ಶನಿವಾರ ಕ್ಯಾನ್ ಕ್ರಿಶ್ಚಿಯನ್ ಮೇಕ್ ಡಿಫರೆನ್ಸ್ ಸಂವಾದ
ಬೆಂಗಳೂರು, ಮಾ.1 : ಲೋಕಸಭೆ ಚುನಾವಣೆಯಲ್ಲಿ ಯಾವ ರಾಜಕೀಯ ಪಕ್ಷಗಳು ಕ್ರಿಶ್ಚಿಯನ್ನರ ಹಿತ ಕಾಪಾಡುತ್ತದೆ. ಕ್ರಿಶ್ಚಿಯನ್ನರ ಮೇಲೆ ಆಗುತ್ತಿರುವ ದೌರ್ಜನ್ಯ ತಪ್ಪಿಸಿ ಅವರ ಅಭಿವೃದ್ಧಿಗೆ ಸಹಕರಿಸುತ್ತದೆ ಎಂಬ ವಿಷಯದ ಕುರಿತು ಸಂವಾದ ಕಾರ್ಯಕ್ರಮವನ್ನು ಶನಿವಾರ ಏರ್ಪಡಿಸಲಾಗಿದೆ.
ಎಂಜಿ ರಸ್ತೆಯಲ್ಲಿರುವ St. Mark's Cathedral ಶನಿವಾರ ಸಂಜೆ 5.30ಕ್ಕೆ ಸರ್ವಪಕ್ಷಗಳ ಈ ಸಂವಾದ ಕಾರ್ಯಕ್ರಮವನ್ನು ಆಯೋಜಿಸಿದೆ. "CAN CHRISTIANS MAKE A DIFFERENCE?" ಎಂಬ ಶೀರ್ಷಿಕೆಯಡಿ ನಡೆಯುವ ಈ ಸಂವಾದ ಕಾರ್ಯಕ್ರಮದಲ್ಲಿ ವಿವಿಧ ಪಕ್ಷಗಳ ಮುಖಂಡರು ಭಾಗವಹಿಸಲಿದ್ದಾರೆ.

ಎಂಜಿ ರಸ್ತೆಯಲ್ಲಿರು St. Mark's Cathedral Resource Centreನಲ್ಲಿ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿದೆ. ಸಂಜೆ 5.30ರಿಂದ ರಾತ್ರಿ 9.30ರವರೆಗೆ ಕಾರ್ಯಕ್ರಮ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ಡೆವಿಡ್ ಅವರ 9342569764 ನಂಬರ್ ಗೆ ಕರೆ ಮಾಡಬಹುದಾಗಿದೆ.
ಸಂವಾದದಲ್ಲಿ ಭಾಗವಹಿಸುವವರು : ಈ ಸಂವಾದ ಕಾರ್ಯಕ್ರಮದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಎ.ಕೃಷ್ಣಪ್ಪ. ಮಾಜಿ ಕೇಂದ್ರ ಸಚಿವ ಎಂ.ವಿ.ರಾಜಶೇಖರನ್, ಶಾಂತಿನಗರ ಶಾಸಕ ಹ್ಯಾರೀಸ್, ಮಾಜಿ ಸಂಸದ ಎಚ್.ಟಿ.ಸಾಂಗ್ಲಿಯಾನ, ನಿವೃತ್ತ ನ್ಯಾ.ಎಂಎಫ್ ಸಲ್ಡನಾ, ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಭವನೀಯ ಅಭ್ಯರ್ಥಿ ನಂದನ್ ನಿಲೇಕಣಿ, ಪ್ರೊ.ರಾಜೀವ್ ಗೌಡ, ಕ್ಯಾಪ್ಟನ್ ಗೋಪಿನಾಥ್, ವಿ.ಬಾಲಕೃಷ್ಣನ್, ಬಿಜೆಪಿ ಪರವಾಗಿ ಮಾಜಿ ಸಚಿವ ಸುರೇಶ್ ಕುಮಾರ್, ಆಮ್ ಆದ್ಮಿ ಪಕ್ಷದ ಪೃಥ್ವಿ ರೆಡ್ಡಿ, ಆನಂದ್ ಯಾದವ್, ಆನಂದ್ ಜಾನಕಿರಾಮ್ ಮುಂತಾದವರು ಭಾಗವಹಿಸಲಿದ್ದಾರೆ.












Click it and Unblock the Notifications