• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸುಪ್ರೀಂಕೋರ್ಟ್ ಗುರಾಣಿ; ದೀಪಾವಳಿಗೆ ಸಿಡಿಯದ ಪಟಾಕಿ

|

ಬೆಂಗಳೂರು, ನವೆಂಬರ್ 6: ಪಟಾಕಿ ಇಲ್ಲದಿದ್ದರೆ ಅದು ದೀಪಾವಳಿಯೆಂದೇ ಎನಿಸುವುದಿಲ್ಲ, ದೀಪಾವಳಿ ದೀಪಗಳ ಹಬ್ಬವಾದರೂ ಪಟಾಕಿಯೂ ಅದರ ಒಂದು ಭಾಗವಾಗಿದೆ.

ದೀಪಾವಳಿ ವಿಶೇಷ ಪುರವಣಿ

ಆದರೆ ಸುಪ್ರೀಂಕೋರ್ಟ್ ನಿರ್ದೇಶನದ ಮೇರೆಗೆ ರಾಜ್ಯ ಸರ್ಕಾರ ವಿಧಿಸಿರುವ ಕೆಲವು ಷರತ್ತುಗಳಿಂದ ಪಟಾಕಿ ವ್ಯಾಪಾರ ಕ್ಷೀಣಿಸಿದೆ. ಸಾರ್ವಜನಿಕರು ಪಟಾಕಿಯನ್ನು ಖರೀದಿಸಲು ಹಿಂಜರಿಯುತ್ತಿದ್ದಾರೆ. ರಾತ್ರಿ 8 ರಿಂದ 10 ರವರೆಗೆ ಮಾತ್ರ ಪಟಾಕಿ ಸಿಡಿಸಬೇಕು ಎಂದು ರಾಜ್ಯ ಸರ್ಕಾರ ಸೂಚನೆ ನೀಡಿದೆ.

ಪಟಾಕಿ ಮಾರಾಟಕ್ಕೆ ನಿಷೇಧವಿಲ್ಲ, ಸುಪ್ರೀಂ ವಿಧಿಸಿದ ಷರತ್ತುಗಳೇನು?

ಈ ಬಾರಿ ಪಟಾಕಿ ಮಳಿಗೆ ಸ್ಥಾಪನೆಗೆ ಪಾಲಿಕೆ ಅಂದಾಜು 200 ಲೈಸೆನ್ಸ್ ನೀಡಿದೆ. ಆದರೆ ಪರವಾನಗಿ ಪಡೆದರೂ ವ್ಯಾಪಾರದಲ್ಲಿ ಲಾಭ ಕಾಣಿಸುತ್ತಿಲ್ಲ, ಹಿಂದಿನ ವರ್ಷಗಳಲ್ಲಿ ಹಬ್ಬದ ಮುಂಚಿತವಾಗಿಯೇ ಪಟಾಕಿಗಳನ್ನು ಕೊಂಡುಕೊಳ್ಳುತ್ತಿದ್ದರು. ಈ ಬಾರಿ ಸಾರ್ವಜನಿಕರು ಪಟಾಕಿ ಖರೀದಿಗೆ ಹೆಚ್ಚು ವಲವು ತೋರಿಸುತ್ತಿಲ್ಲ.

ಚೀನಾ ಪಟಾಕಿಗೆ ಬಹಿಷ್ಕಾರ ಹಾಕಿ ದೀಪಾವಳಿ ಆಚರಿಸಿದ ಮಂಗಳೂರಿಗರು

ಪಟಾಕಿ ವ್ಯಾಪಾರ ಕಡಿಮೆ ಆಗಿರುವ ಹಿನ್ನೆಲೆಯಲ್ಲಿ ಪಟಾಕಿಗಳಿಗೆ ಶೇ.50ರಷ್ಟು ರಿಯಾಯಿತಿ ನೀಡಲಾಗಿದೆ. ನಿರ್ಬಂಧದ ಹಿನ್ನೆಲೆಯಲ್ಲಿ ಕಡಿಮೆ ಶಬ್ದ ಬರುವ ಪಟಾಕಿಗಳನ್ನು ಮಾತ್ರ ಖರೀದಿಸಲಾಗುತ್ತಿದೆ. ಸ್‌ಪಾರ್ಕಲ್ಸ್, ಸ್ಕೈಲಾಂಟರ್ನ್, ಗ್ರ್ಯಾಂಡ್ ಚಕರ್ ಮಾತ್ರ ಖರೀದಿಸುತ್ತಿದ್ದಾರೆ.

English summary
Recent supreme court's restriction order on bursting crackers only between 8pm to 10pm has hit crackers business during this Deepavali festival.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X