ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಕಲಚೇತನರಿಗೆ ಸಮರ್ಥನಂ ಟ್ರಸ್ಟ್ ಬೆಂಗಳೂರು ವಾಕಥಾನ್

|
Google Oneindia Kannada News

ಬೆಂಗಳೂರು, ಡಿಸೆಂಬರ್ 6: ಪ್ರತಿವರ್ಷ ಸಮರ್ಥನಂ ಆಯೋಜಿಸುವ ವಾಕಥಾನ್‍ಗೆ ಸಾರ್ವಜನಿಕರಿಂದ ಅಭೂತಪೂರ್ವವಾದ ಬೆಂಬಲ ದೊರೆಯುತ್ತಾ ಬರುತ್ತಿದೆ. ಒಂದು ಉತ್ತಮ ಕಾರಣಕ್ಕಾಗಿ ಮತ್ತು ವಿಕಲಚೇತನರ ಬಗ್ಗೆ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಆಯೋಜಿಸುವ ಈ ವಾಕಥಾನ್‍ಗೆ ದೇಶಾದ್ಯಂತ ಜನರು ಪ್ರೋತ್ಸಾಹ ನೀಡುತ್ತಿದ್ದಾರೆ.

ವಿಕಲಚೇತನರಿಗಾಗಿ ಮುಡಿಪಾಗಿಡುವ ಅಂತಾರಾಷ್ಟ್ರೀಯ ವಿಕಲಚೇತನರ ದಿನವನ್ನಾಗಿ ಆಚರಿಸಲಾಗುತ್ತದೆ. ವಿಶ್ವಸಂಸ್ಥೆಯು ವಿಕಲಚೇತನರ ಶ್ರೇಯೋಭಿವೃದ್ಧಿ ಮತ್ತು ಅವರ ಹಕ್ಕು ಹಾಗೂ ಯೋಗಕ್ಷೇಮವನ್ನು ಕಾಯ್ದುಕೊಳ್ಳುವ ಉದ್ದೇಶದಿಂದ ಈ ಅಂತಾರಾಷ್ಟ್ರೀಯ ದಿನವನ್ನು ಆಚರಿಸುತ್ತಿದೆ. ಈ ಮೂಲಕ ರಾಜಕೀಯ, ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ವಿಕಲಚೇತನರ ಸ್ಥಿತಿಗತಿ ಬಗ್ಗೆ ಜಾಗೃತಿ ಮೂಡಿಸುವ ಮತ್ತು ಜಾಗೃತಿಯನ್ನು ಹೆಚ್ಚಿಸುವುದು ಇದರ ಉದ್ದೇಶವಾಗಿದೆ.

ಜಾಗತಿಕ ಮಟ್ಟದಲ್ಲಿ ಕನೆಕ್ಟಿವಿಟಿ ಮತ್ತು ಸೆನ್ಸಾರ್ಸ್‍ನಲ್ಲಿ ಮುಂಚೂಣಿಯಲ್ಲಿರುವ ಟಿಇ ಕನೆಕ್ಟಿವಿಟಿ(ಟಿಇ) 14 ನೇ ಬೆಂಗಳೂರು ವಾಕಥಾನ್‍ಗೆ ಪ್ರಾಯೋಜಕತ್ವ ನೀಡುತ್ತಿದೆ. ಟಿಇ ಕನೆಕ್ಟಿವಿಟಿ ಸಮರ್ಥನಂನ ಬೆಂಗಳೂರು ವಾಕಥಾನ್ 2018 ಅನ್ನು ಬೆಂಗಳೂರಿನ ಕಿತ್ತೂರು ರಾಣಿ ಚೆನ್ನಮ್ಮ ಸ್ಟೇಡಿಯಂನಲ್ಲಿ ಡಿಸೆಂಬರ್ 8, 2018 ರಂದು ಆಯೋಜಿಸಿದೆ.

ವಿಕಲಚೇತನರನ್ನು ಡಿಜಿಟಲ್ ಸೇರ್ಪಡೆ ಮಾಡುವ ಕುರಿತು ಜಾಗೃತಿ ಮೂಡಿಸುವುದು ಈ ಬಾರಿಯ ವಾಕಥಾನ್‍ನ ಮುಖ್ಯ ಉದ್ದೇಶವಾಗಿದೆ. ವಿಕಲಚೇತನ ಜನಸಂಖ್ಯೆಯ ಸಂಪರ್ಕದ ಕೊರತೆಯಿಂದಾಗಿ ದೊಡ್ಡ ಕಂದಕ ನಿರ್ಮಾಣವಾಗಿದೆ. ಅವರನ್ನು ನಿರ್ಲಕ್ಷ್ಯಕ್ಕೆ ಒಳಗಾಗುವಂತೆ ಮಾಡಲಾಗುತ್ತಿದೆ. ಡಿಜಿಟಲ್ ಕ್ಷೇತ್ರದಲ್ಲಿ ತಂತ್ರಜ್ಞಾನ ಮತ್ತು ಮೂಲಸೌಕರ್ಯಗಳ ವಿಸ್ತರಣೆಯಾಗುತ್ತಿದ್ದು, ನಾವು ಡಿಜಿಟಲ್ ಸೌಲಭ್ಯಗಳನ್ನು ಪಡೆದುಕೊಂಡು ಪ್ರತಿಯೊಬ್ಬ ವಿಕಲಚೇತನನಿಗೂ ಡಿಜಿಟಲ್ ಮಾಹಿತಿ ಮತ್ತು ಸೇವೆಗಳನ್ನು ತಲುಪುವಂತೆ ಮಾಡಬೇಕಿದೆ.

ಸಮರ್ಥನಂನ ಸಂಸ್ಥಾಪಕ ವ್ಯವಸ್ಥಾಪನಾ ಟ್ರಸ್ಟಿ ಮಹಾಂತೇಶ್

ಸಮರ್ಥನಂನ ಸಂಸ್ಥಾಪಕ ವ್ಯವಸ್ಥಾಪನಾ ಟ್ರಸ್ಟಿ ಮಹಾಂತೇಶ್

ಸಮರ್ಥನಂನ ಸಂಸ್ಥಾಪಕ ವ್ಯವಸ್ಥಾಪನಾ ಟ್ರಸ್ಟಿ ಮಹಾಂತೇಶ್ ಜಿಕೆ ಅವರು ಮಾತನಾಡಿ, "ಈ ವರ್ಷದ ವಾಕಥಾನ್‍ನ ಥೀಮ್ 'ಡಿಜಿಟಲ್ ಸೇರ್ಪಡೆ' ಎಂಬುದನ್ನು ಘೋಷಿಸಲು ನಮಗೆ ಸಂತಸವೆನಿಸುತ್ತಿದೆ. ಈ ಡಿಜಿಟಲ್ ಕ್ಷೇತ್ರ ಜನರ ಜೀವನದಲ್ಲಿ ಬಹುದೊಡ್ಡ ಬದಲಾವಣೆಯನ್ನು ತಂದಿದೆ. ಈ ನಿಟ್ಟಿನಲ್ಲಿ ಸಮರ್ಥನಂ ಐಟಿ ಸಂವಹನ ಕ್ಷೇತ್ರದೊಂದಿಗೆ ಕೆಲಸ ಮಾಡುತ್ತಿದ್ದು, ಆರಂಭದಿಂದಲೇ ವಿಕಲಚೇತನರನ್ನು ಇದರಲ್ಲಿ ಸೇರ್ಪಡೆ ಮಾಡಿಕೊಂಡಿದೆ.

ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಅವಕಾಶಗಳು ಮತ್ತು ವೇದಿಕೆಗಳು ಆರಂಭವಾಗಿದ್ದು, ಸಮರ್ಥನಂನಲ್ಲಿನ ಪ್ರತಿಯೊಬ್ಬ ಫಲಾನುಭವಿಯೂ ತಮ್ಮ ಜ್ಞಾನವನ್ನು ವೃದ್ಧಿಸಿಕೊಳ್ಳುವಂತಾಗಿದೆ. ನಾವು ಸಮಾನ ಸಂಪರ್ಕವನ್ನು ಕಲ್ಪಿಸುವ ನಿಟ್ಟಿನಲ್ಲಿ ಕೈಗೊಂಡಿರುವ ಕಾರ್ಯವನ್ನು ಮುಂದುವರಿಸುತ್ತೇವೆ ಮತ್ತು ಈ ಕೈಂಕರ್ಯದಲ್ಲಿ ಅಂದರೆ ಎಲ್ಲರಿಗೂ ಸಮಾನ ಅವಕಾಶ ಲಭಿಸಬೇಕೆಂಬ ಈ ಅಭಿಯಾನದಲ್ಲಿ ಎಲ್ಲರೂ ಕೈಜೋಡಿಸಬೇಕೆಂದು ಕೋರುತ್ತೇವೆ.

ನಾವು ಕೈಗೊಂಡಿರುವ ಈ ಕಾರ್ಯಕ್ರಮದಲ್ಲಿ ಹಲವಾರು ಕಂಪನಿಗಳು ಕೈಜೋಡಿಸಿವೆ. ಈ ಅಭಿಯಾನದ ಟೈಟಲ್ ಪ್ರಾಯೋಜಕರು ನೀಡುತ್ತಿರುವ ಕೊಡುಗೆ ಮತ್ತು ಡಿಜಿಟಲ್ ಸೇರ್ಪಡೆಯನ್ನು ಪ್ರೋತ್ಸಾಹಿಸುತ್ತಿರುವುದಕ್ಕೆ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇವೆ'' ಎಂದರು.

ಟಿಇ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ

ಟಿಇ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ

ಟಿಇ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಮತ್ತು ಏಷ್ಯಾ ಪೆಸಿಫಿಕ್‍ನ ಎಚ್‍ಆರ್ ವಿಭಾಗದ ಉಪಾಧ್ಯಕ್ಷ ಅರುಣ್ ಕಾಕಟ್ಕರ್ ಅವರು ಮಾತನಾಡಿ, "ಭಾರತದಲ್ಲಿ 25 ನೇ ವರ್ಷಾಚರಣೆ ಸಂಭ್ರಮದಲ್ಲಿರುವ ಟಿಇ ಸಮರ್ಥನಂ ಜತೆ ಸೇರಿ ಈ ಮಹತ್ವಾಕಾಂಕ್ಷೆಯ ಅಭಿಯಾನ ನಡೆಸುತ್ತಿರುವುದಕ್ಕೆ ಸಂತಸವೆನಿಸುತ್ತಿದೆ.

ನಾವು ಕಳೆದ 15 ವರ್ಷಗಳಿಂದ ಸಮರ್ಥನಂ ಜೊತೆಸೇರಿ ವಿಕಲಚೇತನರ ಶ್ರೇಯೋಭಿವೃದ್ಧಿಗೆ ಸಾಕಷ್ಟು ಕೆಲಸ ಮಾಡುತ್ತಾ ಬಂದಿದ್ದೇವೆ. ಇದೀಗ ಡಿಜಿಟಲ್ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ವಿಕಲಚೇತನರ ಜೀವನ ಸುಧಾರಣೆಯ ಉದ್ದೇಶವಿಟ್ಟುಕೊಂಡು ಆಯೋಜಿಸುತ್ತಿರುವ ಈ ಹೊಸ ಕಾರ್ಯಕ್ರಮಕ್ಕೆ ನಾವು ಪಾಲುದಾರರಾಗಿರುವುದು ಅತೀವ ಸಂತಸ ತಂದಿದೆ" ಎಂದು ತಿಳಿಸಿದರು.

ಸಮರ್ಥನಂ ಟಿಇ ಕನೆಕ್ಟಿವಿಟಿಯನ್ನು ಟೈಟಲ್ ಸ್ಪಾನ್ಸರ್

ಸಮರ್ಥನಂ ಟಿಇ ಕನೆಕ್ಟಿವಿಟಿಯನ್ನು ಟೈಟಲ್ ಸ್ಪಾನ್ಸರ್

ಸಮರ್ಥನಂ ಟಿಇ ಕನೆಕ್ಟಿವಿಟಿಯನ್ನು ಟೈಟಲ್ ಸ್ಪಾನ್ಸರ್ ಅನ್ನಾಗಿ ಮಾಡಿಕೊಂಡಿದ್ದು, ನಾರ್ಥನ್ ಟ್ರಸ್ಟ್, ಮೈಕ್ರೋಸಾಫ್ಟ್, ಸೊಸೈಟಿ ಜನರಲ್, ಅಲೆರ್ಗನ್, ಯಸ್ಕಾವ, ಹರ್ಬಲೈಫ್, ಹಿಮಾಲಯ, ಲ್ಯಾಂಡ್‍ಮಾರ್ಕ್ ಮತ್ತು ಫ್ಲೆಕ್ಸ್ ಸೇರಿದಂತೆ ಮತ್ತಿತರೆ ಕಂಪನಿಗಳು ಪ್ರಾಯೋಜಕತ್ವ ವಹಿಸಿಕೊಂಡಿವೆ.

ಜನರಲ್ ಗ್ಲೋಬಲ್ ಸಲೂಶನ್ ಸೆಂಟರ್ ಮತ್ತು ಗ್ಲೋಬಲ್ ಹೆಡ್

ಜನರಲ್ ಗ್ಲೋಬಲ್ ಸಲೂಶನ್ ಸೆಂಟರ್ ಮತ್ತು ಗ್ಲೋಬಲ್ ಹೆಡ್

ಡಿಜಿಟಲ್ ಸೇರ್ಪಡೆಗಾಗಿ ವಾಕ್ ಬಗ್ಗೆ ಮಾತನಾಡಿದ ಸೊಸೈಟಿ ಜನರಲ್ ಗ್ಲೋಬಲ್ ಸಲೂಶನ್ ಸೆಂಟರ್ ಮತ್ತು ಗ್ಲೋಬಲ್ ಹೆಡ್, ಸೊಸೈಟಿ ಜನರಲ್ ಯೂರೋಪಿಯನ್ ಬ್ಯುಸಿನೆಸ್ ಸರ್ವೀಸಸ್‍ನ ಮುಖ್ಯಕಾರ್ಯನಿರ್ವಹಣಾಧಿಕಾರಿ ಮತ್ತು ಗ್ಲೋಬಲ್ ಹೆಡ್ ಸುನೀಲ್ ಶಾ ಅವರು ಮಾತನಾಡಿ, ನಮ್ಮ ಸೊಸೈಟಿ ಜನರಲ್‍ನಲ್ಲಿ ನಾವು ವೈವಿಧ್ಯತೆ ಮತ್ತು ಸೇರ್ಪಡೆಯಲ್ಲಿ ನಂಬಿಕೆ ಇಟ್ಟುಕೊಂಡಿದ್ದೇವೆ. ಇದನ್ನು ಅತ್ಯುತ್ತಮ ಪದ್ಧತಿ ಎಂದಷ್ಟೇ ತಿಳಿದುಕೊಂಡಿಲ್ಲ. ಇದರೊಂದಿಗೆ ಪ್ರತಿಯೊಬ್ಬ ವ್ಯಕ್ತಿಯೂ ವಿನೂತನವಾದ ವ್ಯಕ್ತಿಯಾಗಿರುತ್ತಾನೆ ಎಂಬುದರಲ್ಲಿ ನಂಬಿಕೆ ಇಟ್ಟುಕೊಂಡಿದ್ದೇವೆ'' ಎಂದು ಅಭಿಪ್ರಾಯಪಟ್ಟರು.

English summary
Samathan Trust for the Disabled is organising the 14th edition of Bangalore Walkathon with the theme of “Walk for Digital Inclusion”. Digital inclusion is a fairly new concept which focuses on digital literacy and access to Information and communication technologies (ICT)
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X