖಾಸಗಿ ಬಸ್ ಮಾಲೀಕರು ಟಿಕೆಟ್ ದರಗಳನ್ನು ಏರಿಕೆ ಮಾಡಿದ್ದಾರೆ. 750 ರೂ. ಟಿಕೆಟ್ 900ಕ್ಕೆ ಏರಿಕೆಯಾಗಿದೆ. ಇದರಿಂದ ಬೆಂಗಳೂರಿನಿಂದ ಹೊರ ಊರಿಗೆ ಪ್ರಯಾಣಿಸುವವರ ಜೇಬಿಗೆ ಕತ್ತರಿ ಬಿದ್ದಿದೆ.
ಶುಕ್ರವಾರದಿಂದ ಸತತ 3 ದಿನ ರಜೆ ಇರುವ ಕಾರಣ ಖಾಸಗಿ ಬಸ್ ಮಾಲೀಕರು ಟಿಕೆಟ್ ದರಗಳನ್ನುಹೆಚ್ಚಿಸಿದ್ದಾರೆ. ಬುಧವಾರದಿಂದಲೇ ಮುಂಗಡ ಟಿಕೆಟ್ ಬುಕ್ಕಿಂಗ್ ಆರಂಭವಾಗಿದ್ದು, ಜನರು ದುಪ್ಪಟ್ಟು ಹಣ ನೀಡುವುದು ಅನಿವಾರ್ಯವಾಗಿದೆ.[ಗುರುವಾರದ ಸಾರಿಗೆ ಮುಷ್ಕರದ ಮುಖ್ಯಾಂಶಗಳು]

ಬೆಂಗಳೂರಿನಿಂದ ಹುಬ್ಬಳ್ಳಿ, ಮಂಗಳೂರು, ವಿಜಯಪುರ, ಕಲಬುರಗಿ, ಬೀದರ್ ಮುಂತಾದ ಕಡೆ ಸಾಗುವ ಸ್ಲೀಪರ್, ಸೆಮಿ ಸ್ಲೀಪರ್, ವೊಲ್ವೋ ಸೇರಿದಂತೆ ವಿವಿಧ ಬಸ್ಸುಗಳ ಪ್ರಯಾಣ ದರ ಹೆಚ್ಚಾಗಿದೆ. ಇಂದು ಕೆಎಸ್ಆರ್‌ಟಿಸಿ ಮುಷ್ಕರವಿರುವ ಅವಕಾಶವನ್ನು ಬಸ್ ಮಾಲೀಕರು ಬಳಸಿಕೊಳ್ಳುತ್ತಿದ್ದಾರೆ. [2015ರ ಸರ್ಕಾರಿ ರಜೆ ಪಟ್ಟಿ]
ಖಾಸಗಿ ಬಸ್ಸುಗಳಲ್ಲಿ 750 ರೂ. ಇರುವ ಪ್ರಯಾಣದರ 900 ರೂ.ಗೆ ಏರಿಕೆಯಾಗಿದೆ. 1,200 ರೂ. ಇರುವ ದರ 1,600 ರೂ. ವರೆಗೆ ಏರಿಕೆಯಾಗಿದ್ದು, ಜನರು ಹೆಚ್ಚು ಹಣ ಪಾವತಿ ಮಾಡುವುದು ಅನಿವಾರ್ಯವಾಗಿದೆ.
ಸರಣಿ ರಜೆ ಪಟ್ಟಿ
* ಮೇ 1 - ಕಾರ್ಮಿಕ ದಿನಾಚರಣೆ (ಶುಕ್ರವಾರ)
* ಮೇ 2 - ಶನಿವಾರ (ರಜೆ ಹಾಕಬೇಕು)
* ಮೇ 3 - ಭಾನುವಾರ


Click it and Unblock the Notifications
