ರಂಗಶಂಕರದಲ್ಲಿ ಮತ್ತೊಮ್ಮೆ ಸಂಕೇತ್ 'ಸಂಕ್ರಮಣ'
ಬೆಂಗಳೂರು, ಏ. 30: ಶಂಕರ್ ನಾಗ್ ಅವರ ಸಂಕೇತ್ ತಂಡ ರಂಗಶಂಕರದಲ್ಲಿ ಇದೇ ಶನಿವಾರ ದಂದು ಸಂಕ್ರಮಣ ನಾಟಕವನ್ನು ಪ್ರಸ್ತುತ ಪಡಿಸುತ್ತಿದೆ. ಎಸ್ ಸುರೇಂದ್ರನಾಥ್ ರಚಿಸಿ, ನಿರ್ದೇಶನ ಮಾಡಿರುವ ಈ ನಾಟಕ ಈ ವಾರಾಂತ್ಯದಲ್ಲಿ ನೋಡಿ ಆನಂದಿಸಿ.
ಸಂಕೇತ್ ನಾಟಕ ಸಂಕ್ರಮಣ. ಮೂರು ಅಂತರಿಕ ಸ್ವಗತಗಳ ನಾಟಕ ಇದು.
ತಂದೆ - ಮಗ - ತಾಯಿಯ ನಡುವೆ ಇರುವ ಅಥವಾ ಇಲ್ಲದಿರುವ ಸಂಬಂಧಗಳ ಕುರಿತಾದ ನಾಟಕವಿದು. ಒಂದು ರೀತಿಯಲ್ಲಿ ತಲೆಮಾರುಗಳ ಅಂತರದಲ್ಲಿ ಕಾಣಬರುವ ಮೌಲ್ಯಮಾಪನ ಕೂಡಾ ಹೌದು.
ರಚನೆ ಮತ್ತು ನಿರ್ದೇಶನ ಎಸ್ ಸುರೇಂದ್ರನಾಥ್. ಸಿಹಿಕಹಿ ಚಂದ್ರು, ಮಂಜುನಾಥ ಹೆಗಡೆ, ಕಲ್ಪನಾ ನಾಗನಾಥ್ ಪಾತ್ರಗಳಲ್ಲಿ. ರಂಗ ಶಂಕರ. ಮೇ 2 ಮಧ್ಯಾಹ್ನ 3.30 ಮತ್ತು 7.30ಕ್ಕೆ

ಶಂಕರ್ ನಾಗ್ ಜೊತೆಗೂಡಿ ನಾಗಮಂಡಲ, ನೋಡಿ ಸ್ವಾಮಿ ನಾವಿರೋದೇ ಹೀಗೆ ನಾಟಕಗಳಿಗೆ ಸಹ ನಿರ್ದೇಶನ ಮಾಡಿದ್ದ ಸುರೇಂದ್ರನಾಥ್ ಅವರ ಸಂಕ್ರಮಣ ನಾಟಕ ಇತ್ತೀಚಿನ ದಿನಗಳಲ್ಲಿ ಹೆಚ್ಚು ಚರ್ಚೆಗೊಳಗಾದ ನಾಟಕ ಎನಿಸಿದೆ.
ರಚನೆ, ವಿನ್ಯಾಸ ಮತ್ತು ನಿರ್ದೇಶನ : ಎಸ್ ಸುರೇಂದ್ರನಾಥ್
ಪ್ರಸ್ತುತಿ : ಸಂಕೇತ್
ಸ್ಥಳ : ರಂಗಶಂಕರ
ದಿನಾಂಕ ಮತ್ತು ಸಮಯ : 2/05/2015 ಮಧ್ಯಾಹ್ನ 3:30 ಕ್ಕೆ ಮತ್ತು ಸಂಜೆ 7:30 ಕ್ಕೆ
ಟಿಕೆಟ್ ದರ : ರೂ. 100/-
ಪಾತ್ರ ವರ್ಗ : ಸಿಹಿಕಹಿ ಚಂದ್ರು, ಮಂಜುನಾಥ ಹೆಗಡೆ, ಕಲ್ಪನಾ ನಾಗನಾಥ್
Online Booking : www.bookmyshow.com
ಟಿಕೆಟ್ ಗಳು ರಂಗ ಶಂಕರದಲ್ಲಿ ದೊರೆಯುತ್ತವೆ.


Click it and Unblock the Notifications
