ಹಂಪಿ ಉತ್ಸವನೂ ಮಾಡ್ತೇವೆ, ಕೊಡಗು ಪುನರ್ ನಿರ್ಮಾಣವೂ ಆಗುತ್ತೆ: ಸಾರಾ ಮಹೇಶ್
ಬೆಂಗಳೂರು, ಡಿಸೆಂಬರ್ 6: ರಾಜ್ಯ ಸರ್ಕಾರ ಈ ವರ್ಷ ಹಂಪಿ ಉತ್ಸವವನ್ನೂ ಮಾಡುತ್ತದೆ ಅದೇ ರೀತಿ ಕೊಡಗು ಪುನರ್ ನಿರ್ಮಾಣ ಕಾರ್ಯವನ್ನೂ ಕೈಗೆತ್ತಿಕೊಳ್ಳುತ್ತದೆ. ಹಂಪಿ ಉತ್ಸವದ ಹೆಸರಿನಲ್ಲಿ ಯಾರೂ ದೇಣಿಗೆ ಸಂಗ್ರಹಿಸುವುದು ಬೇಡ ಎಂದು ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಚಿವ ಜನಾರ್ದನ ರೆಡ್ಡಿ ಹೇಳಿಕೆಗೆ ತಿರುಗೇಟು ನೀಡಿ, ಪ್ರಕೃತಿ ವಿಕೋಪಗಳು ಸಂಭವಿಸಿದಾಗ ಕೆಲವು ಸಲ, ಕೆಲವು ಉತ್ಸವಗಳನ್ನು ನಿಲ್ಲಿಸಬೇಕಾಗುತ್ತದೆ.
ಆ ದೃಷ್ಟಿಯಿಂದ ಆದೃಷ್ಟಿಯಿಂದ ಅಲ್ಲಿನ ಜನರ ಭಾವನೆಗಳಿಗೆ ಸ್ಪಂದಿಸಲು ಸರ್ಕಾರ ನಿರ್ಧರಿಸಿತ್ತು. ಇದೀ ಸರ್ಕಾರ ಜನರ ಅಪೇಕ್ಷೆಯಂತೆಯೇ ಹಂಪಿ ಉತ್ಸವ ಮಾಡಲಿದೆ. ಮತ್ತೊಂದೆಡೆ ಪ್ರಕೃತಿ ವಿಕೋಪದಿಂದ ತತ್ತರಿಸಿರುವ ಕೊಡಗು ಪುನರ್ ನಿರ್ಮಾಣ ಕಾರ್ಯವನ್ನು ಯಶಸ್ವಿಯಾಗಿ ಕೈಗೊಳ್ಳಲಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪ ಸಂದರ್ಭದ್ಇ ಅತಿವೃಷ್ಟಿ ಮತ್ತು ಅನಾವೃಷ್ಟಿಗಾಗಿ ಕೇಂದ್ರ ಸರ್ಕಾರ ಎಷ್ಟು ಪ್ರಮಾಣದ ಹಣ ಬಿಡುಗಡೆ ಮಾಡಿದೆ ಎಂಬುದನ್ನು ಬಿಜೆಪಿ ಸದಸ್ಯರು ತಮ್ಮನ್ನು ತಾವೇ ಕೇಳಿಕೊಳ್ಳಬೇಕು. ರಾಜ್ಯದಲ್ಲಿ ಆಗಿರುವ ನಷ್ಟಕ್ಕೆ ಸರಿದೂಗಿಸುವ ರೀತಿಯಲ್ಲಿ ನೆರವು ಬರುತ್ತಿಲ್ಲ. ಇದರಲ್ಲಿ ಅವರಿಗೂ ಜವಾಬ್ದಾರಿ ಇರಬೇಕು ಎಂದು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.












Click it and Unblock the Notifications