ಹಳಸಿದ ಕೇಕ್ ಕೊಟ್ಟ ರಿಲಾಯನ್ಸ್ ಫ್ರೆಶ್‌ಗೆ ಕೋರ್ಟ್ ಹೇಳಿದ್ದೇನು?
ಬೆಂಗಳೂರು, ಆಗಸ್ಟ್ 2: ಮಾಲ್‌ಗಳಲ್ಲಿ ಆಹಾರಗಳನ್ನು ಕೊಳ್ಳುವಾಗ ತುಂಬಾ ಎಚ್ಚರಿಕೆಯಿಂದ ಇರಬೇಕು, ಕೆಲವೊಮ್ಮೆ ರಿಯಾಯಿತಿ ದರದಲ್ಲಿ ಕೆಲವು ವಸ್ತುಗಳನ್ನು ಮಾರಾಟಕ್ಕಿಟ್ಟಿರುತ್ತಾರೆ ಆಗ ಕೂಡ ಎಕ್ಸ್‌ಪೈರಿ ದಿನಾಂಕ ನೋಡಿಯೇ ಖರೀದಿಸುವುದನ್ನು ಮರೆಯಬೇಡಿ.
ದಿನ ಸಾವಿರಾಋಉ ಮಂದಿ ರಿಲಾಯನ್ಸ್ ಫ್ರೆಶ್ ಅಂತಹ ಮಳಿಗೆಗಳಿಗೆ ಭೇಟಿ ನೀಡುತ್ತಾರೆ, ಕಾರಣ ಅಲ್ಲಿ ತಾಜಾ ತರಕಾರಿ, ತಾಜಾ ಪದಾರ್ಥಗಳನ್ನು ಪಡೆಯಬಹುದು ಎಂದು ಆದರೆ ಇಂತಹ ಮಳಿಗೆಗಲೇ ಮೋಸ ಮಾಡಿದರೆ ಜನರಿಗೆ ನಂಬಿಕೆಯಾದರೂ ಹೇಗೆ ಬಂದೀತು ನೀವೇ ಯೋಚಿಸಿ.
ಎಕ್ಸ್‌ಪೈರಿ ಅವಧಿ ಮುಗಿದರೂ ಕೂಡ ಕೇಕ್ ಖರೀದಿಸಿ ತೊಂದರೆಗೆ ಸಿಲುಕಿದ ಗ್ರಾಹಕನಿಗೆ 10,090 ರೂ. ಪರಿಹಾರ ನೀಡುವಂತೆ ರಿಲಾಯನ್ಸ್ ಫ್ರೆಶ್ ಮಳಿಗೆಗೆ ಗ್ರಾಹಕರ ನ್ಯಾಯಾಲಯ ಆದೇಶ ನೀಡಿದೆ. ಹಲಸೂರಿನ ಆರ್. ಜಯಚಂದ್ರನ್ 2016ರ ಏಪ್ರಿಲ್ 18ರಂದು ಇಂದಿರಾನಗರದ ಎರಡನೇ ಹಂತದಲ್ಲಿರುವ ರಿಲಾಯನ್ಸ್ ಫ್ರೆಶ್ ಮಳಿಗೆಯಲ್ಲಿ 90 ರೂ. ನೀಡಿ ಕೇಕ್ ಖರೀದಿ ಮಾಡಿದ್ದರು.

ಅವರು ಅದನ್ನು ತಮ್ಮ ಪುತ್ರನಿಗೆ ನೀಡಿದ್ದರು. ಅದರಿಂದ ಆತನಿಗೆ ಫುಡ್ ಪಾಯ್ಸನಿಂಗ್ ಆಗಿತ್ತು, ಆತನ ಚಿಕಿತ್ಸೆಗೆ ಕೊಡಿಸಲು ಸಾವಿರಾರು ರೂ. ಖರ್ಚು ಮಾಡಿದ್ದರು. ಅವರು ಮತ್ತೆ ಮಳಿಗೆಗೆ ಹೋಗಿ ಕೇಕ್ ಪ್ಯಾಕೇಟ್ ಮೇಲೆ 2016 ರ ಮಾರ್ಚ್ 10ಕ್ಕೆ ಎಕ್ಸ್‌ಪೈರಿ ಡೇಟ್ ಆಗಿದೆ ಎಂದಿತ್ತು. ಅಂತಹ ಪದಾರ್ಥಗಳನ್ನು ಹೇಗೆ ಮಾರಾಟಕ್ಕೆ ಇಟ್ಟಿದ್ದೀರಿ ಎಂದು ವಿಚಾರಿಸಿದಾಗ ಮ್ಯಾನೇಜರ್ ಹಾರಿಕೆ ಉತ್ತರ ನೀಡಿದ್ದರು. ಹಾಗಾಗಿ ಪರಿಹಾರ ಕೊಡಸಬೇಕು ಎಂದು ಅವರು ಗ್ರಾಹಕರ ನ್ಯಾಯಾಲಯದ ಮೊರೆ ಹೋಗಿದ್ದರು.












Click it and Unblock the Notifications