Get Updates
Get notified of breaking news, exclusive insights, and must-see stories!

ಸಂಪಿಗೆ ವೃತ್ತಕ್ಕೆ ಗೋಕಾಕ್ ಚಳವಳಿ ಸ್ಮರಣಾರ್ಥ ವೃತ್ತ ನಾಮಕರಣ

ಬೆಂಗಳೂರು, ಅಕ್ಟೋಬರ್ 25: ವರನಟ ಡಾ. ರಾಜ್‌ಕುಮಾರ್ ಸಾರಥ್ಯದಲ್ಲಿ 1982ರಲ್ಲಿ ಆರಂಭವಾದ ಗೋಕಾಕ್ ಚಳವಳಿಯ ಸ್ಮರಣಾರ್ಥ ನವೆಂಬರ್ 1 ರಂದು 62ನೇ ಕನ್ನಡ ರಾಜ್ಯೋತ್ಸವದ ದಿನದಂದು ಗೋಕಾಕ್ ಚಳವಳಿ ನೇತಾರರ ಸ್ಮರಣಾರ್ಥ ವೃತ್ತ ನಾಮಕರಣ ಹಾಗೂ ಗೋಕಾಕ್ ಚಳವಳಿ ಭಂಗಿಯ ಪುತ್ಥಳಿ ಅನಾವರಣ ಕಾರ್ಯಕ್ರಮ ಮಲ್ಲೇಶ್ವರದಲ್ಲಿ ನಡೆಯಲಿದೆ ಎಂದು ಶಾಸಕ ಡಾ ಸಿಎನ್ ಅಶ್ವತ್ಥ ನಾರಾಯಣ ತಿಳಿಸಿದರು.

ಕೆಎಸ್‌ಸಿಎ ಸಭಾಂಗಣದಲ್ಲಿ ಗುರುವಾರ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಲ್ಲೇಶ್ವರದ 18ನೇ ಅಡ್ಡರಸ್ತೆಯ ಸಂಪಿಗೆ ರಸ್ತೆ ವೃತ್ತಕ್ಕೆ ಗೋಕಾಕ್ ಚಳವಳಿ ವೃತ್ತ ನಾಮಕರಾಣ ಮಾಡಲಾಗುತ್ತಿದ್ದು, ಪುತ್ಥಳಿಯನ್ನು ಅನಾವರಣಗೊಳಿಸಲಾಗುತ್ತಿದೆ. ಈ ಉದ್ಯಾನದಲ್ಲಿ ಕನ್ನಡ ಚಟುವಟಿಕೆಗಳಿಗೆ ಬಯಲು ರಂಗಮಂದಿರ ಕೂಡ ನಿರ್ಮಿಸಲಾಗಿದೆ ಎಂದರು.

ಈ ಕಾರ್ಯಕ್ರಮದ ಅಂಗವಾಗಿ ನವೆಂಬರ್ 1ರಂದು ಬೆಳಗ್ಗೆ 10ಕ್ಕೆ ಮಲ್ಲೇಶ್ವರ ಆಟದ ಮೈದಾನದಿಂದ ಸಂಪಿಗೆ ರಸ್ತೆ ಮೂಲಕ ಗೋಕಾಕ್ ಚಳವಳಿ ಮಾದರಿಯಲ್ಲೇ ಸಾಂಸ್ಕೃತಿಕ ಮೆರವಣಿಗೆ ಕೂಡ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

Sampige Road circle will be named as Gokak movement circle

10 ಸಾವಿರಕ್ಕೂ ಹೆಚ್ಚು ಜನ ಪಾಲ್ಗೊಳ್ಳಲಿರುವ ಮೆರವಣಿಗೆಯಲ್ಲಿ ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ, ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್, ಕೇಂದ್ರ ಸಚಿವ ಡಿವಿ ಸದಾನಂದಗೌಡ ಸೇರಿದಂತೆ ನಾಡಿನ ಹಿರಿಯ ಸಾಹಿತಿಗಳು, ಕಲಾವಿದರು, ಕನ್ನಡ ಪರ ಹೋರಾಟಗಾರರು ಹಾಗೂ ಕನ್ನಡಾಭಿಮಾನಿಗಳು ಪಾಲ್ಗೊಳ್ಳಲಿದ್ದಾರೆ.

ಬೆಳಗ್ಗೆ 11ಕ್ಕೆ ನಾಡಿನ ಚಲನಚಿತ್ರ ಗಾಯಕ ವಿಜಯ ಪ್ರಕಾಶ್ ಅವರಿಂದ ಸಂಗೀತ ಕಾರ್ಯಕ್ರಮ ಏರ್ಪಡಿಲಸಲಾಗಿದೆ. ಈ ಕಾರ್ಯಕ್ರಮದ ಅಂಗವಾಗಿ 25 ಸಾವಿರ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಸುಮಾರು 7 ಲಕ್ಷ ರೂ ಮೊತ್ತದ ಬಹುಮಾನವಾಗಿ ಲ್ಯಾಪ್‌ಟಾಪ್, ಟ್ಯಾಬ್ ಹಾಗೂ ಪ್ರಶಸ್ತಿ ಪತ್ರ ವಿತರಿಸಲಾಗುತ್ತಿದೆ ಎಂದು ಹೇಳಿದರು.

ಡಾ . ರಾಜ್‌ಕುಮಾರ್ ಅಭಿಮಾನಗಳ ಸಂಘದ ಅಧ್ಯಕ್ಷ ಹಾಗೂ ಚಿತ್ರ ನಿರ್ಮಾಪಕ ಸಾ.ರಾ. ಗೋವಿಂದು ಮಾತನಾಡಿ, ಕರ್ನಾಟಕದಲ್ಲಿ ಕನ್ನಡವೇ ಅಗ್ರಜ ಎಂಬ ಉದ್ದೇಶದಿಂದ 36 ವರ್ಷಗಳ ಹಿಂದೆ ಪ್ರೊ. ವಿಕೃ ಗೋಕಾಕ್ ಅಧ್ಯಯನ ವರದಿಯ ಶಿಫಾರಸ್ಸುಗಳನ್ನು ಜಾರಿಗೊಳಿಸಲು ಸರ್ಕಾರ ಮುಂದಾಗದಿದ್ದಾಗ ರಾಜ್ಯದಲ್ಲಿ ಹೋರಾಟ ಧ್ವನಿ ಇಲ್ಲದಂತಾಗಿತ್ತು.
ಆ ವೇಳೆ ಕನ್ನಡದ ವರನಟ ಡಾ. ರಾಜ್‌ಕುಮಾರ್ ಅವರಂತಹ ಧೀಮಂತ ನಾಯಕ ಕನ್ನಡಕ್ಕಾಗಿ ಹೋರಾಟಕ್ಕೆ ಧುಮುಕಿದ ಪರಿಣಾಮ 35 ದಿನಗಳ ಕಾಳ ಅವಿಸ್ಮರಣೀಯ ಹಾಗೂ ಐತಿಹಾಸಿಕ ಚಳವಳಿಯೇ ನಡೆದುಹೋಯಿತು. ಆ ಸಂದರ್ಭದಲ್ಲಿ ನಾನು ಡಾ ರಾಜ್ ಅವರ ಹತ್ತಿರದ ಒಡನಾಡಿಯಾಗಿದ್ದೆ ಎಂಬುದು ನನ್ನ ಪೂರ್ವಜನ್ಮದ ಪುಣ್ಯ ಎಂದು ಹೋರಾಟದ ದಿನಗಳನ್ನು ಮೆಲುಕು ಹಾಕಿದರು.

ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಮನು ಬಳಿಗಾರ್ ಮಾತನಾಡಿ 1982ರಲ್ಲಿ ಗೋಕಾಕ್ ಚಳವಳಿ ಉತ್ತುಂಗದ ತುದಿಯಲ್ಲಿದ್ದಾಗ ರಾಜ್‌ಕುಮಾರ್ ಹೈದರಾಬಾದ್ ಕರ್ನಾಟಕ ಪ್ರದೇಶದ ಕಲಬುರಗಿ ಜಿಲ್ಲೆಯಲ್ಲಿ ಹೋರಾಟದ ಕಿಚ್ಚನ್ನು ಎಬ್ಬಿಸಲು ಬಂದಿದ್ದರು. ಆ ವೇಳೆ ನಾನು ಅಲ್ಲಿ ಕೆಎಎಸ್ ಅಧಿಕಾರಿಯಾಗಿ ಸೇವೆಯಲ್ಲಿದ್ದೆ.

ಆ ಸಂದರ್ಭದಲ್ಲಿ ಇಡೀ ಸರ್ಕಾರವೇ ರಾಜ್ ಕುಮಾರ್ ಘರ್ಜನೆಗೆ ಬೆದರಿತ್ತು ಗೋಕಾಕ್ ವರದಿಯನ್ನು ಅನುಷ್ಠಾನಗೊಳಿಸುವ ಅನುವಾರ್ಯ ಪರಿಸ್ಥಿತಿ ಎದುರಾಯಿತು. ಗೋಕಾಕ್ ಚಳವಳಿ ಕನ್ನಡಕ್ಕೆ ಆಧುನಿಕ ಭಾರತದಲ್ಲಿ ಹೊಸ ಶಕ್ತಿ ತುಂಬಿದ ಜನಸಾಮಾನ್ಯರ ಹೋರಾಟವಾಗಿತ್ತು ಎಂದು ಬಣ್ಣಿಸಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+