• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಟ್ರಿನಿಟಿ ವೃತ್ತ ಮೆಟ್ರೋ ನಿಲ್ದಾಣದಲ್ಲಿ ಯೂನಿಸೆಕ್ಸ್ ಹೇರ್ ಸಲೂನ್ ಆರಂಭ

|

ಬೆಂಗಳೂರು, ಫೆಬ್ರವರಿ 26 : ಟ್ರಿನಿಟಿ ವೃತ್ತದಲ್ಲಿರುವ ನಮ್ಮ ಮೆಟ್ರೋ ನಿಲ್ದಾಣದಲ್ಲಿ ಯೂನಿಸೆಕ್ಸ್ ಹೇರ್ ಸಲೂನ್ ನ್ನು ಬಿಎಂಆರ್ ಸಿಎಲ್ ಎಂಡಿ ಮಹೇಂದ್ರ ಜೈನ್ ಭಾನುವಾರ ಉದ್ಘಾಟಿಸಿದ್ದಾರೆ.

ಆರು ತಿಂಗಳ ಹಿಂದೆ ಸಲ್ಲಿಸಿದ್ದ ಪ್ರಸ್ತಾವನೆಯಂತೆ ಸಲೂನ್ ಸಿದ್ಧಗೊಳ್ಳುತ್ತಿದ್ದು, ಮೆಟ್ರೋ ಹತ್ತುವ ಮೊದಲು ನಿಮ್ಮ ಕೇಶ ವಿನ್ಯಾಸವನ್ನು ನಿಮಗೆ ಬೇಕಾದ ರೀತಿಯಲ್ಲಿ ಬದಲಿಸಿಕೊಳ್ಳಬಹುದು. ಸಿಲಿಕಾನ್ ಸಿಟಿಯ ಜನರಿಗೆ ಟ್ರಾಫಿಕ್ ಸಮಸ್ಯೆಯಿಂದ ಮುಕ್ತಿ ನೀಡಿದ್ದ ಬಿಎಂಆರ್ ಸಿಎಲ್ ಇದೀಗ ಇನ್ನೂ ಹೈಟೆಕ್ ಆಗುತ್ತಿದೆ. ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಶಾಪಿಂಗ್ ಕಾಂಪ್ಲೆಕ್ಸ್ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಒದಗಿಸಬೇಕು ಎಂದು ಆಲೋಚನೆ ನಡೆಸಿತ್ತು.

ಮೆಟ್ರೋ ನಿಲ್ದಾಣಗಳಲ್ಲಿ ಯೂನಿಸೆಕ್ಸ್ ಹೇರ್ ಸಲೂನ್!

ವೇಕಮ್ , ವಾಷಿಂಗ್ ಎಂಬುದು ವ್ಯಾಕ್ಯುಮ್, ಕ್ಲೀನರ್ , ಮಾದರಿಯ ಉಪಕರಣವಾಗಿದ್ದು, ಇದನ್ನು ಬಳಸಿ ಶೇವಿಂಗ್ ಮಾಡಿಸಿಕೊಂಡ ವ್ಯಕ್ತಿಯ ಮೈಮೇಲೆ ಅಥವಾ ದೇಹದ ಮೇಲೆ ಬಿದ್ದ ಕೂದಲನ್ನು ಕ್ಲೀನ್ ಮಾಡಲಾಗುತ್ತದೆ.

ಹೇರ್ ಸಲೂನ್ ಗೆ 5 ವರ್ಷಗಳ ಗುತ್ತಿಗೆ

ಹೇರ್ ಸಲೂನ್ ಗೆ 5 ವರ್ಷಗಳ ಗುತ್ತಿಗೆ

ಹೈದರಾಬಾದ್ ಮೂಲದ ಸೂಪರ್ ಎಕ್ಸ್ ಪ್ರೆಸ್ ಸಲೂನ್ 5 ವರ್ಷಗಳ ಗುತ್ತಿಗೆ ಪಡೆದುಕೊಂಡಿದ್ದು ಬೆಳಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಸಲೂನ್ ತೆಗೆದಿರುತ್ತದೆ. ಮೆಟ್ರೋ ನಿಲ್ದಾಣದೊಳಗೆ ಸಲೂನ್ ಆರಂಭಿಸುತ್ತಿರುವುದು ಇದೇ ಮೊದಲ ಬಾರಿಯಾಗಿದೆ. ವೇಕಮ್ ವಾಷಿಂಗ್ ಎಂಬುದು ಸಲೂನ್ ನ ಮುಖ್ಯ ಪರಿಕಲ್ಪನೆಯಾಗಿದೆ.

ಸಲೂನ್ ಸ್ವಚ್ಛವಾಗಿಡಲು ವಿಶೇಷ ಕ್ರಮ

ಸಲೂನ್ ಸ್ವಚ್ಛವಾಗಿಡಲು ವಿಶೇಷ ಕ್ರಮ

ತಲೆಕೂದಲು ಕತ್ತರಿಸಿದ ನಂತರ ವ್ಯಾಕ್ಯುಮ್ ಕ್ಲೀನರ್ ತರಹದ ಉಪಕರಣವನ್ನು ಬಳಸುತ್ತಾರೆ. ಇದರಿಂದ ತಲೆಕೂದಲು ಮತ್ತು ಶೇವಿಂಗ್ ಮಾಡಿಸಿಕೊಂಡ ವ್ಯಕ್ತಿಯ ಬಟ್ಟೆಯಲ್ಲಿ ಅಥವಾ ದೇಹದಮೇಲೆ ಕೂದಲು ಬೀಳುವುದಿಲ್ಲ ಎಂದು ಸಲೂನ್ ನ ಶ್ರೀದೇವಿ ರೆಡ್ಡಿ ತಿಳಿಸಿದ್ದಾರೆ. ಅಲ್ಲದೆ ಗ್ರಾಹಕರ ಕೂದಲು ಕತ್ತರಿಸಲು ಬಳಸಿದ ಬಾಚಣಿಗೆಯನ್ನು ಆ ವ್ಯಕ್ತಿಗೆ ಉಚಿತವಾಗಿ ನೀಡಲಾಗುತ್ತದೆ. ಆವರಣ ಸುತ್ತಮುತ್ತ ಸ್ವಚ್ಛವಾಗಿಟ್ಟುಕೊಳ್ಳಲು ಈ ಎಲ್ಲಾ ಕ್ರಮವನ್ನು ಅನುಸರಿಸಲಾಗುತ್ತದೆ.

ಸಲೂನ್ ಹೊಂದುವ ಮೆಟ್ರೋ ಸ್ಟೇಷನ್ ಗಳು

ಸಲೂನ್ ಹೊಂದುವ ಮೆಟ್ರೋ ಸ್ಟೇಷನ್ ಗಳು

ಈ ಸಂಸ್ಥೆಯು ಎಂಜಿ ರಸ್ತೆ, ಇಂದಿರಾನಗರ, ಬೈಯಪ್ಪನಹಳ್ಳಿ ಮತ್ತು ಮಹಾಲಕ್ಷ್ಮೀ ಲೇಔಟ್ ಮೆಟ್ರೋ ನಿಲ್ದಾಣದಲ್ಲಿ ಕೂಡ ಸಲೂನ್ ಆರಂಭಿಸಲು ಗುತ್ತಿಗೆ ಪಡೆದಿದೆ. ನಮ್ಮ ಮೆಟ್ರೋ 36 ನಿಲ್ದಾಣಗಳಲ್ಲಿ ಎಲೆಕ್ಟ್ರಿಕ್ ಬಾಡಿಗೆ ಬೈಕ್2012 ರಲ್ಲಿಯೇ ಬೆಂಗಳೂರಿನ ಮೆ10 ಸಾವಿರ ಪ್ರಯಣಿಕರು ಬಂದು ಹೋಗುತ್ತಾರೆ. ಹೀಗಾಗಿ ಇದು ಉತ್ತಮ ಅವಕಾಶವಾಗಿದೆ. ಕಡಿಮೆ ಸಮಯದಲ್ಲಿ ಕಡಿಮೆ ದರದಲ್ಲಿ ಸಲೂನ್ ಸೇವೆ ನೀಡಲಾಗುತ್ತದೆ.

ನಮ್ಮ ಮೆಟ್ರೋ, ಬಿಎಂಆರ್ ಸಿಎಲ್, ಹೇರ್ ಸಲೋನ್, ಮಹೇಂದ್ರ ಜೈನ್

ಮಹಿಳೆಯರು, ಪುರುಷರ ಹೇರ್ ಕಟ್ ಗೆ ಪ್ರತ್ಯೇಕ ದರ

ಮಹಿಳೆಯರು, ಪುರುಷರ ಹೇರ್ ಕಟ್ ಗೆ ಪ್ರತ್ಯೇಕ ದರ

ಸಲೂನ್ ಗೆ ಬಂದ 8 ಮಂದಿ ಪುರುಷ ಸಿಬ್ಬಂದಿಗಳು ಇರುತ್ತಾರೆ. ಪ್ರತಿ ವ್ಯಕ್ತಿಗೆ ಶೇ.18 ಜಿಎಸ್ ಟಿ ಸೇರಿದಂತೆ 150 ರೂ, ಮಹಿಳೆಯರಿಗೆ ಯಾವುದೇ ವಿನ್ಯಾಸದಲ್ಲಿ ತಲೆಕೂದಲು ಕಟ್ ಮಾಡಿಸಿಕೊಂಡರೂ 200 ರೂ ವಿಧಿಸಲಾಗುತ್ತದೆ ಎಂದು ಶ್ರೀದೇವಿ ರೆಡ್ಡಿ ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
BMRCL MD Mahendra Jain inaugurated the High tech salon at the Trinity Metro station on sunday. Namma metro which opened its stations for commercial activity , has now officially unveiled a hair Salon at Trinity Metro station.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more