ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜುಲೈ 28ರಂದು ಬಿಜೆಪಿ ಸಾಧನಾ ಸಮಾವೇಶ; ಬೆಂಗಳೂರಿನಲ್ಲಿ ಸಂಚಾರ ಮಾರ್ಗಗಳಲ್ಲಿ ಬದಲಾವಣೆ

|
Google Oneindia Kannada News

ಬೆಂಗಳೂರು, ಜುಲೈ 27: ಕರ್ನಾಟಕ ರಾಜ್ಯ ಸರ್ಕಾರ ದೊಡ್ಡಬಳ್ಳಾಪುರದ ಎಲ್ ಟಿ ಫ್ಯಾಕ್ಟರಿ ಮುಂಭಾಗದ ಮೈದಾನದಲ್ಲಿ ಜುಲೈ 28ರಂದು ಸಾಧನ ಸಮಾವೇಶ ಕಾರ್ಯಕ್ರಮವನ್ನು ಹಮ್ಮಿಕೊಂಡಿಳ್ಳಲಾಗಿದೆ. ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬೆಂಗಳೂರು ನಗರ ಹಾಗೂ ವಿವಿಧ ಕಡೆಗಳಿಂದ ಸಾರ್ವಜನಿಕರು ಹಾಗೂ ಗಣ್ಯವ್ಯಕ್ತಿಗಳು ಆಗಮಿಸುವ ನಿರೀಕ್ಷೆ ಇರುವುದರಿಂದ, ಸಂಚಾರ ದಟ್ಟಣೆ ಅಧಿಕವಾಗುವ ಸಾಧ್ಯತೆಗಳಿರುತ್ತದೆ.

ಆದ್ದರಿಂದ ಸಾರ್ವಜನಿಕರು ಈ ಕೆಳಕಂಡಂತೆ ಪರ್ಯಾಯ ಮಾರ್ಗಗಳನ್ನು ಬಳಸಲು ಸಂಚಾರಿ ಪೊಲೀಸರು ಕೋರಿಕೊಂಡಿದ್ದಾರೆ.

ಬೆಂಗಳೂರು ನಗರದಿಂದ ದೊಡ್ಡಬಳ್ಳಾಪುರ ತಲುಪಲು ಇರುವ ಮಾರ್ಗಗಳು:

ಬಸವನಗುಡಿ, ಹನುಮಂತನಗರ, ಚಾಮರಾಜಪೇಟೆ, ಜೆ.ಜೆ ನಗರ ಕಡೆಯಿಂದ ಬರುವ ವಾಹನಗಳಿಗೆ
ಗೂಡ್ ಶೆಡ್ ರಸ್ತೆ - ಆನಂದರಾವ್ ಸರ್ಕಲ್ ಫ್ಲೈ ಓವರ್ - ಓಲ್ಡ್ ಜೆಡಿಎಸ್ ಕಛೇರಿ - ರೇಸ್ ಕೋರ್ಸ್ ರಸ್ತೆ - ಬಲ ತಿರುವು - ಕೆ.ಕೆ ರಸ್ತೆ - ವಿಂಡ್ಸರ್ ಮ್ಯಾನರ್, ಜಂಕ್ಷನ್ ಎಡ ತಿರುವು - ಬಳ್ಳಾರಿ ರಸ್ತೆ- ಮೇಖ್ರಿ ಸರ್ಕಲ್ ಮುಂಖಾತರ ಸಂಚರಿಸಬಹುದಾಗಿರುತ್ತದೆ.

Sadhana Samavesha on July 28th, See Bengaluru Traffic Diversion Details

ಜೆ.ಪಿ. ನಗರ, ಜಯನಗರ ಕಡೆಯಿಂದ ಬರುವ ವಾಹನಗಳಿಗೆ
ಜೆ.ಸಿ. ರಸ್ತೆ - ಟೌನ್ ಹಾಲ್ ಜಂಕ್ಷನ್- ಎನ್ ಆರ್ ಜಂಕ್ಷನ್, ಪೊಲೀಸ್ ಕಾರ್‍ನರ್, ಎಡತಿರುವ , ಕೆಜಿ ರಸ್ತೆ, ಮೈಸೂರು ಬ್ಯಾಂಕ್‌ ಸರ್ಕಲ್ - ಬಲ ತಿರುವು - ಪ್ಯಾಲೇಸ್ ರಸ್ತೆ - ಮಹಾರಾಣಿ ಜಂಕ್ಷನ್- ಸಿಐಡಿ- ಬಸವೇಶ್ವರ ಸರ್ಕಲ್- ಬಲ ತಿರುವು - ಓಲ್ಡ್ ಹೈಗ್ರೌಂಡ್ಸ್ ಜಂಕ್ಷನ್, ವಿಂಡ್ಸರ್ ಮ್ಯಾನರ್- ಮೇಖ್ರಿ ಸರ್ಕಲ್ ಮುಂಖಾತರ ಸಂಚರಿಸಬಹುದಾಗಿರುತ್ತದೆ.

ಕೋರಮಂಗಲ, ಅಶೋಕನಗರ, ಆನೆಪಾಳ್ಯ, ವಿವೇಕನಗರ ಕಡೆಯಿಂದ ಬರುವ ವಾಹನಗಳಿಗೆ
ರಿಚ್ಮಂಡ್ ಸರ್ಕಲ್- ಎಂಆರ್‍ಎಂಆರ್- ಹಡ್ಸನ್ ಸರ್ಕಲ್ ಬಲತಿರುವು- ಕೆಬಿ ರಸ್ತೆ- ಸಿದ್ದಲಿಂಗಯ್ಯ ಜಂಕ್ಷನ್- ಕ್ವೀನ್ಸ್ ಜಂಕ್ಷನ್ ಎಡತಿರುವು- ಪೊಲೀಸ್ ತಿಮ್ಮಯ್ಯ ಜಂಕ್ಷನ್ - ರಾಜಭವನ ರಸ್ತೆ- ಬಸವೇಶ್ವರ ಜಂಕ್ಷನ್ ಬಲತಿರುವು- ವಿಂಡ್ಸರ್ ಮ್ಯಾನರ್ ಜಂಕ್ಷನ್- ಬಳ್ಳಾರಿ ರಸ್ತೆ- ಮೇಖ್ರಿ ಸರ್ಕಲ್ ಮುಂಖಾತರ ಸಂಚರಿಸಬಹುದಾಗಿರುತ್ತದೆ.

Sadhana Samavesha on July 28th, See Bengaluru Traffic Diversion Details

ಭಾರಿ ವಾಹನಗಳ ಬದಲಾವಣೆಯ ಮಾರ್ಗ (ತುಮಕೂರು ಕಡೆಗೆ ಹೊಗುವ ವಾಹನಗಳಿಗೆ ಮಾತ್ರ
ಅನಂತಪುರ (ಎನ್ ಹೆಚ್‌44) ಬಾಗೇಪಲ್ಲಿ, ಚಿಕ್ಕಬಳ್ಳಾಪುರ ಕಡೆಯಿಂದ ಬರುವ ಬಾರೀ ವಾಹನಗಳಿಗೆ ದೊಡ್ಡಬಳ್ಳಾಪುರ ಕ್ರಾಸ್ ದೇವನಹಳ್ಳಿ (ಎನ್‌.ಹೆಚ್‌44) ಬದಲಾಗಿ ದೇವನಹಳ್ಳಿಯ ರಾಣಿ ಕ್ರಾಸ್ (ಎನ್‌.ಹೆಚ್‌44) ಇರುತ್ತದೆ.

ಡೈವರ್ಶನ್ ಪಾಯಿಂಟ್ಸ್ ಈ ಕೆಳಕಂಡಂತೆ ಇರುತ್ತದೆ.
*ರಾಣಿ ಕ್ರಾಸ್ ಬೆಂಗಳೂರು ನಗರ ಸರಹದ್ದು
*ನಂದಿ ರಸ್ತೆ
*ನಿಲೇರಿ ಕ್ರಾಸ್(ಬೆಂಗಳೂರು ಗ್ರಾಮಾಂತರ)
*ಕಾರೆಹಳ್ಳಿ ಕ್ರಾಸ್
*ಹೆಗಡೆಹಳ್ಳಿ ಕ್ರಾಸ್
*ಮೆಳೆ ಕೋಟೆ ಜಕ್ಷನ್
*ಮೆಳೆಕೋಟೆ
*ಘಾಟಿ ರಸ್ತೆ
*ಕಂಟನಗುಂಟೆ ಜಂಕ್ಷನ್
* ಹೊಸಹಳ್ಳಿ ರೋಡ್ ಜಂಕ್ಷನ್
* ಮರಳೇನಹಳ್ಳಿ ರೋಡ್
* ಮರಳೇನಹಳ್ಳಿ ರೋಡ್ ಜಂಕ್ಷನ್ - ತುಮಕೂರು ರಸ್ತೆ

Sadhana Samavesha on July 28th, See Bengaluru Traffic Diversion Details

ಬಾಗೇಪಲ್ಲಿ-ಚಿಕ್ಕಬಳ್ಳಾಪುರ ಕಡೆಯಿಂದ ಬಂದು (ದೇವನಹಳ್ಳಿ ಎನ್‌ಹೆಚ್-44) ಕಾರ್ಯಕ್ರಮಕ್ಕೆ ಹೋಗುವ ಮಾರ್ಗ - 2
* ದೊಡ್ಡಬಳ್ಳಾಪುರ ಕ್ರಾಸ್ (ಎನ್‌ಹೆಚ್ 44) ದೇವನಹಳ್ಳಿ ಬೆಂಗಳೂರುನಗರ ಸರಹದ್ದು ವಿಶ್ವನಾಥಪುರ-ಚಪ್ಪರಕಲ್ಲು-ನಾಗನಾಯಕನಹಳ್ಳಿ-ರಘುನಾಥಪುರ -ದೊಡ್ಡಬಳ್ಳಾಪುರ

ಕೋಲಾರ ಕೆಜಿಎಫ್ ಹೊಸಕೋಟೆ ಕಡೆಯಿಂದ ದೊಡ್ಡಬಳ್ಳಾಪುರ ಕಾರ್ಯಕ್ರಮಕ್ಕೆ ಹೋಗುವ ಮಾರ್ಗ
* ವಿಜಯಪುರ -ವಿಜಯಪುರ ಕ್ರಾಸ್ ದೊಡ್ಡಬಳ್ಳಾಪುರ ಕ್ರಾಸ್ (ಎನ್‌ಹೆಚ್ 44) ದೇವನಹಳ್ಳಿ, ಬೆಂಗಳೂರು: ಬೆಂಗಳೂರು ನಗರ ಸರಹದ್ದು- ವಿಶ್ವನಾಥಪುರ-ಚಪ್ಪರಕಲ್ಲು-ನಾಗನಾಯಕನಹಳ್ಳಿ-ರಘುನಾಥಪುರ -ದೊಡ್ಡಬಳ್ಳಾಪುರ ತಲುಪಬಹುದು.

ಬೆಂಗಳೂರು ನಗರ ಹೆಬ್ಬಾ ಫ್ಲೈಓವರ್ ನಿಂದ ದೊಡ್ಡಬಳ್ಳಾಪುರ ಕಾರ್ಯಕ್ರಮಕ್ಕೆ ಹೋಗುವ ಮಾರ್ಗ
* ಬಸ್ ಮತ್ತು ಕ್ಯಾಬ್‌ ಗಳಿಗೆ
ಹೆಬ್ಬಾಳ ಫ್ಲೈಓವರ್- ಕೆಂಪಾಪುರ ಕ್ರಾಸ್- ಫ್ಲೈಓವರ್- ಕಾಫಿಡೇ-ಹುಣಸೇಮಾರನ ಹಳ್ಳಿ ಕ್ರಾಸ್-ಕೋಟೆ ಕ್ರಾಸ್- ಸಾದಹಳ್ಳಿ ಗೇಟ್-ವಯಾ ಟೋಲ್ ದೊಡ್ಡಬಳ್ಳಾಪುರ ಕ್ರಾಸ್-ಎಡ ತಿರುವು-ಬೆಂಗಳೂರು ಗ್ರಾಮಾಂತರ ಜಿಲ್ಲಾ ಸರಹದ್ದು- ವಿಶ್ವನಾಥಪುರ-ಚಪ್ಪರಕಲ್ಲು-ನಾಗನಾಯಕನಹಳ್ಳಿ-ರಘುನಾಥಪುರ -ದೊಡ್ಡಬಳ್ಳಾಪುರ ತಲುಪಬಹುದು.

ದ್ವಿಚಕ್ರವಾಹನ, ಕಾರು ಮೂಲಕ ಹೋಗುವವರಿಗೆ
ಹೆಬ್ಬಾಳ ಫ್ಲೈಓವರ್- ಸಂಜೀವ ನಗರ ಕ್ರಾಸ್- ಎಡ ತಿರುವು - ಸರ್‍ವೀಸ್ ರಸ್ತೆ- ಕೋಡಿಗೆ ಹಳ್ಳಿ ಕ್ರಾಸ್- ಬ್ಯಾಟರಾಯನಪುರ ಕ್ರಾಸ್- ಜಕ್ಕೂರು ಕ್ರಾಸ್- ಎಡತಿರುವು- ಫ್ಲೈಓವರ್- ಯಲಹಂಕ ಪೊಲೀಸ್ ಠಾಣೆ- ದೊಡ್ಡಬಳ್ಳಾಪುರ ರಸ್ತೆ- ಪುಟ್ಟೇನಹಳ್ಳಿ- ಬೆಂಗಳೂರು ಗ್ರಾಮಾಂತರ ಸರಹದ್ದು- ಸಿಂಗನಾಯಕನಹಳ್ಳಿ-ರಾಜಾನುಕುಂಟೆ-ಮಾರಸಂದ್ರ ದೊಡ್ಡಬಳ್ಳಾಪುರ ತಲುಪಬಹುದು.

ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಸಮಾವೇಶಕ್ಕೆ ಸಂಚರಿಸುವ ವಾಹನಗಳ ಮಾರ್ಗ
* ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಬರುವವವರು ದಾಬಾಸ್ ಪೇಟೆ ಬಳಿ ಎಡತಿರುವು ಪಡೆದು ದೊಡ್ಡಬಳ್ಳಾಪುರ ತಲುಪುವುದು

ಕನಕಪುರ ಮತ್ತು ಮೈಸೂರು ರಸ್ತೆಯ ಮೂಲಕ ಸಮಾವೇಶಕ್ಕೆ ಸಂಚರಿಸುವ ವಾಹನಗಳ ಮಾರ್ಗ
* ಕನಕಪುರ ಮತ್ತು ಮೈಸೂರು, ರಸ್ತೆಯ ಕಡೆಯಿಂದ ಸಮಾವೇಶಕ್ಕೆ ಹೋಗುವ ವಾಹನಗಳು ಬೆಂಗಳೂರು ನಗರದ ಒಳಭಾಗಕ್ಕೆ ಬರುವ ಮಾರ್ಗಗಳನ್ನು ಬಳಸದಂತೆ ಕೋರಿ ಈ ಮಾರ್ಗವನ್ನು ಸೂಚಿಸಿದೆ.

ಕನಕಪುರ ಕಡೆಯಿಂದ ಬರುವ ವಾಹನಗಳಿಗೆ ಸೂಚಿಸಿರುವ ಮಾರ್ಗ
* ಕನಕಪುರ, ನೈಸ್ ರಸ್ತೆಯ ಮೂಲಕ ಮಾದವಾರ ನೈಸ್ ಟೋಲ್ ಬಳಿ ನಿರ್ಗಮಿಸಿ- ನೆಲಮಂಗಲದ ಬಲ ತಿರುವು ಪಡೆದು ದೊಡ್ಡಬಳ್ಳಾಪುರಕ್ಕೆ ತಲುಪುವುದು.

ಮೈಸೂರು ರಸ್ತೆಯ ಕಡೆಯಿಂದ ಬರುವ ವಾಹನಗಳಿಗೆ ಸೂಚಿಸಿರುವ ಮಾರ್ಗ
* ಪಂಚಮುಖಿ ದೇವಸ್ಥಾನ ಹತ್ತಿರ ನೈಸ್ ರಸ್ತೆಯ ಮೂಲಕ - ಮಾದವಾರ ನೈಸ್ ಟೋಲ್ ಬಳಿ ನಿರ್ಗಮಿಸಿ- ನೆಲಮಂಗಲದ ಬಲ ತಿರುವು ಪಡೆದು ದೊಡ್ಡಬಳ್ಳಾಪುರಕ್ಕೆ ತಲುಪುವುದು.

ಬೆಂಗಳೂರು ನಗರದ ಒಳಗಡೆಯಿಂದ ಸಮಾವೇಶಕ್ಕೆ ಸಂಚರಿಸುವ ವಾಹನಗಳ ಮಾರ್ಗ
* ಸುಮ್ಮನಹಳ್ಳಿ ಬನಶಂಕರಿ ರಿಂಗ್ ರಸ್ತೆ ಮತ್ತು ಹಳೆಯ ರಿಂಗ್ ರಸ್ತೆ ನಾಗರಭಾವಿ - ಮೂಲಕ - ಸಮ್ಮನಹಳ್ಳಿ ಮಾರ್ಗವಾಗಿ - ರಾಜ್ ಕುಮಾರ್ ಸಮಾಧಿ - ಗೊರಗುಂಟೆ ಪಾಳ್ಯ - ಬಿಇಎಲ್ ವೃತ್ತ - ಹೆಬ್ಬಾಳ - ಯಲಹಂಕ ಮಾರ್ಗವಾಗಿ ದೊಡ್ಡಬಳ್ಳಾಪುರಕ್ಕೆ ತಲುಪುವುದು ಎಂದು ಬೆಂಗಳೂರು ನಗರದ ಸಂಚಾರವನ್ನು ಟೈವರ್‍ಷನ್ ಮಾಡಲಾಗಿದೆ.

English summary
Karnataka State Government has organized Sadhana Samavesha at the ground in front of LT Factory, Doddaballapur on July 28. There are chances of heavy traffic. As a precautionary measures, traffic police suggested alternative routes for vehicle riders, Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X