'ತತ್ಕಾಲ ಯೋಜನೆ' ಜಾರಿಗೆ ತಂದ ಎಸ್‌ಬಿಐ
ಬೆಂಗಳೂರು, ಜು, 04 : ನೀವು ಹೊಸ ಮನೆ ನಿರ್ಮಿಸಲು ಆಲೋಚಿಸುತ್ತಿದ್ದೀರಾ? ಅದಕ್ಕೆ 10 ದಿನಗಳ ಒಳಗಾಗಿ ಸಾಲ ಬೇಕಾ? ಸಾಲ ತೆಗೆದುಕೊಳ್ಳೋದು ಎಲ್ಲಿ ಅಂತಿದ್ದೀರಾ? ಬ್ಯಾಂಕ್‌ಗಳಿಂದ ಲೋನ್ ತೆಗೆದುಕೊಳ್ಳೋದೇ ದೊಡ್ಡ ತಲೆನೋವಾಗಿದೆಯಾ? ಇನ್ಮುಂದೆ ಈ ಸಮಸ್ಯೆ ಮಂಜಿನಂತೆ ಹಗುರ ಆಗಲಿದೆ.
ಹೇಗೆ ಅಂತಿದ್ದೀರಾ? ಅತಿಹೆಚ್ಚು ಬಂಡವಾಳ ತೊಡಗಿಸುವಲ್ಲಿ ಭಾರತದಲ್ಲಿ ಹೆಸರುವಾಸಿಯಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 'ತತ್ಕಾಲ್ ಯೋಜನೆ' ಅಡಿಯಲ್ಲಿ 10 ದಿನಗಳ ಒಳಗಾಗಿ ಗ್ರಾಹಕರಿಗೆ ಲೋನ್ ನೀಡಲು ಮುಂದಾಗಿದ್ದು. ಈ ಯೋಜನೆಯನ್ನು ಶುಕ್ರವಾರ ಜಾರಿಗೆ ತಂದಿದೆ.

ಮನೆ ಲೋನ್ ಪಡೆಯಲು ಇಚ್ಚಿಸುವವರು ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಬೃಹತ್ ಮನೆ ಸಾಲ ನೀಡಲು ಮುಂದಾಗಿರುವ ಬ್ಯಾಂಕ್ ಒಟ್ಟು 16,60,000 ಕೋಟಿ ಬಂಡವಾಳ ಹೂಡಿದ್ದು, ಗ್ರಾಹಕರಿಗೆ ತಮ್ಮ ಸೇವೆ ನೀಡಲು ಯೋಜನೆ ರೂಪಿಸಿದೆ. ಸದ್ಯದಲ್ಲಿಯೇ ಮನೆ ಲೋನ್ ಅರ್ಜಿಗಾಗಿ ಆನ್‌ಲೈನ್ ಕಸ್ಟಮರ್ ಅಕ್ಯೂಶನ್ ಸಲ್ಯೂಷನ್ (0CAS) ಎಂಬ ಇ- ಅನುಮೋದನೆಯನ್ನು ಪರಿಚಯಿಸಲಿದೆ.












Click it and Unblock the Notifications