NAMMA METRO: ಬೆಂಗಳೂರಿಗೆ ಬಂತು 'ನಮ್ಮ ಮೆಟ್ರೋ' ಎರಡನೇ ಡ್ರೈವರ್‌ಲೆಸ್‌ ರೈಲು: Yellow Line Updates

ಬೆಂಗಳೂರು, ಫೆಬ್ರವರಿ 09: ಬೆಂಗಳೂರಿನ ಜೀವನಾಡಿ ನಮ್ಮ ಮೆಟ್ರೋ ಸಾರಿಗೆಯ ಹೊಸ ಮಾರ್ಗವಾದ ಹಳದಿ ಮಾರ್ಗಕ್ಕೆ ಎರಡನೇ ಡ್ರೈವರ್‌ಲೆಸ್ ರೈಲು ಕೊನೆಗೂ ಬೆಂಗಳೂರಿಗೆ ಇಂದು ಭಾನುವಾರ (ಫೆಬ್ರವರಿ 09) ಬೆಳಗ್ಗೆ ತಲುಪಿದೆ. ಕೊಂಚ ವಿಳಂಬದ ಹೊರತಾಗಿ ರಸ್ತೆ ಮಾರ್ಗವಾಗಿ ಹೊಸ ರೈಲ್ವೆ ಕೋಚ್ ಬೆಂಗಳೂರು ತಲುಪಿದೆ ಎಂದು 'ಬೆಂಗಳೂರು ಮೆಟ್ರೋ ರೈಲು ನಿಗಮ' (BMRCL) ಮಾಹಿತಿ ನೀಡಿದೆ. ಹಾಗಾದರೆ ಹೊಸ ರೈಲು ಪರೀಕ್ಷೆ ಯಾವಾಗ? ಇಲ್ಲಿದೆ ಅಪ್ಡೇಟ್ ಮಾಹಿತಿ.

ನಮ್ಮ ಮೆಟ್ರೋ ಹಳದಿ ಮಾರ್ಗಕ್ಕೆ ನಿಯೋಜನೆಗೊಳ್ಳಲು ಕೊಲ್ಕತ್ತಾದ ಟಿಟಾಘರ್ ರೈಲ್ ಸಿಸ್ಟಮ್ ಕಂಪನಿಯಿಂದ ಜನವರಿ 06ರಂದು ಬೆಂಗಳೂರಿಗೆ ಪ್ರಯಾಣ ಬೆಳೆಸಿತ್ತು. ಜನವರಿ ಅಂತ್ಯಕ್ಕೆ ದೇಶಿಯ ಮೊದಲ ಡ್ರೈವರ್‌ಲೆಸ್ ರೈಲು ಬೆಂಗಳೂರಿಗೆ ಬರಲಿದೆ ಎನ್ನಲಾಗಿತ್ತು. ಕೊಂಚ ವಿಳಂಬದ ಬಳಿಕ ಇದೀಗ ಭಾನುವಾರ ಬೆಂಗಳೂರು ಮೆಟ್ರೋ ಡಿಪೋಗೆ ಆಗಮಿಸಿದೆ.

Second Train of Namma Metro s Yellow Line Arrived Bengaluru form TRSL Sent FKI BMRCL

ವರ್ಷದ ಹಿಂದೆ ಹಳದಿ ಮಾರ್ಗಕ್ಕೆ ಮೊದಲ ಚಾಲಕ ರಹಿತ ಮೆಟ್ರೋ ರೈಲು ಆಗಮಿಸಿತ್ತು. ಇದು ಎರಡನೇ ಮೆಟ್ರೋ ರೈಲು ಆಗಿದ್ದು, ದೇಶಿಯ ಮೊದಲ ಡ್ರೈವರ್‌ಲೆಸ್ ರೈಲು ಅಂತಲೂ ಕರೆಯಲಾಗುತ್ತಿದೆ. ಇನ್ನೊಂದು ವಾರದಲ್ಲಿ ಈ ರೈಲುಗಳನ್ನು ಪರೀಕ್ಷೆಗಾಗಿ ಹಳಿ ಮೇಲೆ ಜೋಡಿಸಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

1,900 ಕಿ.ಮೀ. ಕ್ರಮಿಸಿದ 6 ಬೋಗಿಗಳು

ಕೊಲ್ಕತ್ತಾದ ಟಿಟಾಘರ್ ಕಂಪನಿಯಿಂದ ಕರ್ನಾಟಕದ ಬೆಂಗಳೂರಿಗೆ 1,900 ಕಿಲೋಮೀಟರ್ ಕ್ರಮಿಸಿದ ರೈಲ್ ಹೊತ್ತಿ ಲಾರಿ ಇಂದು ಬೆಂಗಳೂರಿನ ಹೆಬ್ಬಗೋಡಿ ಡಿಪೋ ಪ್ರವೇಶಿಸುವ ವಿಡಿಯೋವನ್ನು BMRCL ಹಂಚಿಕೊಂಡಿದೆ. ಹಳದಿ ಮಾರ್ಗದ ಎರಡನೇ ರೈಲಿನ ಮೊದಲ ಕೋಚ್ ಬೆಳಗ್ಗೆ 8.30 ರ ಸುಮಾರಿಗೆ ಮೆಟ್ರೋ ಡಿಪೋ ಪ್ರವೇಶಿಸುತ್ತಿರುವುದು ವಿಡಿಯೋದಲ್ಲಿದೆ. ಒಟ್ಟು ಆರು ಬೋಗಿಗಳ ಒಂದು ರೈಲ್ ಸೆಟ್ ಇದಗಿದೆ.

ಮಾರ್ಚ್ ಮೊದಲ ವಾರ ಗುಡ್‌ನ್ಯೂಸ್

ಬಹುನಿರೀಕ್ಷೆಯ 18.50 ಕಿಲೋ ಮೀಟರ್ ವ್ಯಾಪ್ತಿಯ ಮೆಟ್ರೋ ಹಳದಿ ಮಾರ್ಗವು ಯಾವಾಗ ತೆರೆಯಲಿದೆ ಎಂದು ಪ್ರಯಾಣಿಕರು ಕಾತರರಿಂದ ಕಾಯುತ್ತಿದ್ದರು. ಆ ಸಮಯ ಇದೀಗ ಹತ್ತಿರವಾಗಿದೆ. ಹೊಸ ರೈಲು ಹಳಿಗೆ ಜೋಡಿಸುತ್ತಿದ್ದಂತೆ ಮಾರ್ಚ್ ಮೊದಲ ವಾರ ಪರೀಕ್ಷೆಗಳು ಆರಂಭವಾಗಲಿವೆ. ಹೊಸ ರೈಲು ಸರಿಯಾಗಿ ಸಿಗ್ನಲ್ ಪಡೆದುಕೊಂಡು ಕಾರ್ಯ ನಿರ್ವಹಿಸಲಿದೆಯಾ?, ಪ್ರಯಾಣಿಕರ ಸುರಕ್ಷತೆ, ಡೋರ್ ಲಾಕಿಂಗ್, ರನ್ನಿಂಗ್ ವ್ಯವಸ್ಥೆ ಸೇರಿದಂತೆ ಅಗತ್ಯ ಎಲ್ಲ ಪರೀಕ್ಷೆಗಳು ನಡೆಯಲಿವೆ.

ಮಾರ್ಚ್ ಅಂತ್ಯಕ್ಕೆ ಹಳದಿ ಮಾರ್ಗ ಪ್ರಯಾಣಿಕರಿಗೆ ಮುಕ್ತ?

ಜಯನಗರದ ಆರ್‌.ವಿ. ರಸ್ತೆಯಿಂದ ಸಿಲ್ಕಬೋರ್ಡ್ ಮಾರ್ಗವಾಗಿ ಎಲೆಕ್ಟ್ರಾನಿಕ್ ಸಿಟಿ ಹಾದು ಬೊಮ್ಮಸಂದ್ರ ತಲುಪುವ ಮಾರ್ಗ ಇದಾಗಿದೆ. ಈ ಮಾರ್ಗದಲ್ಲಿ ವಾಣಿಜ್ಯ ಕಾರ್ಯಾಚರಣೆಗೆ ದಿನಗಣನೇ ಶುರುವಾಗಿದೆ. ಯಾವಾಗ ಆರಂಭ ಎಂಬ ಬಗ್ಗೆ ಬೆಂಗಳೂರು ಮೆಟ್ರೋ ಅಧಿಕಾರಿಗಳು ಮಾಹಿತಿ ನೀಡಬೇಕು. ಮೂಲಗಳ ಪ್ರಕಾರ, ಮಾರ್ಚ್ ಅಂತ್ಯಕ್ಕೆ ಹಾಲಿ ಮೆಟ್ರೋ ರೈಲುಗಳು ಮೂಲಕವೇ ಕಾರ್ಯಾಚರಣೆ ಆರಂಭಿಸುವ ನಿರೀಕ್ಷೆ ಇದೆ.

ಮೂರನೇ ರೈಲು ಬೆಂಗಳೂರು ಆಗಮನ ಯಾವಾಗ?

ಬೆಂಗಳೂರಿಗೆ ಎರಡನೇ ಚಾಲಕರಹಿತ ರೈಲು ಆಗಮಿಸಿದೆ. ಒಪ್ಪಂದದಂತೆ ಇನ್ನು ಮುಂದಿನ ದಿನಗಳಲ್ಲಿ ರೈಲು ಪೂರೈಕೆಯಲ್ಲಿ ವೇಗ ಸಿಗಲಿದೆ. ಮಾರ್ಚ್ ಅಂತ್ಯಕ್ಕೆ ಮೂರನೇ ಮೆಟ್ರೋ ರೈಲು ಹೆಬ್ಬಗೋಡಿ ಮೆಟ್ರೋ ಡಿಪೋಗೆ ಆಗಮಿಸಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ (BMRCL)ಮಾಹಿತಿ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+