Get Updates
Get notified of breaking news, exclusive insights, and must-see stories!

RCB: ಆರ್‌ಸಿಬಿ ಫ್ರಾಂಚೈಸ್‌ನಿಂದ ಬೆಂಗಳೂರಿನ ಮೂರು ಕೆರೆಗಳ ಪುನಶ್ಚೇತನ

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) "ಗೋ ಗ್ರೀನ್ ಅಭಿಯಾನ"ದ ಭಾಗವಾಗಿ ಬೆಂಗಳೂರಿನ ಮೂರು ಕೆರೆಗಳ ಪುನಶ್ಚೇತನ ಮಾಡಿದೆ. ನೀರಿನ ಬಿಕ್ಕಟ್ಟಿನಿಂದ ಬಳಲುತ್ತಿರುವ ಬೆಂಗಳೂರಿಗೆ ಕೆರೆಗಳ ಪುನಶ್ಚೇತನ ಮಾಡುತ್ತಿರುವುದು ಪರಿಹಾರ ಕ್ರಮವಾಗಿದೆ.

ಆರ್‌ಸಿಬಿ ಗೋ ಗ್ರೀನ್ ಅಭಿಯಾನದ ಭಾಗವಾಗಿ 2023ರ ಅಕ್ಟೋಬರ್ ತಿಂಗಳಿನಲ್ಲಿ ಕೆರೆ ಅಭಿವೃದ್ಧಿ ಕಾಮಗಾರಿ ಯೋಜನೆಯನ್ನು ಪ್ರಾರಂಭಿಸಿತು. ಈ ಯೋಜನೆಯ ಮೂಲಕ ಬೆಂಗಳೂರಿನ ಇಟ್ಟಗಲ್‌ಪುರ ಮತ್ತು ಸಾದೇನಹಳ್ಳಿ ಕೆರೆಗಳ ಹೂಳು ತೆಗೆಯಲು ಮತ್ತು ಅಭಿವೃದ್ಧಿಪಡಿಸಲಾಗುತ್ತಿದೆ.

Royal Challengers Bengaluru Revives Three Lakes in Go Green Initiative

ಈ ಪ್ರದೇಶಗಳಲ್ಲಿ ಕಾವೇರಿ ನೀರಿನ ಸಂಪರ್ಕ ಇಲ್ಲದೇ ಇರುವ ಕಾರಣ. ಬೋರ್ ವೆಲ್ ನೀರನ್ನು ಅವಲಂಬಿಸಿದೆ. 1,000 ರಿಂದ 1,500 ಅಡಿಗಳಷ್ಟು ಆಳಕ್ಕೆ ಅಂತರ್ಜಲ ತಲುಪಿದೆ. ಕೆರೆಗಳ ಪುನಶ್ಚೇತನ ಈ ಭಾಗದಲ್ಲಿ ಅಂತರ್ಜಲ ಮಟ್ಟ ಸುಧಾರಣೆಗೆ ಸಹಕಾರಿಯಾಗಲಿದೆ.

ಹೂಳು ತೆಗೆಯುವ ಕೆಲಸ

ಎರಡು ಕೆರೆಗಳಿಂದ 1,20,000 ಟನ್‌ಗೂ ಹೆಚ್ಚು ಹೂಳು ಮತ್ತು ಮರಳನ್ನು ತೆಗೆಯಲಾಗಿದೆ ಮತ್ತು ಒತ್ತುವರಿಯಾಗಿದ್ದ ಒಂಬತ್ತು ಎಕರೆ ಕೆರೆಯ ಭೂಮಿಯನ್ನು ವಾಪಸ್ ಪಡೆಯಲಾಗಿದೆ. ಸ್ಥಳೀಯ ಪಕ್ಷಿಗಳು ಮತ್ತು ಪ್ರಾಣಿಗಳ ಸಂಖ್ಯೆಗೆ ಸ್ಥಿರೀಕರಣ ಕೊಳಗಳು ಮತ್ತು ಜೌಗು ಪ್ರದೇಶಗಳ ಸೃಷ್ಟಿಗೆ ಕಾರಣವಾಗಿದೆ.

ಕೆರೆಗಳ ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವು 17 ಎಕರೆಗಳವರೆಗೆ ಹೆಚ್ಚಿದೆ, ಕೆರೆಗಳು ಅಂತರ್ಜಲ ಮರುಪೂರಣಕ್ಕೆ ಅನುಕೂಲವಾಗುವುದಲ್ಲದೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೃಷಿ ಚಟುವಟಿಕೆಗಳಿಗೆ ಸಹಕಾರಿಯಾಗುತ್ತವೆ ಎಂದು ಆರ್ ಸಿಬಿ ಹಂಚಿಕೊಂಡಿರುವ ವಿಡಿಯೋದಲ್ಲಿ ಮಾಹಿತಿ ನಿಡಲಾಗಿದೆ.

ಎರಡು ಕೆರೆಗಳ ಮೀನುಗಾರರು ಮತ್ತು ರೈತರಿಗೆ ಹೆಚ್ಚುವರಿ ಜೀವನೋಪಾಯದ ಅವಕಾಶಗಳನ್ನು ಒದಗಿಸುತ್ತವೆ, ಅವರು ಈಗ ಮೊದಲಿಗಿಂತ ಮೂರು ಪಟ್ಟು ಹೆಚ್ಚು ಇಳುವರಿ ಪಡೆಯಬಹುದು ಎಂದು ಹೇಳಲಾಗಿದೆ.

ಕಣ್ಣೂರು ಕೆರೆಯಲ್ಲಿ, ನಾಗರಿಕ ಸೌಲಭ್ಯಗಳನ್ನು ಕೆರೆಗಳ ಸ್ವತ್ತುಗಳಾಗಿ ರಚಿಸುವ ಮೂಲಕ ಸಮುದಾಯದ ಮಾಲೀಕತ್ವವನ್ನು ಸುಧಾರಿಸುವ ಉದ್ದೇಶವನ್ನು ಹೊಂದಲಾಗಿದೆ.

ಜೈವಿಕ ವೈವಿಧ್ಯತೆಯನ್ನು ಸುಧಾರಿಸುವ ಮತ್ತು ಉಳಿಸಿಕೊಳ್ಳಲು ಮೂರು ಕೆರೆಗಳಲ್ಲಿ ಔಷಧೀಯ ಸಸ್ಯ ಉದ್ಯಾನವನಗಳು, ಬಿದಿರಿನ ಉದ್ಯಾನವನಗಳು ಮತ್ತು ಚಿಟ್ಟೆ ಉದ್ಯಾನವನಗಳನ್ನು ಸಹ ನಿರ್ಮಾಣ ಮಾಡಲಾಗುತ್ತಿದೆ.

ಈ ಕೆರೆಗಳು ಅಕ್ಕಪಕ್ಕದ ಗ್ರಾಮಗಳಿಗೆ ನಿರ್ಣಾಯಕ ಅಂತರ್ಜಲ ಮೂಲಗಳಾಗಿ ಕಾರ್ಯನಿರ್ವಹಿಸುತ್ತವೆ ಆದರೆ ಸ್ಥಳೀಯ ಜೀವನೋಪಾಯದ ಬೆನ್ನೆಲುಬಾಗಿ ಕಾರ್ಯನಿರ್ವಹಿಸುತ್ತವೆ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಸಹ ಮುಖ್ಯಸ್ಥ ರಾಜೇಶ್ ಮೆನನ್ ಹೇಳಿದ್ದಾರೆ.

ಆರ್‌ಸಿಬಿ ಪ್ರತಿ ವರ್ಷ ಪರಿಸರದ ಬಗ್ಗೆ ತಮ್ಮ ಕಾಳಜಿ ವ್ಯಕ್ತಪಡಿಸಲು ಐಪಿಎಲ್‌ನ ಒಂದು ಪಂದ್ಯದಲ್ಲಿ ಹಸಿರು ಬಣ್ಣದ ಜೆರ್ಸಿ ತೊಟ್ಟು ಕಣಕ್ಕಿಳಿಯುತ್ತಾರೆ. ಈ ಬಾರಿ ಐಪಿಎಲ್‌ನಲ್ಲಿ ಏಪ್ರಿಲ್ 21ರಂದು ಭಾನುವಾರ, ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಹಸಿರು ಜೆರ್ಸಿಯಲ್ಲಿ ಆರ್ ಸಿಬಿ ಕಣಕ್ಕಿಳಿಯಲಿದೆ. ಆಡಿರುವ 7 ಪಂದ್ಯಗಳಲ್ಲಿ ಒಂದು ಪಂದ್ಯವನ್ನು ಮಾತ್ರ ಗೆದ್ದಿರುವ ಆರ್ ಸಿಬಿ ಗೆಲುವಿನ ಹುಡುಕಾಟದಲ್ಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+