• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೈಕಿನಲ್ಲಿ ಬಂದು ಕಿರುತೆರೆ ನಟಿಯ ಮೊಬೈಲ್ ಕದ್ದು ಕಳ್ಳರು ಎಸ್ಕೇಪ್

|

ಬೆಂಗಳೂರು, ಜೂನ್ 7: ಬಸ್‌ಗಳಲ್ಲಿ ಕಿಟಕಿ ಪಕ್ಕ ಕೂರುವಾಗ, ಮೈಮರೆತು ಮೊಬೈಲ್‌ನ್ನು ಹಿಡಿದು ರಸ್ತೆಯಲ್ಲಿ ನಡೆಯುವಾಗ, ಆಟೋದಲ್ಲಿ ಸಂಚರಿಸುವಾಗ, ಕಾರಿನಲ್ಲಿ ವಿಂಡೋ ತೆಗೆದಿರುವಾಗ ಎಷ್ಟು ಜಾಗ್ರತೆಯಿಂದ ಇದ್ದರೂ ಸಾಲದು.

ಎಚ್ಚರ ತಪ್ಪಿದರೆ ಈ ನಟಿಗಾಗಿದ್ದು ನಿಮಗೂ ಆಗುತ್ತದೆ. ಆಟೋದಲ್ಲಿ ಪ್ರಯಾಣ ಮಾಡುತ್ತಿದ್ದ ರಂಗಭೂಮಿ ಕಲಾವಿದೆ ಧಾರವಾಹಿ ನಟಿ ದೀಪಾ ರವಿಶಂಕರ್ ಅವರ ಮೊಬೈಲ್‌ನ್ನು ಬೈಕ್‌ನಲ್ಲಿ ಬಂದ ಕಳ್ಳರು ಮೊಬೈಲ್ ದೋಚಿ ಪರಾರಿಯಾಗಿದ್ದಾರೆ. ಈ ಬಗ್ಗೆ ದೀಪಾ ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಬೈಕ್ ಕಳ್ಳರ ಮಟ್ಟ ಹಾಕುತ್ತಿರುವ ಮೈಸೂರು ಪೊಲೀಸರು

ರಾತ್ರಿ 8.30ರ ಸುಮಾರಿಗೆ ಕೆಲಸದಿಂದ ಆಟೋದಲ್ಲಿ ಮನೆಗೆ ಹೊರಟಿದ್ದೆ ಆಟೋದ ಒಂದು ಬದಿಯಲ್ಲಿ ಕುಳಿತು ಮೊಬೈಲ್ ಅನ್ನು ಕೈಯಲ್ಲಿ ಹಿಡಿದುಕೊಂಡಿದ್ದೆ, ಆಗರಭಾವಿ ನಮ್ಮೂರ ತಿಂಡಿ ಹೋಟೆಲ್ ಬಳಿ ಸ್ವಲ್ಪ ದಟ್ಟಣೆಯಾಗಿ ವಾಹನಗಳು ನಿಧಾವಾಗಿ ಹೋಗುತ್ತಿದ್ದಾಗ ಬೈಕ್‌ನಲ್ಲಿ ಬಂದ ಇಬ್ಬರು ಮೊಬೈಲ್ ಕಸಿದುಕೊಂಡು ಎಸ್ಕೇಪ್ ಆಗಿದ್ದಾರೆ.

ಹಾಗಾಗಿ ಇದು ಎಲ್ಲರಿಗೂ ಎಚ್ಚರಿಕೆ ಗಂಟೆಯಾಗಬೇಕು. ಮೊಬೈಲ್ ನಲ್ಲಿ ಫೋಟೊಗಳು, ಇನ್ನಿತರೆ ಮಹತ್ವದ ಮಾಹಿತಿ ಇರುತ್ತದೆ, ಗೂಗಲ್ ಅಕೌಂಟ್ ಮೂಲಕ ಫೋಟೊಗಳನ್ನು ಅಳಿಸಿದರೂ ಕೂಡ ಎಷ್ಟು ಪ್ರಮಾಣದಲ್ಲಿ ಅವೆಲ್ಲರೂ ಅಳಿಸಿ ಹೋಗಿದೆ ಎನ್ನುವುದು ಗೊತಿಲ್ಲ ಎಂದು ದೀಪಾ ಹೇಳಿದ್ದಾರೆ.

English summary
Serial Actress Deepa Ravishankar Mobile phone was stolen while she travelling in Autorickshaw.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X