ಹುಟ್ಟು ಹಬ್ಬದ ಜೊತೆಗೆ ಗೌಡರ ಬಿರುಸಿನ ಪ್ರಚಾರ

ಬೆಂಗಳೂರು, ಮಾ. 19 : ಬೆಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮತ್ತು ಮಾಜಿ ಸಿಎಂ ಡಿವಿ ಸದಾನಂದ ಗೌಡ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ. ಮಂಗಳವಾರ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡ ಅವರು ಉಳ್ಳಾಲ ಉಪನಗರದಲ್ಲಿ ಬಿರುಸಿನ ಪ್ರಚಾರ ನಡೆಸಿ ಮತಯಾಚಿಸಿದರು.

ಮಂಗಳವಾರ ತಮ್ಮ 62ನೇ ಜನ್ಮದಿನವನ್ನು ಪ್ರಚಾರದ ಭರಾಟೆಯ ನಡುವೆಯೇ ಡಿವಿ ಸದಾನಂದ ಗೌಡರು, ಸಂಜಯನಗರ ಬಡಾವಣೆಯ ನಿವಾಸದಲ್ಲಿ ಸರಳವಾಗಿ ಆಚರಿಸಿಕೊಂಡರು. ಬೆಂಗಳೂರು ಉತ್ತರ ಕ್ಷೇತ್ರದ ಸಂಸದ ಡಿಬಿ ಚಂದ್ರೇಗೌಡ ಮುಂತಾದವರು ಸದಾನಂದ ಗೌಡರಿಗೆ ಹುಟ್ಟು ಹಬ್ಬದ ಶುಭಾಶಯ ಕೋರಿದರು. [ಬಿರುಸಿನ ಮತಯಾಚನೆ ಚಿತ್ರಗಳು]

ಕೇಕ್ ಕತ್ತರಿಸಿ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಡಿವಿ ಸದಾನಂದ ಗೌಡರು, ಇದು ಜನ್ಮ ದಿನ ಆಚರಿಸುವ ಸಮಯವಲ್ಲ, ನಾವೆಯಲ್ಲರೂ ಚುನಾವಣೆ ಎದುರಿಸುತ್ತಿದ್ದೇವೆ. ನಿಮ್ಮ ಸಹಕಾರ ಬಹಳ ಮುಖ್ಯ, ಮತದಾನದ ವರೆಗೆ ಎಲ್ಲರೂ ಶ್ರಮವಹಿಸಿ ಕೆಲಸ ಮಾಡಬೇಕು ಎಂದು ಕರೆ ನೀಡಿದರು. ನಂತರ ಉಳ್ಳಾಲ ಉಪನಗರದಲ್ಲಿ ಪ್ರಚಾರ ನಡೆಸಿದರು. ಚಿತ್ರಗಳಲ್ಲಿ ಡಿವಿಎಸ್ ಹುಟ್ಟು ಹಬ್ಬ ಮತ್ತು ಪ್ರಚಾರ

62ನೇ ಹುಟ್ಟು ಹಬ್ಬ

62ನೇ ಹುಟ್ಟು ಹಬ್ಬ

ಮಂಗಳವಾರ ಮಾಜಿ ಸಿಎಂ ಡಿವಿ ಸದಾನಂದ ಗೌಡ ಸಂಜಯನಗದಲ್ಲಿನ ತಮ್ಮ ನಿವಾಸದಲ್ಲಿ ಕೇಕ್ ಕತ್ತರಿಸುವ ಮೂಲಕ ಜನ್ಮ ದಿನವನ್ನು ಸರಳವಾಗಿ ಅಚರಿಸಿಕೊಂಡರು. ಹಲವಾರು ಬಿಜೆಪಿ ನಾಯಕರು ಸದಾನಂದ ಗೌಡರಿಗೆ ಜನ್ಮ ದಿನದ ಶುಭಾಶಯ ಸಲ್ಲಿಸಿದರು.

ಚಂದ್ರೇಗೌಡರಿಂದ ಶುಭಾಶಯ

ಚಂದ್ರೇಗೌಡರಿಂದ ಶುಭಾಶಯ

ಸದಾನಂದ ಗೌಡರಿಗೆ ಹುಟ್ಟು ಹಬ್ಬ ಕಾರ್ಯದಲ್ಲಿ ಬಾಗವಹಿಸಿದ್ದ ಬೆಂಗಳೂರು ಉತ್ತರ ಕ್ಷೇತ್ರದ ಸಂಸದ ಡಿಬಿ ಚಂದ್ರೇಗೌಡ, ಸದಾನಂದ ಗೌಡ ಪ್ರರವಾಗಿ ಮತಯಾಚಿಸುತ್ತಿದ್ದೇನೆ. ಅವರು ಸಂಸದರಾಗಲು ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರ ಶ್ರಮ ಮತ್ತು ಕೊಡುಗೆ ಅಗತ್ಯ ಎಂದು ಹೇಳಿದರು.

ಪ್ರಚಾರದಲ್ಲಿ ಬ್ಯುಸಿ

ಪ್ರಚಾರದಲ್ಲಿ ಬ್ಯುಸಿ

ಸರಳವಾಗಿ ಹುಟ್ಟು ಹಬ್ಬ ಆಚರಿಸಿಕೊಂಡ ನಂತರ ಡಿವಿ ಸದಾನಂದ ಗೌಡರು ಉಳ್ಳಾಲ ಉಪನಗರದಲ್ಲಿ ಪ್ರಚಾರ ಕೈಗೊಂಡರು. ಈ ಸಮಯದಲ್ಲಿ ಮಾತನಾಡಿದ ಅವರು, ಇದು ಹುಟ್ಟು ಹಬ್ಬ ಆಚರಿಸಿಕೊಳ್ಳುವ ಸಮಯವಲ್ಲ. ಚುನಾವಣೆ ಎದುರಿಸುತ್ತಿದ್ದೇವೆ. ಮತದಾನದ ತನಕ ಎಲ್ಲಾ ಕಾರ್ಯಕರ್ತರು ಶ್ರಮ ವಹಿಸಿ ಕೆಲಸ ಮಾಡಬೇಕು ಎಂದು ಕರೆ ನೀಡಿದರು.

ಮೋದಿ ಪ್ರಧಾನಿಯಾಗಬೇಕು

ಮೋದಿ ಪ್ರಧಾನಿಯಾಗಬೇಕು

ಕರ್ನಾಟಕದಲ್ಲಿ ಬಿಜೆಪಿ ಹೆಚ್ಚಿನ ಸ್ಥಾನಗಳನ್ನು ಗಳಿಸಿದರೆ ಮೋದಿ ದೇಶದ ಆಡಳಿತ ಚುಕ್ಕಾಣಿ ಹಿಡಿಯಲು ಸಾಧ್ಯವಾಗುತ್ತದೆ. ಈ ಸಂದೇಶವನ್ನು ರಾಜ್ಯದೆಲ್ಲಡೆ ಸಾರುವ ಜವಾಬ್ದಾರಿಯನ್ನು ಕಾರ್ಯಕರ್ತರು ಮಾಡಬೇಕು ಎಂದರು. [ಚಿತ್ರಕೃಪೆ : ಸದಾನಂದ ಗೌಡ ಫೇಸ್ ಬುಕ್]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+