ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರತಿ ದಿನ 13 ಲಕ್ಷ ರೂ. ಮಾಸ್ಕ್ ದಂಡ ವಸೂಲಿಗೆ ಪೊಲೀಸ್ ಠಾಣೆಗಳಿಗೆ ಟಾರ್ಗೆಟ್!

|
Google Oneindia Kannada News

ಬೆಂಗಳೂರು, ಏಪ್ರಿಲ್ 23: ಬೆಂಗಳೂರಿನಲ್ಲಿ ಕೋವಿಡ್ ಸೋಂಕಿತರ ಪ್ರಮಾಣ ಒಂದೇ ವಾರದಲ್ಲಿ ಹದಿನೈದು ಪಟ್ಟು ಹೆಚ್ಚಳವಾಗಿದೆ. ಕೊರೋನಾ ಸೋಂಕು ತಡೆಯಲಿಕ್ಕೆ ಸರ್ಕಾರ ಒಂದೆಡೆ ನಾನಾ ನಿರ್ಬಂಧಗಳನ್ನು ವಿಧಿಸಿ ತಿಣುಕಾಡುತ್ತಿದೆ. ಇದರ ನಡುವೆ ಬೆಂಗಳೂರು ಕಮೀಷನರೇಟ್ ವ್ಯಾಪ್ತಿಯಲ್ಲಿ ಮಾಸ್ಕ್ ಧರಿಸದೇ ಕೋವಿಡ್ ನಿಯಮ ಉಲ್ಲಂಘನೆ ಮಾಡುವ ಜನ ಸಾಮಾನ್ಯರ ವಿರುದ್ಧ ಮಾಸ್ಕ್ ದಂಡ ಕಲೆಕ್ಷನ್ ಮಾಡಲಿಕ್ಕೆ ಬೆಂಗಳೂರಿನ ಪೊಲೀಸ್ ಠಾಣೆಗಳಿಗೆ ಟಾರ್ಗೆಟ್ ಫಿಕ್ಸ್ ಮಾಡಲಾಗಿದೆ.

ಕಾನೂನು ಸುವ್ಯವಸ್ಥೆ ಕಾಪಾಡುವ ಒಂದು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರತಿ ದಿನ 50 ಕೇಸು ಕಡ್ಡಾಯವಾಗಿ ದಾಖಲಿಸಿ ದಂಡ ವಸೂಲಿಗೆ ಸೂಚಿಸಲಾಗಿದೆ ಎಂಬ ಸಂಗತಿಯನ್ನು ಪೊಲೀಸ್ ಮೂಲಗಳು ಖಚಿತಪಡಿಸಿವೆ. ಟಾರ್ಗೆಟ್ ಫಿಕ್ಸ್ ಆಗುತ್ತಿದ್ದಂತೆ ರಾಜಧಾನಿಯ 110 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಪೊಲೀಸರು ದಂಡ ಪ್ರಯೋಗ ಆರಂಭಿಸಿದ್ದಾರೆ.

ಮಾಸ್ಕ್ ಹಾಕಿದರೂ ದಂಡ ಬೀಳುತ್ತೆ !

ಮಾಸ್ಕ್ ಹಾಕಿದರೂ ದಂಡ ಬೀಳುತ್ತೆ !

ಕೊರೋನಾ ಸೋಂಕು ನಿಯಂತ್ರಣ ಕೈ ಮೀರಿದೆ. ಕೋವಿಡ್ ಸೋಂಕಿಗೆ ಒಳದವರು ಖಾಸಗಿ ಆಸ್ಪತ್ರೆಗಳ ಸುಲಿಗೆಗೆ ಬಲಿಯಾಗುತ್ತಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೇ ಕೋವಿಡ್ ಸಾವಿಗೆ ಬಲಿಯಾಗುತ್ತಿರುವರನ್ನು ಆಂಬ್ಯುಲೆನ್ಸ್ ಮತ್ತು ಸ್ಮಶಾನದವರು ಟಾರ್ಗೆಟ್ ಮಾಡಿದ್ದಾರೆ. ಕೋವಿಡ್‌ನಿಂದ ಬಚಾವ್ ಆಗಿರುವರು, ಕೋವಿಡ್ ಬಾರದಿರುವರ ಮೇಲೆ ದಂಡ ಪ್ರಯೋಗಕ್ಕೆ ಇಡೀ ಬೆಂಗಳೂರು ಕಮೀಷನರೇಟ್ ಪೊಲೀಸರು ತಯಾರಿ ನಡೆಸಿದ್ದಾರೆ. "ಸರಿಯಾಗಿ ಮಾಸ್ಕ್ ಹಾಕಿಲ್ಲ, ಸಾಮಾಜಿಕ ಅಂತರ ಕಾಪಾಡಿಲ್ಲ" ಈ ಎರಡು ನಿಯಮ ಉಲ್ಲಂಘನೆ ಮಾಡಿದವರ ವಿರುದ್ಧ ದಂಡ ವಿಸಲಿದ್ದಾರೆ. ಇನ್ನು ಕಾನೂನು ಬದ್ಧ 50 ಕೇಸು ದಾಖಲಿಸುವ ಹೊತ್ತಿಗೆ ಅದೆಷ್ಟೊ ಚೌಕಾಸಿ ಪ್ರಕರಣಗಳು ಬೀಳುತ್ತವೋ ದೇವರೇ ಬಲ್ಲ. ಮಾಸ್ಕ್ ಹಾಕಿಲ್ಲ ಎಂದು ಪೊಲೀಸರು 250 ರೂ. ದಂಡ ವಿಧಿಸಲು ಮುಂದಾದರೆ, 100 ರೂ. ಕೈಗಿಟ್ಟು ಅದೆಷ್ಟು ಮಂದಿ ಎಸ್ಕೇಪ್ ಆಗುತ್ತಾರೆ. ಕೆಲವು ಪೊಲೀಸರಿಗೆ ಇದೇ ಬೇಕಿರುವುದು. ಐವತ್ತು ಲೀಗಲ್ ಮಾಸ್ಕ್ ದಂಡ ಕೇಸು ದಾಖಲಿಸುವ ವೇಳೆಗೆ ಅದೆಷ್ಟು 100 ರೂ. ದಂಡ ಜೇಬಿಗೆ ಇಳಿಸುವ ಕೇಸುಗಳು ಬೀಳುತ್ತವೋ ದೇವರೇ ಬಲ್ಲ.

ಕೊರೊನಾವೈರಸ್ ಕಟ್ಟಿ ಹಾಕಲು ಕೊರೊನಾವೈರಸ್ ಕಟ್ಟಿ ಹಾಕಲು "ಡಬಲ್ ಮಾಸ್ಕ್" ಸೂತ್ರ!?

ಮಾಸ್ಕ್ ಸರಿಯಾಗಿ ಹಾಕಿ ದಂಡ ತಪ್ಪಿಸಿಕೊಳ್ಳಿ

ಮಾಸ್ಕ್ ಸರಿಯಾಗಿ ಹಾಕಿ ದಂಡ ತಪ್ಪಿಸಿಕೊಳ್ಳಿ

ಕಳೆದ ವರ್ಷ ಕೋವಿಡ್ ಕಾಣಿಸಿಕೊಂಡ ವೇಳೆ ಮಾಸ್ಕ್ ಮತ್ತು ಸಾನಿಟೈಸರ್‌ಗೆ ಅಭಾವ ಸೃಷ್ಟಿಯಾಗಿತ್ತು. ಎರಡನೇ ಅಲೆ ಭೀತಿ ಹಿನ್ನೆಲೆಯಲ್ಲಿ ಶೇ. 100 ಕ್ಕೆ ನೂರು ಮಂದಿ ಮಾಸ್ಕ್ ಧರಿಸಿದ್ದಾರೆ. ಹಾಗೆ ನೋಡುವುದಾದರೆ ಪೊಲೀಸರು ಟಾರ್ಗೆಟ್ ರೀಚ್ ಮಾಡಲಿಕ್ಕೆ ಸಾಧ್ಯವಾಗುವುದಿಲ್ಲ. ಹೀಗಾಗಿ ಮಾಸ್ಕ್ ಹಾಕಿದ್ದರೂ ಮೂಗಿನ ನೇರಕ್ಕೆ ಧರಿಸದಿದ್ದರೂ ಕೋವಿಡ್ ನಿಯಮ ಉಲ್ಲಂಘನೆ ವ್ಯಾಪ್ತಿಗೆ ಬರುತ್ತದೆ. ಹೀಗಾಗಿ ಮಾಸ್ಕ್ ಇದ್ದೂ ಗಡ್ಡಕ್ಕೆ ಹಾಕಿದವರಿಗೆ ಪೊಲೀಸರು ದಂಡ ವಿಧಿಸುತ್ತಿದ್ದಾರೆ. ಹೀಗಾಗಿ ಮಾಸ್ಕ್ ಇದ್ದೂ ಗಡ್ಡಕ್ಕೆ ಧರಿಸಿದ್ದರೆ ದಂಡ ಬೀಳುವುದು ಗ್ಯಾರೆಂಟಿ. ಮಾಸ್ಕ್ ಇದ್ದವರು ಶಿಸ್ತುಬದ್ಧವಾಗಿ ಮಾಸ್ಕ್ ಧರಿಸುವುದರಿಂದ ಪೊಲೀಸರ ದಂಡ ಪ್ರಯೋಗದಿಂದ ತಪ್ಪಿಸಿಕೊಳ್ಳಬಹುದು.

ಜೇಬಿಗೆ ಇಳಿಸುವ ಕೇಸು ಬಿಟ್ಟು

ಜೇಬಿಗೆ ಇಳಿಸುವ ಕೇಸು ಬಿಟ್ಟು

ರಾಜಧಾನಿಯಲ್ಲಿ ಕೊರೋನಾ ನಿಯಂತ್ರಣಕ್ಕೆ ತರಲೆಂದು ಜೀವನಾವಶ್ಯಕ ಅಂಗಡಿ ಹೊರತು ಪಡಿಸಿ ಎಲ್ಲಾ ಅಂಗಡಿ ವಹಿವಾಟನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರದಿಂದಲೇ ಅಂಗಡಿಗಳನ್ನು ಬಂದ್ ಮಾಡಲಾಗಿದೆ. ಇದರ ನಡುವೆ ಪ್ರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ (ಕಾನೂನು ಮತ್ತು ಸುವ್ಯವಸ್ಥೆ) ಮಾಸ್ಕ್ ಧರಿಸದವರ ವಿರುದ್ಧ ದಿನಕ್ಕೆ 50 ಕೇಸು ಕಡ್ಡಾಯವಾಗಿ ದಾಖಲಿಸಬೇಕು ಎಂದು ಅನೌಪಚಾರಿಕವಾಗಿ ಟಾರ್ಗೆಟ್ ಫಿಕ್ಸ್ ಮಾಡಲಾಗಿದೆ. ಈ ಕುರಿತ ಸೂಚನೆ ಬಂದಿದ್ದೇ ತಡ ಕಾನೂನು ಸುವ್ಯವಸ್ಥೆ ಪೊಲೀಸ್ ಠಾಣೆಗಳ ಸಿಬ್ಬಂದಿ ರಶೀದಿ ಪುಸ್ತಕ ಹಿಡಿದುಕೊಂಡು ಬೀಟ್ ಗಳಿಗೆ ಇಳಿದಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿ ಸುಮಾರು 110 ಕ್ಕಿಂತಲು ಹೆಚ್ಚು ಕಾನೂನು ಸುವ್ಯವಸ್ಥೆ ಕಾಪಾಡುವ ಪೊಲೀಸ್ ಠಾಣೆಗಳಿವೆ.

ಅಷ್ಟು ಠಾಣೆಗಳಿಂದ ದಿನಕ್ಕೆ 50 ಕೇಸು ದಾಖಲಿಸಿದರೂ 5500 ದಾಖಲಾಗುತ್ತವೆ. ಪ್ರತಿ ಕೇಸಿನಿಂದ ತಲಾ 250 ರೂ. ದಂಡ ವಸೂಲಿ ಮಾಡಿದಲ್ಲಿ ದಿನಕ್ಕೆ 13 ಲಕ್ಷ ರೂ. ಮೇಲ್ಪಟ್ಟು ದಂಡ ವಸೂಲಿಯಾಗಲಿದೆ. ಇಷ್ಟೇ ಪ್ರಮಾಣದ ಕೇಸು ಹದಿನೈದು ದಿನ ಹಾಕಿದರೂ 2 ಕೋಟಿ ರೂ. ಸಂಗ್ರಹ ವಾಗಲಿದೆ. ಅದೃಷ್ಟ ಚೆನ್ನಾಗಿದ್ದು ಒಂದು ತಿಂಗಳು ದಂಡ ವಿಧಿಸುವ ಅವಕಾಶ ಸಿಕ್ಕರೆ ನೀವೇ ಕೂಡಿ ಗುಣಾಕಾರ ಮಾಡಿ ನೋಡಿ ಕೋಟಿಗಳ ಗಡಿ ದಾಟುತ್ತದೆ.

Recommended Video

Lockdown ವಿಚಾರವಾಗಿ ಸ್ಪಷ್ಟನೆ ನೀಡಿದ Dr. Sudhakar | Oneindia Kannada
ದಂಡ ಹಾಕಿದ್ರೆ ಕೊರೋನಾ ಹೋಗುತ್ತಾ ?

ದಂಡ ಹಾಕಿದ್ರೆ ಕೊರೋನಾ ಹೋಗುತ್ತಾ ?

ಕಳೆದ ವರ್ಷದ ಲಾಕ್‌ಡೌನ್ ಬಿಸಿಗೆ ನಲುಗಿರುವ ಜನ ಇನ್ನೂ ಚೇತರಿಸಿಕೊಂಡಿಲ್ಲ. ಇದರ ನಡುವೆ ಕೊರೋನಾ ಎರಡನೇ ಅಲೆ ಎದ್ದಿದೆ. ಆಸ್ಪತ್ರೆಗಳಲ್ಲಿ ಹಾಸಿಗೆ ಸಿಗುತ್ತಿಲ್ಲ. ಕೋವಿಡ್ ರೋಗಕ್ಕೆ ತುತ್ತಾದವರ ಕಾರ್ಯ ಮಾಡಲಿಕ್ಕೆ ಮೂರು ಅಡಿ ಜಾಗ ಸಿಗುತ್ತಿಲ್ಲ. ಇದೀಗ ಲಾಕ್‌ಡೌನ್ ಮಾದರಿಯಲ್ಲಿಯೇ ಎಲ್ಲಾ ವಹಿವಾಟುಗಳನ್ನು ಪೊಲೀಸರು ಸ್ಥಗಿತಗೊಳಿಸಿದ್ದಾರೆ. ಜೀವನ ಮಾಡುವುದೇ ಕಷ್ಟಕರ ಎಂಬಂತಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಕೋವಿಡ್ ನಿಂದ ಎದುರಾಗುತ್ತಿರುವ ಕಷ್ಟಗಳನ್ನು ಬಡವರು ಯಾರೂ ಎದುರಿಸಲಾಗದ ಸ್ಥಿತಿ ನಿರ್ಮಾಣವಾಗಿದೆ. ಇದರ ನಡುವೆ ಪೊಲೀಸರು ಮಾಸ್ಕ್ ದಂಡ ವಸೂಲಿಗೆ ಇಳಿದಿರುವುದು ವಿಪರ್ಯಾಸ ಅಲ್ಲವೇ ? ಮಾಸ್ಕ್ ಕಡ್ಡಾಯವಾಗಿ ಹಾಕಿಸುವ ಅಗತ್ಯವಿದೆ. ಆದರೆ, ಎಲ್ಲದಕ್ಕೂ ದಂಡ ಪ್ರಯೋಗದಿಂದಲೇ ಪರಿಹಾರ ಸಾಧ್ಯವೇ ?

English summary
Covid Guidelines in Bengaluru: Rs 13 lakhs per day Target given to Bengaluru police stations to collect mask fines. know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X