• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಧಿಕಾರದಲ್ಲಿರುವ ನಾಯಕರನ್ನು ಟೀಕಿಸುವಾಗ ಭಯವಿರಕೂಡದು:ಎಸ್‌ಎಂ ಕೃಷ್ಣ

|
Google Oneindia Kannada News

ಬೆಂಗಳೂರು, ಆಗಸ್ಟ್ 13: ಅಧಿಕಾರದಲ್ಲಿರುವ ನಾಯಕರನ್ನು ಟೀಕಿಸುವಾಗ ಭಯವನ್ನು ಹೊಡೆದೋಡಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಎಸ್‌ಎಂ ಕೃಷ್ಣ ಹೇಳಿದ್ದಾರೆ.

   ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲೇ ಮುಳುಗಿಹೋಗಿದೆ | Oneindia Kannada

   ದೇಶದಲ್ಲಿನ ಎಲ್ಲಾ ರಾಜಕೀಯ ಪಕ್ಷಗಳಲ್ಲಿ ಆಂತರಿಕ ಪ್ರಜಾಪ್ರಭುತ್ವದ ಕೊರತೆ ಕಾಡುತ್ತಿದ್ದು, ಅಧಿಕಾರದಲ್ಲಿರುವವರನ್ನು ಟೀಕಿಸುವಾಗ ಯಾವುದೇ ಭಯವಿರಬಾರದು ಎಂದರು.

   45 ವರ್ಷಗಳ ಕಾಂಗ್ರೆಸ್ ಜೊತೆಗಿನ ಒಡನಾಟ ಬಿಟ್ಟು ಮೂರು ವರ್ಷಗಳ ಹಿಂದೆ ಬಿಜೆಪಿಗೆ ಸೇರ್ಪಡೆಯಾದೆ, ಬಿಜೆಪಿ 2024ರ ಲೋಕಸಭಾ ಚುನಾವಣೆಯಲ್ಲೂ ಮತ್ತೆ ಅಧಿಕಾರಕ್ಕೆ ಬರಲಿದ್ದು, ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿದ್ದಾರೆ ಎಂದು ಎಸ್ ಎಂಕೃಷ್ಣಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

   ದೆಹಲಿಯಲ್ಲಿ ರಾಜಕೀಯ ಮಾಡುವರು ಮಾಡಿಕೊಳ್ಳಲಿ: ಡಿಕೆಶಿದೆಹಲಿಯಲ್ಲಿ ರಾಜಕೀಯ ಮಾಡುವರು ಮಾಡಿಕೊಳ್ಳಲಿ: ಡಿಕೆಶಿ

   ಪ್ರಧಾನಿ ನರೇಂದ್ರ ಮೋದಿ ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದು,ಅಭಿವೃದ್ಧಿ ಕಾರ್ಯಗಳಲ್ಲಿ ನಾವೆಲ್ಲರೂ ಜೊತೆಯಾಗಿರುವುದಕ್ಕೆ ಹೆಮ್ಮೆಯಾಗುತ್ತಿದೆ ಎಂದು ಹೇಳಿದ ಎಸ್.ಎಂ. ಕೃಷ್ಣ, ಅಧಿಕಾರದಲ್ಲಿರುವಾಗ ಪ್ರಾದೇಶಿಕ ಪಕ್ಷಗಳನ್ನು ಪಕ್ಕಕ್ಕೆ ತಳ್ಳಬಾರದು ಎಂಬ ಎಚ್ಚರಿಕೆ ನೀಡಿದರು.

   ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ಮಾಡಿಕೊಡಬೇಕು

   ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ಮಾಡಿಕೊಡಬೇಕು

   ಜ್ಯೋತಿರಾಧಿತ್ಯ ಸಿಂಧಿಯಾ ಮತ್ತು ರಾಜಸ್ಥಾನದಲ್ಲಿನ ಸಚಿನ್ ಪೈಲಟ್ ಅವರ ಬಂಡಾಯ ಕುರಿತಂತೆ ಪ್ರತಿಕ್ರಿಯಿಸಿದ ಎಸ್ ಎಂ ಕೃಷ್ಣ, ಅದು ಕಾಂಗ್ರೆಸ್ ಪಕ್ಷದಲ್ಲಿನ ಅಳವಾದ ಅಸ್ವಸ್ಥತೆಯ ಭಾಗವಾಗಿದೆ. ಯುವ ನಾಯಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ಮಾಡಿಕೊಡಬೇಕು,ಹಳಬರು ಯುವ ನಾಯಕರಿಗೆ ಅವಕಾಶ ಕೊಡಬೇಕು, ಅಗತ್ಯ ಮಾರ್ಗದರ್ಶನ ನೀಡಬೇಕು ಎಂದರು.

   ನರೇಂದ್ರ ಮೋದಿ ಕಾರ್ಯ ನಿರ್ವಹಣೆ

   ನರೇಂದ್ರ ಮೋದಿ ಕಾರ್ಯ ನಿರ್ವಹಣೆ

   ಬಿಜೆಪಿ ಕಾರ್ಯನಿರ್ವಹಣೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹೊಗಳಿದ್ದಾರೆ.ಆದರೆ, ಕಾಂಗ್ರೆಸ್ ಇನ್ನೂ ಪ್ರಬಲ ಶಕ್ತಿಯಾಗಿದೆ. ಪ್ರಾದೇಶಿಕ ಪಕ್ಷಗಳೊಂದಿಗೆ ಮರು ಸಂಘಟನೆ ಜೆಪಿ ನಡ್ಡಾ ನೇತೃತ್ವದ ಪಕ್ಷಕ್ಕೆ ಪ್ರಮುಖ ಸವಾಲಾಗಿದೆ ಎಂದಿದ್ದಾರೆ.

   ಆಂತರಿಕ ಪ್ರಜಾಪ್ರಭುತ್ವದ ಕೊರತೆ

   ಆಂತರಿಕ ಪ್ರಜಾಪ್ರಭುತ್ವದ ಕೊರತೆ

   ಪ್ರತಿಯೊಂದು ಪಕ್ಷಗಳು ಆಂತರಿಕ ಪ್ರಜಾಪ್ರಭುತ್ವದ ಕೊರತೆ ಎದುರಿಸುತ್ತಿದ್ದು, ಇಂತಹ ವ್ಯವಸ್ಥೆಯ ಬಗ್ಗೆ ಪರಾಮರ್ಶಿಸಬೇಕಾದ ಅಗತ್ಯವಿದೆ. ಅಧಿಕಾರದಲ್ಲಿರುವ ನಾಯಕತ್ವವನ್ನು ಟೀಕಿಸುವ ಭಯವನ್ನು ಬಿಡಬೇಕು ಎಂದು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಮಹಾರಾಷ್ಟ್ರದ ಮಾಜಿ ರಾಜ್ಯಪಾಲರು ಹೇಳಿದರು.

   ಪಕ್ಷ ವಿಕಸನಗೊಳ್ಳದಿದ್ದರೆ ಅಧಃಪತನ

   ಪಕ್ಷ ವಿಕಸನಗೊಳ್ಳದಿದ್ದರೆ ಅಧಃಪತನ

   ಪಕ್ಷ ವಿಕಸನಗೊಳ್ಳಲಿದ್ದರೆ ಪಕ್ಷದ ಅಧ:ಪತನ ಆರಂಭಗೊಳ್ಳುತ್ತದೆ. ಹಿಂದಿನ ಘಟನೆಗಳಿಂದ ಪಾಠ ಕಲಿಯಲು ಪಕ್ಷ ಹಿಂದಿನ ಕಡೆ ನೋಡಬೇಕು ಎಂದು ಹೇಳಿದ ಅವರು,ಬಿಜೆಪಿಯೊಂದಿಗೆ ಉತ್ತಮ ಸಂಬಂಧ ಹೊಂದಿರುವುದಾಗಿ ತಿಳಿಸಿದರು.

   English summary
   Veteran politician and former External Affairs Minister S M Krishna says all parties in the country lack internal democracy, and fear of criticising the leadership in power has to be 'abandoned'.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X