ಜಲ ಜಾಗೃತಿಗೆ ವಿಶೇಷ 'ಸಬ್‌ಮರ್ಜ್' ಪ್ರದರ್ಶನ ಮೇಳ
ಬೆಂಗಳೂರು, ಡಿಸೆಂಬರ್ 17:ನೀರಿನ ಸಂರಕ್ಷಣೆ ಕುರಿತು ಸ್ಮಿತ್ ಸೋನಿಯನ್ ಅಂಡ್ ಸ್ಮಿತ್ ಸೋನಿಯನ್ ಟ್ರಾವೆಲ್ ಎಕ್ಸಿಬಿಷನ್ ಸರ್ವೀಸ್ ಕಂಪನಿ ಹಾಗೂ ಸೈನ್ಸ್ ಗ್ಯಾಲರಿ ಬೆಂಗಳೂರು ಸಂಸ್ಥೆಯ ಸಹಯೋಗದಲ್ಲಿ 45 ದಿನಗಳ ವಿಶೇಷ ಪ್ರದರ್ಶನ ಮೇಳೆ ಆಯೋಜಿಸಲಾಗಿದೆ.
ಮುಂದಿನ 45 ದಿನಗಳ ಕಾಲ ನಡೆಯಲಿರುವ ಈ ಪ್ರದರ್ಶನ ಮೇಳದಲ್ಲಿ ನೀರಿನ ಸಂರಕ್ಷಣೆ ಕುರಿತಂತೆ ಪ್ರದರ್ಶನ ಮೇಳದಲ್ಲಿ ವಿಭಿನ್ನ ಮಾದರಿಗಳನ್ನು ಪ್ರಸ್ತುತಪಡಿಸಲಾಗುತ್ತದೆ.
ನೀರಿನ ಅಗತ್ಯ, ಬಳಕೆ ಹಾಗೂ ನೀರಿನ ಸಂರಕ್ಷಣೆ ಮಾಡದಿದ್ದರೆ ಮುಂದೆ ಎದುರಿಸಬೇಕಾಗಬಹುದಾದ ಸವಾಲುಗಳ ಕುರಿತು ಮಕ್ಕಳಿಗೆ , ಸಾರ್ವಜನಿಕರಿಗೆ ಅರಿವು ಮೂಡಿಸಲಾಗುತ್ತದೆ.

ಇದಕ್ಕಾಗಿಯೇ ಸುಮಾರು 12 ವಿಶೇಷ ಮಾದರಿಗಳನ್ನು ಸಂಸ್ಥೆ ಪ್ರದರ್ಶನ ಮೇಳದಲ್ಲಿ ಇರಿಸಿದೆ.
ಈ ಕಾರ್ಯಕ್ರಮದ ಕುರಿತು ಮಾತನಾಡಿರುವ ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಐಎನ್ಎಸ್ ಪ್ರಸಾದ್ ದೇಶ ಹಾಗೂ ಬೆಂಗಳೂರು ನಗರಕ್ಕೆ ನೀರಿನ ರಕ್ಷಣೆ ಅತಿ ಪ್ರಮುಖ ಕಾರ್ಯವಾಗಿದೆ.
ಬೆಂಗಳೂರು ನಾಗರಿಕರು ಅದರಲ್ಲೂ ವಿಶೇಷವಾಗಿ ಯುವಜನತೆಯಲ್ಲಿ ನೀರಿನ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಈ ಕಾರ್ಯಕ್ರಮ ಪ್ರಮುಖ ಪಾತ್ರವಹಿಸಲಿದೆ ಎಂದಿದ್ದಾರೆ.
ವಿಜ್ಞಾನವನ್ನು ಜನರ ಬಳಿಗೆ ತಂದು ನೀರಿನ ರಕ್ಷಣೆ ಹೇಗೆ ಮಾಡಬಹುದು ಎನ್ನುವುದನ್ನು ಸಂಸ್ಥೆ ಮಾಡಿ ತೋರಿಸುತ್ತಿದೆ. ಇದು ಬೆಂಗಳೂರಿಗೆ ಹೊಸ ಟ್ರೇಡ್ ಮಾರ್ಕ್ ಆಗಲಿದೆ ಎಂದು ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಷಾ ಹೇಳಿದ್ದಾರೆ.
ಈ ಪ್ರದರ್ಶನದಲ್ಲಿ 12 ವಿಭಿನ್ನ ಮಾದರಿ ತಯಾರಿಸಲಾಗಿದ್ದು, ಇದರಲ್ಲಿ ನೀರನ್ನು ಭೂಮಿಯ ಒಂದು ಸಂಪನ್ಮೂಲದ ಹೊರತಾಗಿಯೂ ವಿಭಿನ್ನ ಅಗತ್ಯದ ಬಗ್ಗೆ ವಿವರಿಸಲಾಗಿದೆ. ಈ ಪ್ರದರ್ಶನ ಮೇಳದಲ್ಲಿ ಕಾರ್ಯಾಗಾರ, ಸರಣಿ ಉಪನ್ಯಾಸ ತರಗತಿಗಳು ಇರಲಿವೆ.
ಈ ಕಾರ್ಯಾಗಾರವು ಡಿಸೆಂಬರ್ 15ರಂದು ಆರಂಭವಾಗಿದ್ದು, ಜನವರಿ 30ರವರೆಗೆ ದೊಮ್ಮಲೂರಿನ ಬೆಂಗಳೂರು ಇಂಟರ್‌ನ್ಯಾಷನಲ್ ಸೆಂಟರ್‌ನಲ್ಲಿ ನಡೆಯಲಿದೆ.
ಸೋಮವಾರದಿಂದ ಶುಕ್ರವಾರದವರೆಗೆ ಮಧ್ಯಾಹ್ನ 1ರಿಂದ ರಿಂದ ರಾತ್ರಿ 9 ವಾರಾಂತ್ಯದಲ್ಲಿ ಬೆಳಗ್ಗೆ 11ರಿಂದ ರಾತ್ರಿ 9ರವರೆಗೆ ನಡೆಯಲಿದೆ.












Click it and Unblock the Notifications