ನಿಮ್ಮ ಮುದ್ದು ಕೃಷ್ಣ ನಮ್ಮ ಗ್ಯಾಲರಿಯಲ್ಲಿ ಪ್ರತ್ಯಕ್ಷನಾಗಬೇಕೆ? ಹೀಗೆ ಮಾಡಿ
ಬೆಂಗಳೂರು, ಆಗಸ್ಟ್ 11: ಭಗವಾನ್ ಶ್ರೀಕೃಷ್ಣ ಎಂದರೆ ದೇವರು ಎಂಬ ಗೌರವಕ್ಕಿಂತ, ಆತ್ಮೀಯ ಸ್ನೇಹಿತ ಎಂಬ ಆಪ್ತತೆ! ಬೆಣ್ಣೆ ಕಳ್ಳ, ತನ್ನ ಸುತ್ತ ಗೋಪಿಕೆಯರು ಸುತ್ತುವಂತೆ ಮಾಡಿದ ರಸಿಕ, ಪಿಳ್ಳಂಗೋವಿ ನಾದದಲ್ಲೇ ರಾಧೆಯನ್ನು ಸೆಳೆದ ಮಾಂತ್ರಿಕ, ಕಂಸನಂಥ ಕ್ರೂರ ರಕ್ಕಸನನ್ನು ಎಳೆ ವಯಸ್ಸಿನಲ್ಲೇ ಕೊಂದ ದೈವತ್ವದ ಮೂರ್ತಿ.
ಇಂಥ ಶ್ರೀಕೃಷ್ಣನ ವೇಷವನ್ನು ನಿಮ್ಮ ಮಗುವಿಗೆ ಹಾಕಿ ಸಂಭ್ರಮಿಸುತ್ತಿದ್ದೀರಾ? ಹಾಗಾದರೆ ಆ ಚಿತ್ರ(ಹಳೆಯದಾದರೂ ಸರಿ)ವನ್ನು ನಮಗೂ ಕಳಿಸಿಕೊಡಿ. ನಿಮ್ಮ ಮುದ್ದುಕೃಷ್ಣ ನಮ್ಮ ಗ್ಯಾಲರಿಯಲ್ಲೂ ಪ್ರತ್ಯಕ್ಷನಾಗಲಿ.

ಆಗಸ್ಟ್ 14 ರ ಕೃಷ್ಣ ಜನ್ಮಾಷ್ಟಮಿಯಂದು ನಿಮ್ಮ ಪುಟ್ಟ ಕೃಷ್ಣನ ಚಿತ್ರ ನಮ್ಮ ಗ್ಯಾಲರಿಯಲ್ಲಿ ಮೂಡಿಬರಲಿದೆ, ನೀವು ಕೇಳಿರದ ದೇಶಗಳಿಗೂ ನಿಮ್ಮ ಮಗುವಿನ ಚಿತ್ರ ಕಾಣಿಸುವಂತೆ ಮಾಡುವುದು ನಮ್ಮ ಜವಾಬ್ದಾರಿ. ಹೆಚ್ಚು ಚಿತ್ರವಿದ್ದರೆ [email protected] ಗೆ ಇಮೇಲ್ ಮಾಡಿ, ಇಲ್ಲವೇ ಫೇಸ್ ಬುಕ್ ನಲ್ಲಿ ಮೆಸೇಜ್ ಮಾಡಿ.
ಮಗುವಿನ ಹೆಸರು, ಊರು, ಮಗುವಿನ ವಯಸ್ಸು, ತಂದೆ-ತಾಯಿಯ ಹೆಸರು ಚಿತ್ರದ ಜೊತೆಗಿರಲಿ. ಕೃಷ್ಣಾಷ್ಟಮಿಯ ದಿನ ನಿಮ್ಮ ಮುದ್ದು ಬೆಣ್ಣೆ ಕೃಷ್ಣ ನಮ್ಮ ಗ್ಯಾಲರಿಯಲ್ಲಿ ಪ್ರತ್ಯಕ್ಷನಾಗುತ್ತಾನೆ. ತಪ್ಪದೇ ನೋಡಿ...












Click it and Unblock the Notifications