ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆರ್. ಆರ್. ನಗರ ನನ್ನ ಕರ್ಮ ಭೂಮಿ; ಹೆಚ್. ಕುಸುಮಾ

|
Google Oneindia Kannada News

ಬೆಂಗಳೂರು, ನವೆಂಬರ್ 10: ಬೆಂಗಳೂರಿನ ರಾಜರಾಜೇಶ್ವರಿ ನಗರ ಕ್ಷೇತ್ರದ ಉಪ ಚುನಾವಣೆ ಫಲಿತಾಂಶ ಪ್ರಕಟಗೊಂಡಿದೆ. ಬಿಜೆಪಿ ಅಭ್ಯರ್ಥಿ ಮುನಿರತ್ನ 57,936 ಮತಗಳ ಅಂತದಿಂದ ಗೆಲುವು ಸಾಧಿಸಿದರು. ಕಾಂಗ್ರೆಸ್ ಅಭ್ಯರ್ಥಿ ಹೆಚ್. ಕುಸುಮಾ ಮೊದಲ ಚುನಾವಣೆಯಲ್ಲಿ ಸೋಲು ಕಂಡಿದ್ದಾರೆ.

Recommended Video

ಕುಷನ್ ಸೋಫಾ ಹಾಗೆ ಮಾತಾಡಸತ್ತೆ!! | DK Ravi Mother | Oneindia Kannada

ಉಪ ಚುನಾವಣೆ ಮತ ಎಣಿಕೆ ಮಂಗಳವಾರ ನಡೆಯಿತು. ಬಿಜೆಪಿಯ ಮುನಿರತ್ನ1,25,734 ಮತಗಳನ್ನು ಪಡೆದು ಜಯಗಳಿಸಿದರು. ಮೊದಲ ಚುನಾವಣೆ ಎದುರಿಸಿದ ಕಾಂಗ್ರೆಸ್‌ನ ಹೆಚ್. ಕುಸುಮಾ 67,798 ಮತ ಪಡೆದರು. ಜೆಡಿಎಸ್‌ನ ಕೃಷ್ಣಮೂರ್ತಿ 10,251 ಮತಗಳನ್ನು ಪಡೆದು ಮೂರನೇ ಸ್ಥಾನ ಪಡೆದರು.

ಆರ್. ಆರ್. ನಗರ ಉಪ ಚನಾವಣೆ; ಬಿಜೆಪಿಯ ಮುನಿರತ್ನ ಜಯಭೇರಿ ಆರ್. ಆರ್. ನಗರ ಉಪ ಚನಾವಣೆ; ಬಿಜೆಪಿಯ ಮುನಿರತ್ನ ಜಯಭೇರಿ

ಆರ್. ಆರ್. ನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಪೈಪೋಟಿ ನಡೆಯಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ ಅಂಚೆ ಮತಗಳ ಎಣಿಕೆಯಿಂದಲೇ ಮುನ್ನಡೆ ಕಾಯ್ದುಕೊಂಡು ಮನಿರತ್ನರನ್ನು ಕಟ್ಟಿಹಾಕಲು ಸಾಧ್ಯವಾಗಲೇ ಇಲ್ಲ. ಫಲಿತಾಂಶದ ಕುರಿತು ಹೆಚ್. ಕುಸುಮಾ ಫೇಸ್ ಬುಕ್ ಪೋಸ್ಟ್ ಹಾಕಿದ್ದಾರೆ.

RR Nagar, Sira By Election Results 2020 Live Updates; ಆರ್. ಆರ್. ನಗರ, ಶಿರಾ ಉಪ ಚುನಾವಣೆ ಫಲಿತಾಂಶRR Nagar, Sira By Election Results 2020 Live Updates; ಆರ್. ಆರ್. ನಗರ, ಶಿರಾ ಉಪ ಚುನಾವಣೆ ಫಲಿತಾಂಶ

2018ರ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಕ್ಷೇತ್ರದಲ್ಲಿ 60 ಸಾವಿರ ಮತಗಳನ್ನು ಪಡೆದಿದ್ದರು. ಆದರೆ ಈ ಉಪ ಚುನಾವಣೆಯಲ್ಲಿ 10,251 ಮತಗಳನ್ನು ಮಾತ್ರ ಪಕ್ಷ ಪಡೆಯಿತು. ಮುನಿರತ್ನ ಅವರ ವೈಯಕ್ತಿಕ ವರ್ಚಸ್ಸು ಚುನಾವಣೆಯಲ್ಲಿ ಸಹಕಾರ ಕೊಟ್ಟಿತು.

Exit Poll : ಆರ್. ಆರ್. ನಗರದಲ್ಲಿ ಬಿಜೆಪಿ, ಕಾಂಗ್ರೆಸ್ ನೇರ ಹಣಾಹಣಿ Exit Poll : ಆರ್. ಆರ್. ನಗರದಲ್ಲಿ ಬಿಜೆಪಿ, ಕಾಂಗ್ರೆಸ್ ನೇರ ಹಣಾಹಣಿ

ಬೆಂಬಲಿಸಿದವರಿಗೆ ಧನ್ಯವಾದಗಳು

ಬೆಂಬಲಿಸಿದವರಿಗೆ ಧನ್ಯವಾದಗಳು

"ಚುನಾವಣೆಯಲ್ಲಿ ನೀವು ಕೊಟ್ಟಿರುವ ಈ ತೀರ್ಪನ್ನು ತಲೆಬಾಗಿ ಸ್ವೀಕರಿಸುತ್ತೇನೆ. ಕಾಂಗ್ರೆಸ್ ಪಕ್ಷವನ್ನು, ಆ ಮೂಲಕ ನನ್ನನ್ನು ಬೆಂಬಲಿಸಿದ ನಿಮಗೆ ನನ್ನ ಹೃದಯಪೂರ್ವಕ ಧನ್ಯವಾದಗಳು" ಎಂದು ಹೆಚ್. ಕುಸುಮಾ ಫೇಸ್ ಬುಕ್ ಪೋಸ್ಟ್ ಹಾಕಿದ್ದಾರೆ.

ತೋರಿದ ಪ್ರೀತಿಗೆ ಋಣಿ

ತೋರಿದ ಪ್ರೀತಿಗೆ ಋಣಿ

"ಮತಯಾಚನೆಗಾಗಿ ಮನೆ ಬಾಗಿಲಿಗೆ ಬಂದಾಗ ಮನೆ ಮಗಳಂತೆ ಬರಮಾಡಿಕೊಂಡು ಕುಂಕುಮ ಇಟ್ಟು, ಹೂ ಮುಡಿಸಿ, ಉಡಿ ತುಂಬಿದ ನೀವು ತೋರಿದ ಪ್ರೀತಿಗೆ ಋಣಿ" ಎಂದು ಹೆಚ್. ಕುಸುಮಾ ಹೇಳಿದ್ದಾರೆ.

ನೊಂದವರ ಧ್ವನಿಯಾಗುತ್ತೇನೆ

ನೊಂದವರ ಧ್ವನಿಯಾಗುತ್ತೇನೆ

"ನಮ್ಮ ರಾಜರಾಜೇಶ್ವರಿ ನಗರ ಕ್ಷೇತ್ರ ಎದೆಂದಿಗೂ ನನ್ನ ಕರ್ಮ ಭೂಮಿ. ಎಂದಿನಂತೆ ನಿಮ್ಮೊಂದಿಗಿದ್ದು ನನ್ನಸಮಾಜ ಸೇವಾ ಕಾರ್ಯಗಳನ್ನು ಮುಂದುವರೆಸು ಮೂಲಕ ನೋಂದವರ ಧ್ವನಿಯಾಗುತ್ತೇನೆ" ಎಂದು ಹೆಚ್. ಕುಸುಮಾ ಹೇಳಿದ್ದಾರೆ.

ಆರ್. ಆರ್. ನಗರ ಬಿಜೆಪಿಗೆ

ಆರ್. ಆರ್. ನಗರ ಬಿಜೆಪಿಗೆ

ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ 2013, 2018ರಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜಯಗಳಿಸಿದ್ದರು. 2020ರ ಉಪ ಚುನಾವಣೆಯಲ್ಲಿ ಹೆಚ್. ಕುಸುಮಾ ಅವರು ಸೋಲುವ ಮೂಲಕ ಕ್ಷೇತ್ರವನ್ನು ಕಾಂಗ್ರೆಸ್ ಕಳೆದುಕೊಂಡಿದೆ.

English summary
BJP candidate Munirathna won the Bengaluru Rajarajeshwari Nagar by election 2020. Congress candidate H. Kusuma facebook post on election result.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X