ಜೈಲಿನಿಂದ ಬಿಡುಗಡೆಯಾದ ಬಳಿಕ ನಟಿ ರಾಗಿಣಿ ಏನು ಮಾಡುತ್ತಿದ್ದಾರೆ ಗೊತ್ತಾ?
ಬೆಂಗಳೂರು,ಫೆಬ್ರವರಿ 04: ಯಾವುದಾದ್ರೂ ಕೇಸಲ್ಲಿ ಜೈಲಿಗೆ ಹೋಗಿ ಬಂದ್ರೆ ನೆರೆ ಹೊರೆಯವರಿಗೆ ಮುಖ ತೋರಿಸೋದು ಕಷ್ಟ. ಸ್ಯಾಂಡಲ್ ವುಡ್ ಡ್ರಗ್ ಕೇಸ್ ನಲ್ಲಿ ಜೈಲುವಾಸ ಅನುಭವಿಸಿ ಹೊರ ಬಂದ ನಂತರ ನಟಿ ರಾಗಿಣಿ ಏನು ಮಾಡುತ್ತಿದ್ದಾರೆ ? ರುಚಿ ರುಚಿ ಅಡುಗೆ ಮಾಡಿ ಅಪ್ಪನಿಗೆ ತಿನ್ನಿಸುವ ಮೂಲಕ ಕುಟುಂಬದ ಜತೆ ಕಾಲ ಕಳೆಯುತ್ತಿದ್ದಾರೆ.
ಸ್ಯಾಂಡಲ್ ವುಡ್ ಡ್ರಗ್ ಕೇಸ್ ನಲ್ಲಿ ರಾಗಿಣಿ ಬಂಧನಕ್ಕೆ ಒಳಗಾದಾಗ ಅವರ ತಂದೆ ತಾಯಿ ದೇವರಿಗೆ ಹರಕೆ ಹೊತ್ತಿದ್ದರು. ದಿಲ್ಲಿ ಸುಪ್ರೀಂಕೋರ್ಟ್ ವರೆಗೂ ಪ್ರೀತಿಯ ಮಗಳಿಗಾಗಿ ಅಲೆದಾಡಿದ್ದರು. ರಾಗಿಣಿಗೆ ಸುಪ್ರೀಂಕೋರ್ಟ್ ನಲ್ಲಿ ಜಾಮೀನು ಸಿಕ್ಕಿತ್ತು. ಬಿಡುಗಡೆಯಾದ ಕೂಡಲೇ ಪೋಷಕರನ್ನು ಅಪ್ಪಿಕೊಂಡು ರಾಗಿಣಿ ಕಣ್ಣಲ್ಲಿ ನೀರು ತುಂಬಿಕೊಂಡಿದ್ದಳು.

ಇದೀಗ ರಾಗಿಣಿ ತನ್ನ ತಂದೆಗೆ ರುಚಿ ರುಚಿ ಅಡುಗೆ ಮಾಡಿ ಕೊಡುತ್ತಿದ್ದಾರೆ. ಬಗೆ ಬಗೆಯ ತಿಂಡಿ ಮಾಡಿಕೊಟ್ಟು ಕುಟುಂಬದ ಜತೆ ಪೂರ್ಣ ಕಾಲ ಕಳೆಯುತ್ತಿದ್ದಾಳೆ. ಜೈಲಿಗೆ ಹೋಗುವ ಮೊದಲು ರಾಗಿಣಿ ಆರ್ ಡಿ ಕಿಚನ್ ಹೆಸರಿನಲ್ಲಿ ಬಗೆ ಬಗೆಯ ತಿಂಡಿ ತಿನಿಸು ಮಾಡುವ ವಿಧಾನವನ್ನು ತನ್ನ ಇನ್ ಸ್ಟಾ ಪೇಜ್ ನಲ್ಲಿ ಪೋಸ್ಟ್ ಮಾಡುತ್ತಿದ್ದಳು.

ಉತ್ತರ ಭಾರತ ಶೈಲಿಯ ತಿನಿಸು ತಯಾರಿಸಿ ಹಾಕುತ್ತಿದ್ದ ವಿಡಿಯೋ ನೋಡಲು ದೊಡ್ಡ ಅಭಿಮಾನಿ ಬಳಗ ಹುಟ್ಟಿಕೊಂಡಿತ್ತು. ಇದೀಗ ರಾಗಿಣಿ ದ್ವಿವೇದಿ ಮತ್ತೆ ಉತ್ತರ ಭಾರತದ ತಿನಿಸು ತಯಾರಿಸಿ ತನ್ನ ತಂದೆಗೆ ಬಡಿಸಿ ಖುಷಿ ಖುಷಿಯಾಗಿಯೇ ಕಾಲ ಕಳೆಯುತ್ತಿದ್ದಾಳೆ. ತನ್ನ ದಿನಚರಿಯ ಪೋಟೊಗಳನ್ನು ಇನ್ ಸ್ಟಾಗ್ರಾಮ್ ಖಾತೆಯಲ್ಲಿ ರಾಗಿಣಿ ಹಂಚಿಕೊಂಡಿದ್ದಾರೆ. ಜೈಲಿನಿಂದ ಬಂದ ರಾಗಿಣಿ ಪೂರ್ಣ ಕಾಲವನ್ನು ಹೆತ್ತವರ ಮಡಿಲಲ್ಲಿ ಕಳೆಯುತ್ತಿದ್ದಾಳೆ.
Recommended Video
-
ಐಪಿಎಲ್ಗೂ ಮುನ್ನ ಆರ್ಸಿಬಿ ಹೊಸ ದಾಖಲೆ: 16,000 ಕೋಟಿಗೆ ಆದಿತ್ಯ ಬಿರ್ಲಾ ಗ್ರೂಪ್ ಪಾಲಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಬೆಂಗಳೂರು ಇ-ಖಾತಾ ದಂಧೆ ಬಯಲು: ಬ್ರ್ಯಾಂಡ್ ಬೆಂಗಳೂರಿಗೆ ಆರ್ ಅಶೋಕ್ ತೀವ್ರ ಟೀಕೆ -
IPL 2026 RCB: ಹ್ಯಾಜಲ್ವುಡ್, ಯಶ್ ದಯಾಳ್ ಅಲಭ್ಯರಾದ್ರೆ ಆರ್ಸಿಬಿ ಮುಂದಿರುವ 'ಪ್ಲಾನ್ ಬಿ' ಏನು? -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
LPG: ಗೃಹಬಳಕೆ ಸಿಲಿಂಡರ್ ಬಳಕೆದಾರರಿಗೆ ಬಿಗ್ ಅಪ್ಡೇಟ್: ಎಲ್ಪಿಜಿ ಅಭಾವ ನೀಗಿಸಲು ಕೇಂದ್ರದಿಂದ ಹೊಸ ಪ್ಲಾನ್ -
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ










Click it and Unblock the Notifications