ಮಧ್ಯರಾತ್ರಿಯಲ್ಲಿ ಮಿಲ್ಕಾ ಜತೆ 'ಭಾಗ್ ಬೆಂಗಳೂರು ಭಾಗ್ '

ಬೆಂಗಳೂರು, ಡಿ.4: ರೋಟರಿ ಬೆಂಗಳೂರು ಐಟಿ ಕಾರಿಡಾರ್ ಸಹಯೋಗದೊಂದಿಗೆ ಡಿಸೆಂಬರ್ 14 ರಂದು ವೈಟ್ ಫಿಲ್ಡ್ ನಲ್ಲಿ ಎಸ್ ಬಿಐ ಬೆಂಗಳೂರು ಮಿಡ್ ನೈಟ್ ಮ್ಯಾರಥಾನ್ 2013 ಹಮ್ಮಿಕೊಳ್ಳಲಾಗಿದೆ. ಮ್ಯಾರಥಾನ್ ನ ರಾಯಭಾರಿಯಾಗಿ ಫ್ಲೈಯಿಂಗ್ ಸಿಖ್ ಮಿಲ್ಕಾ ಸಿಂಗ್ ಅವರು ಪಾಲ್ಗೊಳ್ಳುತ್ತಿದ್ದಾರೆ.

ಮ್ಯಾರಥಾನ್ ನಲ್ಲಿ ಸರಕಾರೇತರ ಸಂಸ್ಥೆಗಳು, ಕಾರ್ಪೋರೇಟ್ ಸಂಸ್ಥೆಗಳು ಸೇರಿದಂತೆ ಸಾವಿರಾರು ಮಂದಿ ಓಟಗಾರರು ಪಾಲ್ಗೊಳ್ಳಲಿದ್ದು, ಪರಿಸರ, ಆರೋಗ್ಯ, ಸಮುದಾಯ ಕಲ್ಯಾಣ ವೃತ್ತಿಪರ ಸೇವೆಗಳಿಗೆ ನಿಧಿ ಸಂಗ್ರಹಿಸಲು ಮಿಡ್ ನೈಟ್ ಮ್ಯಾರಥಾನ್ ಆಯೋಜಿಸಲಾಗಿದೆ ಎಂದು Rotary Bangalore IT Corridor (RBITC) ಅಧ್ಯಕ್ಷ ರಾಜೀವ್ ರಾಯ್ ಮಾಧ್ಯಮ ಪ್ರತಿನಿಧಿಗಳಿಗೆ ವಿವರಿಸಿದ್ದಾರೆ.

Milkha Singh is BMM brand ambassador
ಈ ಹಿಂದೆ ನಡೆದ ಮ್ಯಾರಥಾನ್ ನಲ್ಲಿ ಜನರಲ್ಲಿ ಜಾಗೃತಿ ಮೂಡಿಸಲು ವೈಟ್ ಫಿಲ್ಡ್ ನಲ್ಲಿ 1 ಲಕ್ಷ ಸಸಿಗಳನ್ನು ನೆಡುವ ಯೋಜನೆ ಹಾಕಿಕೊಳ್ಳಲಾಗಿತ್ತು. ಸಂಗ್ರಹವಾಗುವ ನಿಧಿಯಲ್ಲಿ ಉಚಿತ ಕಣ್ಣಿನ ಶಸ್ತ್ರ ಚಿಕಿತ್ಸೆ, ಸಾರ್ವಜನಿಕ ಶೌಚಾಲಯಗಳ ನಿರ್ಮಾಣ, ಶಾಲೆಗಳಲ್ಲಿ ಮಧ್ಯಾಹ್ನದ ಊಟ, ವಿದ್ಯಾರ್ಥಿ ವೇತನ, ವೃತ್ತಿಪರ ತರಬೇತಿ ಕಾರ್ಯಾಗಾರ ನಡೆಸಲಾಯಿತು ಎಂದು ರಾಜೀವ್ ರಾಯ್ ಹೇಳಿದ್ದಾರೆ. [ಭಾಗ್ ಮಿಲ್ಕಾ ಭಾಗ್ ಚಿತ್ರ ವಿಮರ್ಶೆ ಓದಿ]

2007ರಿಂದ RBITC ವಿವಿಧ ವಿಭಾಗಗಳಲ್ಲಿ ಮ್ಯಾರಥಾನ್ ನಡೆಸುತ್ತಾ ಬಂದಿದೆ. 42 ಕಿಮೀ ಮಧ್ಯರಾತ್ರಿ ಮ್ಯಾರಥಾನ್ ಓಟ, 21 ಕಿಮೀ ಅರ್ಧ ಮ್ಯಾರಥಾನ್ ಓಟ ನಡೆಯಲಿದೆ. ಇದರಲ್ಲಿ ಯಾರಾದರೂ ಪಾಲ್ಗೊಳ್ಳಬಹುದು. ಮ್ಯಾರಥಾನ್ ಗೆ ಹೆಸರು ನೋಂದಾಯಿಸಲು ವೆಬ್ ತಾಣ ಇಲ್ಲಿ ಕ್ಲಿಕ್ ಮಾಡಿ

ಎಸ್ ಬಿಐ ಪ್ರಮುಖ ಪ್ರಾಯೋಜಕತ್ವ ವಹಿಸಿಕೊಂಡಿದ್ದಾರೆ. 10K ರನ್ ಟಾರ್ಗೆಟ್ ಕಾರ್ಪೋರೇಷನ್, ಐಟಿ ಸಿಟಿ ರನ್ ಗೆ ಶಿನೈಡರ್ ಎಲೆಕ್ಟ್ರಿಕ್, ಸಮುದಾಯ ರಿಲೇಗೆ ನಂಬಿಯಾರ್ ಬಿಲ್ಡರ್ಸ್, ಸಿಎಕ್ಸ್ ಒ ಪವರ್, ಕೇರ್ ವೆಲ್, ಮಣಿಪಾಲ್, ಫಿವರ್ 104 ಎಫ್ ಎಂ ವಾಹಿನಿ, ಮಹೀಂದ್ರಾ ರೇವಾ ಮುಂತಾದ ಸಂಸ್ಥೆಗಳು ಇನ್ನಿತರ ಪ್ರಾಯೋಜಕ, ಸಹಯೋಗ ಸಂಸ್ಥೆಗಳಾಗಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+