ಎರಡು ಹೊಸ ಕಾರಿಗೆ ಬೇಡಿಕೆ ಇಟ್ಟ ಸದಾನಂದ ಗೌಡರು!

ಬೆಂಗಳೂರು, ಡಿ. 23 : ಮಾಜಿ ಸಿಎಂ ಮತ್ತು ವಿಧಾನ ಪರಿಷತ್ ಪ್ರತಿಪಕ್ಷ ನಾಯಕದ ಡಿ.ವಿ.ಸದಾನಂದ ಗೌಡರಿಗೆ ತಮ್ಮ ಬೆಂಗಾವಲು ಪಡೆಯಿಂದ ತೊಂದರೆ ಉಂಟಾಗುತ್ತಿದೆಯಂತೆ. ಆದ್ದರಿಂದ, ತಮ್ಮ ಬೆಂಗಾವಲು ಪಡೆಗೆ ಎರಡು ಹೊಸ ಕಾರುಗಳನ್ನು ಒದಗಿಸುವಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಮತ್ತೊಮ್ಮೆ ಪತ್ರ ಬರೆದಿದ್ದಾರೆ.

ಮುಖ್ಯಮಂತ್ರಿಗಳಾಗಿದ್ದ ಕಾಲದಲ್ಲಿ ಸಾಲು-ಸಾಲು ಕಾರುಗಳ ನಡುವೆ ಸಂಚರಿಸುತ್ತಿದ್ದ ಡಿ.ವಿ.ಸದಾನಂದ ಗೌಡರಿಗೆ ಸದ್ಯ ಬೆಂಗಾವಲು ಪಡೆ ಕಾರುಗಳು ತೊಂದರೆ ನೀಡುತ್ತಿವೆ. ಅವರಿಗೆ ನೀಡಲಾಗಿರುವ ಕಾರುಗಳು ಸುಸ್ಥಿತಿಯಲ್ಲಿಲ್ಲ. ಸಂಚಾರದ ವೇಳೆ ಅವು ಅನೇಕ ಬಾರಿ ಮಾರ್ಗ ಮಧ್ಯೆ ಕೆಟ್ಟು ನಿಲ್ಲುತ್ತಿವೆಯಂತೆ.

D.V.Sadanadda Gowda

ಸದ್ಯ ಸದಾನಂದ ಗೌಡರ ಬೆಂಗಾವಲು ಪಡೆಗಾಗಿ ಅಂಬಾಸಿಡರ್ ಕಾರು ನೀಡಲಾಗಿದೆ. ಆದರೆ, ಅದು ಗೌಡರನ್ನು ಹಿಂಬಾಲಿಸುವ ಬದಲು ಕೆಟ್ಟು ನಿಲ್ಲುವುದೇ ಹೆಚ್ಚು. ಈಗಾಗಲೇ ಹಲವಾರು ಬಾರಿ ಸದಾನಂದ ಗೌಡರು ಬೆಂಗಾವಲು ಪಡೆಯ ವಾಹನದಿಂದಾಗಿ ತೊಂದರೆ ಅನುಭವಿಸಿದ್ದಾರಂತೆ.

ಆದ್ದರಿಂದ ಎರಡು ಹೊಸ ಬೊಲೆರೋ ವಾಹನಗಳನ್ನು ತಮ್ಮ ಬೆಂಗಾವಲು ಪಡೆಗೆ ಒದಗಿಸುವಂತೆ ಅವರು ಸರ್ಕಾರಕ್ಕೆ ಹಿಂದೆಯೂ ಮನವಿ ಮಾಡಿದ್ದರು. ಸದ್ಯ ಸರ್ಕಾರ ಅದನ್ನು ಪರಿಗಣಿಸದೇ ಇರುವುದರಿಂದ ಮತ್ತೊಮ್ಮೆ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ. ಸಿಎಂ ಸದಾನಂದ ಗೌಡರ ಮನವಿಗೆ ಸ್ಪಂದಿಸುತ್ತಾರೆಯೇ ಕಾದು ನೋಡಬೇಕು.

ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಮಾಜಿ ಸಿಎಂಗಳಾದ ಬಿ.ಎಸ್.ಯಡಿಯೂರಪ್ಪ ಮತ್ತು ಡಿ.ವಿ.ಸದಾನಂದ ಗೌಡರಿಗೆ ನೀಡಲಾಗಿದ್ದ, ಅನಧಿಕೃತ ಪೈಲೆಟ್ ವಾಹನಗಳನ್ನು ಕಡಿತಗೊಳಿಸಲಾಗಿತ್ತು. ಸದ್ಯ ಅವರಿಗೆ ಒಂದು ಬೆಂಗಾವಲು ಪಡೆ ವಾಹನ ನೀಡಲಾಗಿದೆ. ಆದರೆ, ಅದು ಅವರನ್ನು ಹಿಂಬಾಲಿಸುವ ಬದಲು ಕೆಟ್ಟು ನಿಂತಿರುತ್ತದೆ.

ಡಿ.ವಿ.ಸದಾನಂದ ಗೌಡರು ಸದ್ಯ ಮಾಜಿ ಸಿಎಂ ಮಾತ್ರವಲ್ಲ, ವಿಧಾನಪರಿಷತ್ ಪ್ರತಿಪಕ್ಷ ನಾಯಕರು ಹೌದು. ಆದ್ದರಿಂದ ಅವರಿಗೆ ಸರ್ಕಾರ ಪ್ರತಿಪಕ್ಷ ನಾಯಕರಿಗೆ ನೀಡುವ ಎಲ್ಲಾ ಸೌಲಭ್ಯ ನೀಡಬೇಕು. ಆದ್ದರಿಂದ ಎರಡು ಹೊಸ ಕಾರುಗಳನ್ನು ನೀಡುವಂತೆ ಕೋರಿ ಗೌಡರು ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+