ಸಮುದಾಯ ಬೆಂಗಳೂರು ಕಾರ್ಯದರ್ಶಿಯಾಗಿ ಕಾವ್ಯ ಅಚ್ಚುತ್ ಆಯ್ಕೆ
ಬೆಂಗಳೂರು, ಡಿಸೆಂಬರ್ 20: ಕರ್ನಾಟಕದ ಸಾಂಸ್ಕೃತಿಕ ಇತಿಹಾಸದಲ್ಲಿ ಬಹುಮುಖ್ಯ ಪಾತ್ರ ವಹಿಸಿದ ಮತ್ತು ವಹಿಸುತ್ತಿರುವ ಸಮುದಾಯ ಬೆಂಗಳೂರು ಇಂದು ನೂತನ ಕಾರ್ಯಕಾರಿ ಸಮಿತಿ ಪದಾಧಿಕಾರಿಗಳ ಆಯ್ಕೆಮಾಡಿದೆ. ಸಮುದಾಯ ಬೆಂಗಳೂರು ಇದರ 45 ವರ್ಷದ ಇತಿಹಾಸದಲ್ಲಿ ಮೊದಲ ಬಾರಿಗೆ ಮಹಿಳಾ ಕಾರ್ಯದರ್ಶಿಯನ್ನು ಆಯ್ಕೆ ಮಾಡಿದೆ. ಸಮುದಾಯ ಬೆಂಗಳೂರು ನೂತನ ಕಾರ್ಯದರ್ಶಿಯಾಗಿ ಸರ್ವಾನುಮತದಿಂದ ಕಾವ್ಯ ಅಚ್ಚುತ್ ಆಯ್ಕೆಯಾಗಿದ್ದಾರೆ.
ಸಮುದಾಯ ಬೆಂಗಳೂರು ಸರ್ವಸದಸ್ಯರ ಸಭೆ ಇಂದು ಬೆಂಗಳೂರಿನ ಕೆಂಪೇಗೌಡ ನಗರ ಬಡಾವಣೆಯಲ್ಲಿರುವ ಉದಯಭಾನು ಕಲಾಸಂಘದಲ್ಲಿ ನಡೆಯಿತು. ಸಭೆಯಲ್ಲಿ ಪ್ರಸಕ್ತ ಸಾಂಸ್ಕೃತಿಕ ರಾಜಕಾರಣ ಮತ್ತು ಕರ್ನಾಟಕದಾದ್ಯಂತ ನಡೆದ "ಒಳಿತು ಮಾಡು ಮನುಸ" ಬೀದಿ ರಂಗ ನಮನ ಕಾರ್ಯಕ್ರಮದ ವಿಮರ್ಶೆ ನಡೆಯಿತು. ಜೊತೆಗೆ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.
ಸಮುದಾಯ ಬೆಂಗಳೂರು ಇದರ ಅಧ್ಯಕ್ಷರಾಗಿ ಆಯ್ಕೆಯಾದ ಅಗ್ರಹಾರ ಕೃಷ್ಣ ಮೂರ್ತಿ ಮಾತನಾಡಿ, ''ಬೆಂಗಳೂರು ಸಮುದಾಯ ಪ್ರಸಕ್ತ ಸಮಕಾಲಿನ ರೈತರ ಹೋರಾಟದಲ್ಲಿ ಭಾಗಿಯಾಗಿದೆ. ಅವರ ಹೋರಾಟಕ್ಕೆ ನಮ್ಮ ಬೆಂಬಲ ಇದೆ'' ಎಂದು ನಿರ್ಣಯ ಮಂಡಿಸಿದರು. ಇದನ್ನು ಕಾರ್ಯಾಧ್ಯಕ್ಷರಾದ ಜೆ.ಸಿ ಶಶಿಧರ ಅನುಮೋದನೆ ಮಾಡಿದರು. ಸಮುದಾಯ ಬೆಂಗಳೂರು ಸರ್ವ ಸದಸ್ಯರು ಒಪ್ಪಿಗೆ ಸೂಚಿಸಿದರು.

ಸಮುದಾಯ ಬೆಂಗಳೂರು:
ಅಧ್ಯಕ್ಷರಾಗಿ ಶ್ರೀಯುತ ಅಗ್ರಹಾರ ಕೃಷ್ಣ ಮೂರ್ತಿ, ಉಪಾಧ್ಯಕ್ಷರಾಗಿ ಪದ್ಮ ಶಿವಮೊಗ್ಗ ಹಾಗೂ ಕೀರ್ತಿ ತೊಂಡಗೆರೆ, ಕಾರ್ಯಾಧ್ಯಕ್ಷರಾಗಿ ಜೆ.ಸಿ.ಶಶಿಧರ, ಕಾರ್ಯದರ್ಶಿಯಾಗಿ ಕಾವ್ಯ ಅಚ್ಯುತ್, ಜಂಟಿ ಕಾರ್ಯದರ್ಶಿಗಳಾಗಿ ಗಣೇಶ ಶೆಟ್ಟಿ ಹಾಗೂ ನಾಗ ಲಕ್ಷ್ಮೀ, ಖಜಾಂಚಿಯಾಗಿ ಲವನಿಕ ವಿ ಯವರನ್ನು ಆಯ್ಕೆ ಮಾಡಲಾಯಿತು. ಸಮುದಾಯ ಬೆಂಗಳೂರು ಇದರ 45 ವರ್ಷದ ಇತಿಹಾಸದಲ್ಲಿ ಮೊದಲ ಬಾರಿಗೆ ಮಹಿಳಾ ಕಾರ್ಯದರ್ಶಿಯಾಗಿ ಕಾವ್ಯ ಅಚ್ಯುತ್ ಆಯ್ಕೆಯಾಗಿದ್ದು ಸಮುದಾಯದ ರಂಗಕರ್ಮಿಗಳು, ಸಾಹಿತಿಗಳು, ಸಂಘಟಕರು ಅಭಿನಂದನೆ ವ್ಯಕ್ತಪಡಿಸಿದರು.
Recommended Video
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಟಿ. ವೆಂಕಟೇಶ್ ಮೂರ್ತಿ, ರವೀಂದ್ರನಾಥ ಸಿರಿವರ, ನಾಚೇಗೌಡ ಬಿ.ಹೆಚ್., ದೀಲಿಪ್ ಎಸ್.ಪಿ, ಪೈರೋಜ್ ಕೆ, ಎಂ.ಎಸ್ ಇಂದಿರಾ, ರಾಜು ಡಿ.ವಿ, ಪ್ರಣವ್ ಭಾರದ್ವಾಜ್, ಕಿಶನ್ ರಾಮಮೂರ್ತಿ, ಎಂ.ವಿ ಸುರೇಶ್, ಮದನ್ ಶೆಟ್ಟಿ, ಶರತ್ ಕುಮಾರ್, ದೀಪಕ್ ರಾಜ್ ಆಯ್ಕೆಯಾಗಿದ್ದಾರೆ. ಈ ಬಾರಿಯ ಸಮುದಾಯ ಕಾರ್ಯಕಾರಿ ಸಮಿತಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವ ಸಮುದಾಯವಿರುವುದು ಗಮನಾರ್ಹ. ಸಮುದಾಯ ಬೆಂಗಳೂರು ಸರ್ವ ಸದಸ್ಯರು ಹಾಗೂ ಸಮುದಾಯ ಕರ್ನಾಟಕ ಅಧ್ಯಕ್ಷರಾದ ಅಚ್ಚುತ ಮತ್ತು ಸಮುದಾಯ ಕರ್ನಾಟಕ ಪ್ರಧಾನ ಕಾರ್ಯದರ್ಶಿ ದೇವೇಂದ್ರ ಗೌಡ ಉಪಸ್ಥಿತರಿದ್ದರು.












Click it and Unblock the Notifications