ಸ್ಯಾಂಡಲ್ ವುಡ್ ಡ್ರಗ್ ಡೀಲ್ : ಕೂದಲೆಳೆ ಅಂತರದಲ್ಲಿ ತಪ್ಪಿಸಿಕೊಳ್ಳುತ್ತಿದ್ದವರಿಗೆ ಕೂದಲೇ ಮುಳುವಾಯ್ತ!

ಬೆಂಗಳೂರು

ಆ.
24
ಕೂದಲೆಳೆ
ಅಂತರದಲ್ಲಿ
ತಪ್ಪಿಸಿಕೊಂಡಿದ್ದ
ಸ್ಯಾಂಡಲ್‌ವುಡ್
ಮಾದಕ
ವ್ಯಸನಿಗಳು
ಕೂದಲು
ಪರೀಕ್ಷೆಯಲ್ಲಿ
ಸಿಕ್ಕಿಬಿದ್ದಿದ್ದಾರೆ.
ಕಳೆದ
ವರ್ಷ
ರಾಜ್ಯವನ್ನೇ
ತಲ್ಲಣ
ಗೊಳಿಸಿದ್ದ
ಸ್ಯಾಂಡಲ್
ವುಡ್
ಡ್ರಗ್ಸ್
ಪ್ರಕರಣದ
ಆರೋಪಿಗಳಿಗೆ
ಮಾದಕ
ವಸ್ತು
ಸೇವನೆ
ಸಂಬಂಧ
ಸಿಸಿಬಿ
ಪೊಲೀಸರು
ನಡೆಸಿದ
ಕೂದಲು
ಪರೀಕ್ಷೆಯಲ್ಲಿ
ಬಹುತೇಕ
ಆರೋಪಿಗಳು
ಡ್ರಗ್ಸ್
ಸೇವನೆ
ಮಾಡಿರುವುದು
ಸಾಬೀತಾಗಿದೆ.

id="toptextpromo">
id='are-slot-1'
class='oiad
oi-axt
oiadv'>

ಡ್ರಗ್ಸ್

ಪ್ರಕರಣದಲ್ಲಿ
ಸಿಕ್ಕಿಬಿದ್ದಿದ್ದ
ಡ್ರಗ್ಸ್
ಜಾಲದ
ವೀರೇನ್
ಖನ್ನಾ,
ಆರ್‌ಟಿಓ
ಅಧಿಕಾರಿ
ರವಿಶಂಕರ್,
ನಟಿ
ರಾಗಿಣಿ,
ಸಂಜನಾ
ಸೇರಿದಂತೆ
ಪ್ರಮುಖ
ಆರೋಪಿಗಳ
ಕೂದಲು
ಮಾದರಿ
ಸಂಗ್ರಹಿಸಿ
ಡ್ರಗ್ಸ್
ಸೇವನೆ
ಸಂಬಂಧ
ದೃಢಪಡಿಸಲು
ಹೈದರಾಬಾದ್‌ನಲ್ಲಿರುವ
ಕೇಂದ್ರೀಯ
ವಿಧಿ
ವಿಜ್ಞಾನ
ಪ್ರಯೋಗಾಲಯಕ್ಕೆ
ಸಿಸಿಬಿ
ಪೊಲೀಸರು
ರವಾನಿಸಿದ್ದರು.
ಕೂದಲು
ಮಾದರಿ
ಸಂಗ್ರಹಿಸಿ
ನಡೆಸಿದ
ಪರೀಕ್ಷೆಯಲ್ಲಿ
ಆರೋಪಿಗಳು
ಡ್ರಗ್ಸ್
ಸೇವನೆ
ಮಾಡಿರುವುದು
ದೃಢಪಟ್ಟಿದೆ
ಎಂದು
ಸಿಸಿಬಿ
ಜಂಟಿ
ಪೊಲೀಸ್
ಆಯುಕ್ತ
ಸಂದೀಪ್
ಪಾಟೀಲ್
ತಿಳಿಸಿದ್ದಾರೆ.

id='are-slot-2'
class='oiad
oi-axt
oiadv'>

 ಡ್ರಗ್ ಡೀಲ್ ಪ್ರಕರಣದ ಜಾಡು

ಡ್ರಗ್ ಡೀಲ್ ಪ್ರಕರಣದ ಜಾಡು

ಎನ್‌ಸಿಬಿ ಅಧಿಕಾರಿಗಳು ಡ್ರಗ್ ಪ್ರಕರಣವೊಂದನ್ನು ಬಯಲಿಗೆ ಎಳೆದ ವೇಳೆ ಸ್ಯಾಂಡಲ್ ವುಡ್ ತಾರೆಯರು ಡ್ರಗ್ ಜಾಲದಲ್ಲಿ ಇರುವ ಬಗ್ಗೆ ಆರೋಪ ಕೇಳಿ ಬಂದಿತ್ತು. ಇದರ ಬೆನ್ನಲ್ಲೇ ಕೆಲ ವರ್ಷಗಳ ಹಿಂದೆ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಡ್ರಗ್ ಡೀಲ್ ಪ್ರಕರಣದ ಜಾಡು ಹಿಡಿದು ಸಿಸಿಬಿ ಪೊಲೀಸರು ತನಿಖೆ ಆರಂಭಿಸಿದ್ದರು. ಈ ಪ್ರಕರಣದಲ್ಲಿ ಆರ್‌ಟಿಓ ಅಧಿಕಾರಿ ರವಿಶಂಕರ್, ನಟಿ ರಾಗಿಣಿ ಸೇರಿದಂತೆ ಪ್ರಮುಖ ಮಾದಕ ವ್ಯಸನಿಗಳು ಹಾಗೂ ಡೀಲರ್‌ಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ವಿಚಾರಣೆ ನಡೆಸಿದ ಸಿಸಿಬಿ ಪೊಲೀಸರು ಮೂತ್ರ ಹಾಗೂ ರಕ್ತದ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ರವಾನಿಸಿದ್ದರು.

 ಕಾಟನ್ ಪೇಟೆಯಲ್ಲಿ ಮತ್ತೊಂದು ಹೊಸ ಡ್ರಗ್ ಪ್ರಕರಣ

ಕಾಟನ್ ಪೇಟೆಯಲ್ಲಿ ಮತ್ತೊಂದು ಹೊಸ ಡ್ರಗ್ ಪ್ರಕರಣ

ಈ ಪ್ರಕರಣ ನೀಡಿದ ಸುಳಿವಿನ ಮೇರೆಗೆ ಕಾಟನ್ ಪೇಟೆಯಲ್ಲಿ ಮತ್ತೊಂದು ಹೊಸ ಡ್ರಗ್ ಪ್ರಕರಣ ದಾಖಲಿಸಿದ ಸಿಸಿಬಿ ಪೊಲೀಸರು ನಟಿ ಸಂಜನಾ, ರಾಹುಲ್ ತೋನ್ಸೆ, ಲೂಮ್ ಪೆಪ್ಪರ್ ಮತ್ತಿತರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ನಟಿ ರಾಗಿಣಿ ಹಾಗೂ ಸಂಜನಾ ಮನೆ ಮೇಲೆ ದಾಳಿ ನಡೆಸಿ ಮಾದಕ ವಸ್ತುಗಳನ್ನು ಕೂಡ ವಶಪಡಿಸಿಕೊಂಡಿದ್ದರು. ಈ ಪ್ರಕರಣದಲ್ಲಿ ಕೂಡ ಆರೋಪಿಗಳಿಂದ ರಕ್ತದ ಮಾದರಿ ಹಾಗೂ ಮೂತ್ರದ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಒಳಪಡಿಸಲಾಗಿತ್ತು. ಬಳಿಕ ಜಾಮೀನು ಪಡೆದು ಡ್ರಗ್ ಡೀಲರ್‌ಗಳು ಹಾಗೂ ವ್ಯಸನಿಗಳು ಬಿಡುಗಡೆಯಾಗಿದ್ದರು.

 ಬಾಣಸವಾಡಿ ಠಾಣೆಯಲ್ಲಿ ದಾಖಲಾಗಿದ್ದ ಡ್ರಗ್ ಡೀಲ್

ಬಾಣಸವಾಡಿ ಠಾಣೆಯಲ್ಲಿ ದಾಖಲಾಗಿದ್ದ ಡ್ರಗ್ ಡೀಲ್

ಬಾಣಸವಾಡಿ ಠಾಣೆಯಲ್ಲಿ ದಾಖಲಾಗಿದ್ದ ಡ್ರಗ್ ಡೀಲ್ ಪ್ರಕರಣದಲ್ಲಿ ರವಿಶಂಕರ್, ವೀರೇನ್ ಖನ್ನಾ ಸೇರಿದಂತೆ ಪ್ರಮುಖ ಆರೋಪಿಗಳು ಕೂದಲೆಳೆ ಅಂತರದಲ್ಲಿ ತಪ್ಪಿಸಿಕೊಂಡಿದ್ದರು. ಸಿಸಿಬಿ ಪೊಲೀಸರು ತನಿಖೆ ನಡೆಸಿದಾಗ ಇವರೆಲ್ಲರೂ ಸಿಕ್ಕಿಬಿದ್ದದ್ದರು. ಇದೀಗ ಬಂಧಿತ ಆರೋಪಿಗಳ ಕೂದಲು ಮಾದರಿ ಸಂಗ್ರಹಿಸಿ ಹೈದರಾಬಾದ್‌ನಲ್ಲಿರುವ ಕೇಂದ್ರೀಯ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಿದ್ದರು. ವರದಿಯಲ್ಲಿ ಆರೋಪಿ ವೀರೇನ್ ಖನ್ನಾ, ರಾಹುಲ್ ತೋನ್ಸೆ, ನಟಿ ಸಂಜನಾ, ರಾಗಿಣಿ ಮತ್ತಿತರ ಆರೋಪಿಗಳು ಡ್ರಗ್ ಸೇವನೆ ಮಾಡಿರುವುದು ಕೂದಲು ಪರೀಕ್ಷೆಯಲ್ಲಿ ದೃಢಪಟ್ಟಿದೆ. ಹೀಗಾಗಿ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು ಮಾದಕ ವ್ಯಸನಿಗಳಿಗೆ ಹಾಗೂ ಡೀಲ್ ಕೋರರಿಗೆ ಈ ಪರೀಕ್ಷಾ ವರದಿ ಮುಳುವಾಗಲಿದೆ. ಇದೇ ಪ್ರಥಮ ಬಾರಿಗೆ ಸಿಸಿಬಿ ಪೊಲೀಸರು ಮಾದಕ ವ್ಯಸನಿಗಳಿಗೆ ಕೂದಲು ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಿದ್ದರು.

Recommended Video

    ನಾನು RCB ತಂಡದ ದೊಡ್ಡ ಫ್ಯಾನ್ ಅಂದ ಹಸರಂಗ | Oneindia Kannada
    ಕೂದಲು ಪರೀಕ್ಷೆ ವಿಶೇಷತೆ

    ಕೂದಲು ಪರೀಕ್ಷೆ ವಿಶೇಷತೆ

    ಸಾಮಾನ್ಯವಾಗಿ ಡ್ರಗ್ ಸೇವನೆ ಮಾಡಿದ 48 ತಾಸಿನ ಒಳಗೆ ರಕ್ತದ ಮಾದರಿ ಹಾಗೂ ಮೂತ್ರದ ಮಾದರಿ ಸಂಗ್ರಹಿಸಿ ಪರೀಕ್ಷೆ ನಡೆಸಿದಲ್ಲಿ ಮಾತ್ರ ಡ್ರಗ್ ಸೇವನೆ ಬಗ್ಗೆ ಕುರುಹು ಸಿಗಲಿದೆ. ಆದರೆ ಡ್ರಗ್ ಡೀಲ್ ಪ್ರಕರಣದಲ್ಲಿ ಕೆಲ ಆರೋಪಿಗಳು ಹಲವು ತಿಂಗಳೇ ತಲೆ ಮರೆಸಿಕೊಂಡಿದ್ದರು. ಬಳಿಕ ಬಂಧಿಸಿ ಮೂತ್ರ ಪರೀಕ್ಷೆ ನಡೆಸಿದಾಗ ಕೆಲವರು ಡ್ರಗ್ ಸೇವನೆ ಬಗ್ಗೆ ಯಾವುದೇ ಕುರುಹು ಸಿಕ್ಕಿರಲಿಲ್ಲ. ಹೀಗಾಗಿ ಈ ಪ್ರಕರಣಕ್ಕೆ ಹಿನ್ನೆಡೆಯಾಗುವ ಲಕ್ಷಣ ಗೋಚರಿಸಿತ್ತು. ಈ ಹಿನ್ನೆಲೆಯಲ್ಲಿ ಕೂದಲು ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗಿದೆ. ವಿಶೇಷ ಎಂದರೆ ಕೂದಲು ಮಾದರಿ ಪರಿಕ್ಷೆಗೆ ಒಳಪಡಿಸಿದಾಗ ಡ್ರಗ್ ಸೇವನೆ ಮಾಡಿದ ಒಂದು ವರ್ಷದ ವರೆಗೂ ಪತ್ತೆ ಮಾಡುವ ವಿಧಾನ ಇದಾಗಿದೆ. ಹೀಗಾಗಿ ಸ್ಯಾಂಡಲ್ ವುಡ್ ಡ್ರಗ್ ಡೀಲರ್ ಗಳಿಗೆ ಹಾಗೂ ವ್ಯಸನಿಗಳಿಗೆ ಕೂದಲು ಪರೀಕ್ಷೆ ಮುಳುವಾಗಲಿದೆ.

    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+