ಸಾಲು ಮರದ ತಿಮ್ಮಕ್ಕ ಮನೆಯಲ್ಲಿ ಕಳ್ಳತನ

ಬೆಂಗಳೂರು, ಜನವರಿ 08 : ಮಂಜುನಾಥ ನಗರದಲ್ಲಿರುವ ಸಾಲು ಮರದ ತಿಮ್ಮಕ್ಕ ಅವರ ಮನೆಯಲ್ಲಿ ಕಳ್ಳತನ ನಡೆದಿದೆ. ಸುಮಾರು 50 ಸಾವಿರ ಹಣ, ಬೆಳ್ಳಿ ಕಡಗವನ್ನು ಕದ್ದು ಕಳ್ಳರು ಪರಾರಿಯಾಗಿದ್ದಾರೆ. ಪೀಣ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸಾಲು ಮರದ ತಿಮ್ಮಕ್ಕ ಅವರು ಕಳೆದ ಹತ್ತು ದಿನಗಳಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಾಗಡಿ ತಾಲೂಕಿನಲ್ಲಿರುವ ಹುಳಿಕಲ್ಲು ಗ್ರಾಮದಲ್ಲಿರುವ ಮನೆಯಲ್ಲಿದ್ದರು. ಶುಕ್ರವಾರ ಬೆಂಗಳೂರಿಗೆ ವಾಪಸ್ ಆದಾಗ ಮನೆಯಲ್ಲಿ ಕಳ್ಳತನ ನಡೆದಿರುವ ಪ್ರಕರಣ ಬೆಳಕಿಗೆ ಬಂದಿದೆ. [ಸಾಲು ಮರದ ತಿಮ್ಮಕ್ಕ ನಮ್ಮ ಹೆಮ್ಮೆ]

saalumarada thimmakka

ಪೀಣ್ಯ ಸಮೀಪದ ಮಂಜುನಾಥ ನಗರದಲ್ಲಿರುವ ಸಾಲು ಮರದ ತಿಮ್ಮಕ್ಕ ಅವರ ಮನೆಯ ಹಿಂಬಾಗಿಲ ಬೀಗ ಮುರಿದು ಒಳನುಗ್ಗಿರುವ ಕಳ್ಳರು, ಸುಮಾರು 50 ಸಾವಿರ ನಗದು, ಮನೆಯಲ್ಲಿದ್ದ ಟಿವಿ, ಬೆಳ್ಳಿ ಕಡಗವನ್ನು ದೋಚಿ ಪರಾರಿಯಾಗಿದ್ದಾರೆ. [ಸರಕಾರಕ್ಕೆ ಕೇಳುವುದೆ ತಿಮ್ಮಕ್ಕನ ಮೊರೆ?]

ಕಳ್ಳತನದ ಬಗ್ಗೆ ಸಾಲು ಮರದ ತಿಮ್ಮಕ್ಕ ಅವರು ಪೀಣ್ಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+