ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸೀಲ್ ಡೌನ್; ಕೆ. ಆರ್. ಮಾರ್ಕೆಟ್‌ಗೆ ಮೇಯರ್ ಭೇಟಿ

|
Google Oneindia Kannada News

ಬೆಂಗಳೂರು, ಜೂನ್ 23 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕೆ. ಆರ್. ಮಾರ್ಕೆಟ್, ಕಲಾಸಿಪಾಳ್ಯ ಪ್ರದೇಶಗಳನ್ನು ಸೀಲ್ ಡೌನ್ ಮಾಡಲು ಸೋಮವಾರ ಆದೇಶ ನೀಡಿತ್ತು. ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

Recommended Video

ಪೌರಕಾರ್ಮಿಕರು ನೀರು ಕೇಳಿದ್ದಕ್ಕೆ ಅಮಾನವೀಯವಾಗಿ ನಡೆದುಕೊಂಡ‌ ಮಹಿಳೆ | Oneindia Kannada

ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಜೊತೆಗಿನ ಸಭೆಯ ಬಳಿಕ ಬೆಂಗಳೂರು ನಗರದ 5 ಪ್ರದೇಶಗಳನ್ನು ಸೀಲ್ ಡೌನ್ ಮಾಡಿ ಬಿಬಿಎಂಪಿ ಆದೇಶ ಹೊರಡಿಸಿತ್ತು. ಸೀಲ್ ಕಟ್ಟುನಿಟ್ಟಾಗಿ ಜಾರಿಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಬಿಬಿಎಂಪಿ ಸೂಚನೆ ನೀಡಿದೆ.

ಕೊರೊನಾ ಸೃಷ್ಠಿಸಿದ ಚೀನಾದ 'ಡೆಡ್ಲಿ ಮಾರ್ಕೆಟ್' ಮತ್ತೆ ಆರಂಭ ಕೊರೊನಾ ಸೃಷ್ಠಿಸಿದ ಚೀನಾದ 'ಡೆಡ್ಲಿ ಮಾರ್ಕೆಟ್' ಮತ್ತೆ ಆರಂಭ

ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ಜೈನ್ ಮಂಗಳವಾರ ಕೆ. ಆರ್. ಮಾರುಕಟ್ಟೆ ಮತ್ತು ಕಲಾಸಿಪಾಳ್ಯ ಪ್ರದೇಶಗಳಲ್ಲಿ ಪರಿಶೀಲನೆ ನಡೆಸಿದರು. ಸೀಲ್ ಡೌನ್ ಹೇಗೆ ಜಾರಿಯಲ್ಲಿದೆ? ಎಂದು ಅಧಿಕಾರಿಗಳ ಜೊತೆ ಚರ್ಚೆ ನಡೆಸಿದರು.

ಬೆಂಗಳೂರು; ಕ್ವಾರಂಟೈನ್ ಕೇಂದ್ರದಲ್ಲಿ ಲೈಂಗಿಕ ಕಿರುಕುಳ, ವ್ಯಕ್ತಿ ಬಂಧನ ಬೆಂಗಳೂರು; ಕ್ವಾರಂಟೈನ್ ಕೇಂದ್ರದಲ್ಲಿ ಲೈಂಗಿಕ ಕಿರುಕುಳ, ವ್ಯಕ್ತಿ ಬಂಧನ

ಕೆ. ಆರ್. ಮಾರ್ಕೆಟ್ ಸೇರಿದಂತೆ ನಗರದಲ್ಲಿ ಅತಿ ಹೆಚ್ಚು ಪ್ರಕರಣಗಳು ಇರುವ ಪ್ರದೇಶಗಳನ್ನು ಬಿಬಿಎಂಪಿ ಸೀಲ್ ಡೌನ್ ಮಾಡಿದೆ. ಬ್ಯಾರಿಕೇಡ್‌ಗಳನ್ನ ಹಾಕಿ ರಸ್ತೆಗಳನ್ನು ಬಂದ್ ಮಾಡಲಾಗುತ್ತಿದೆ. ಜನರ ಸಂಚಾರವನ್ನು ಕಟ್ಟುನಿಟ್ಟಾಗಿ ಸ್ಥಗಿತಗೊಳಿಸಲಾಗಿದೆ.

Fact Check: ಚೀನಾ ಷೇರು ಮಾರ್ಕೆಟ್ ನಲ್ಲಿ ಅಮೆರಿಕ ಡಾಲರ್ ನಡೆಯಲ್ಲವಾ? Fact Check: ಚೀನಾ ಷೇರು ಮಾರ್ಕೆಟ್ ನಲ್ಲಿ ಅಮೆರಿಕ ಡಾಲರ್ ನಡೆಯಲ್ಲವಾ?

ಬಿಬಿಎಂಪಿ ಮೇಯರ್ ಭೇಟಿ

ಬಿಬಿಎಂಪಿ ಮೇಯರ್ ಭೇಟಿ

ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ಜೈನ್ ಮಂಗಳವಾರ ಕಲಾಸಿಪಾಳ್ಯ, ಕೆ. ಆರ್. ಮಾರುಕಟ್ಟೆ ರಸ್ತೆ ಮಾರ್ಗ ಮುಂತಾದ ಕಡೆ ಬ್ಯಾರಿಕೇಡ್ ಅಳವಡಿಸುವ ಕಾರ್ಯವನ್ನು ವೀಕ್ಷಣೆ ಮಾಡಿದರು. ಈ ಪ್ರದೇಶಗಳನ್ನು ಬಿಬಿಎಂಪಿ ಸೀಲ್ ಡೌನ್ ಮಾಡಿದೆ.

ವ್ಯಾಪಾರ ವಹಿವಾಟು ಬಂದ್

ವ್ಯಾಪಾರ ವಹಿವಾಟು ಬಂದ್

ಕೆ. ಆರ್. ಮಾರುಕಟ್ಟೆ ಮತ್ತು ಕಲಾಸಿಪಾಳ್ಯದಲ್ಲಿ ವ್ಯಾಪಾರ ಮಾಡದಂತೆ ನಿಗಾವಹಿಸುವ, ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಕಟ್ಟುನಿಟ್ಟಾಗಿ ಸೀಲ್ ಡೌನ್ ಅನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಹಲವು ಪ್ರದೇಶಗಳು ಸೀಲ್ ಡೌನ್

ಹಲವು ಪ್ರದೇಶಗಳು ಸೀಲ್ ಡೌನ್

ಮುಖ್ಯಮಂತ್ರಿ ಯಡಿಯೂರಪ್ಪ ಜೊತೆಗಿನ ಸಭೆಯ ಬಳಿಕ ಬಿಬಿಎಂಪಿ ಕೆ. ಆರ್. ಮಾರುಕಟ್ಟೆ, ವಿವಿ ಪುರ, ಸಿದ್ದಾಪುರ, ಕಲಾಸಿಪಾಳ್ಯ, ಚಾಮರಾಜಪೇಟೆ, ಚಿಕ್ಕಪೇಟೆ ಪ್ರದೇಶಗಳನ್ನು ಸೀಲ್ ಡೌನ್ ಮಾಡಿ ಆದೇಶ ಹೊರಡಿಸಿದೆ. ಈ ಪ್ರದೇಶದಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಕರಣ ಹೆಚ್ಚಿರುವುದರಿಂದ ಸೀಲ್ ಡೌನ್ ಮಾಡಲಾಗಿದೆ.

ಜನರ ಸಂಚಾರ ನಿಷೇಧ

ಜನರ ಸಂಚಾರ ನಿಷೇಧ

ಸೀಲ್ ಡೌನ್ ಮಾಡಿರುವ ಪ್ರದೇಶದಲ್ಲಿ ಜನರ ಸಂಚಾರವನ್ನು ಸಂಪೂರ್ಣ ರದ್ದುಗೊಳಿಸಲಾಗಿದೆ. ಒಂದು ವೇಳೆ ಯಾರಾದರೂ ಸಂಚಾರ ನಡೆಸಿದರೆ ರೆಸಿಡೆಂಟ್ ವೆಲ್ ಫೇರ್ ಅಸೋಸಿಯೇಶನ್ ಮಾಹಿತಿ ನೀಡಬೇಕು ಎಂದು ಬಿಬಿಎಂಪಿ ತನ್ನ ಆದೇಶದಲ್ಲಿ ತಿಳಿಸಿದೆ.

English summary
Bruhat Bengaluru Mahanagara Palike (BBMP) mayor M. Goutham Kumar jain visited the K.R.Market, Kalasipalya. BBMP ordered to seal down K.R.Market after more numbers of COVID -19 cases found.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X