ಜೈಲಿನಲ್ಲೇ ಇದ್ದುಕೊಂಡು ಅಪಹರಣಕ್ಕೆ ಸಂಚು, ಸತ್ಯ ಹೊರಬಿದ್ದಿದ್ಹೇಗೆ?
ಬೆಂಗಳೂರು, ಜೂನ್ 27: ಜೈಲಿನಲ್ಲಿದ್ದುಕೊಂಡೇ ಅಪಹರಣಕ್ಕೆ ಸಂಚು ಹೂಡಿದ್ದ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.
ರೌಡಿ ನಟರಾಜ ಅಲಿಯಾಸ್ ಮುಳ್ಳ ನಟರಾಜ ಗ್ಯಾಂಗ್ ಸ್ಯ ಕೆಪಿ ಅಗ್ರಹಾರ ಠಾಣೆ ಪೊಲೀಸರ ಬಲೆಗೆ ಬಿದ್ದಿದೆ. ಈ ಗ್ಯಾಂಗ್ ಗುತ್ತಿಗೆದಾರ ಶಾಂತರಾಜು ಎನ್ನುವವರನ್ನು ಅಪಹರಣ ಮಾಡಿ ಅವರ ಕಾಲಿಗೆ ಚಾಕುವಿನಿಂದ ಇರಿದು 2.5 ಲಕ್ಷ ರೂ ಸುಲಿಗೆ ಮಾಡಿತ್ತು.
ನವೀನ, ಸುರೇಶ್, ಮಂಜುನಾಥ್ , ಗಣೇಶ್ , ಕಾರ್ತಿಕ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ರೌಡಿ ನಟರಾಜ ಜೈಲಿನಲ್ಲಿದ್ದುಕೊಂಡೇ ಒಂದು ವರ್ಷದಿಂದ ಗುತ್ತಿಗೆದಾರರು, ಬಿಲ್ಡರ್‌ಗಳನ್ನು ಬೆದರಿಸಿ ಹಣ ವಸೂಲಿ ಮಾಡುತ್ತಿದ್ದ,.

ಏಪ್ರಿಲ್ ತಿಂಗಳಿನಲ್ಲಿ ಗುತ್ತಿಗೆದಾರ ಶಾಂರಾಜು ಅನ್ನುವವರಿಗೆ ಕರೆ ಮಾಡಿ ಹಣ ಕೇಳಿದ್ದ, ತನ್ನ ಬಳಿ ಹಣ ಇಲ್ಲ ಎಂದು ಉತ್ತರ ಕೊಟ್ಟು ಶಾಂತರಾಜು ಸುಮ್ಮನಾಗಿದ್ದರು. ಆದರೆ ಪದೇ ಪದೇ ಕೇಳಿದರೂ ಕೊಡದೇ ಇದ್ದಾಗ ನಟರಾಜು ಜೈಲಿನಲ್ಲೇ ಕುಳಿತುಕೊಂಡು ಅಪಹರಣಕ್ಕೆ ಸ್ಕೆಚ್ ಹಾಕಿದ್ದ.
ಹಾಗೆಯೇ ಗುತ್ತಿಗೆ ವಿಚಾರವಾಗಿ ಮಾತನಾಡುವ ನೆಪದಲ್ಲಿ ರೌಡಿಯ ಸಹಚರರು ಶಾಂತರಾಜುವನ್ನು ಮಾಗಡಿ ರಸ್ತೆಯ ನಿರ್ಜನ ಪ್ರದೇಶಕ್ಕೆ ಕರೆಸಿಕೊಂಡು ಅಪಹರಣ ಮಾಡಿದ್ದರು.
ನೆಲಮಂಗಲಕ್ಕೆ ಕರೆದೊಯ್ದು ಹಿಂಸೆ ಮಾಡಿದ್ದರು. ಇವರ ಕಾಟದಿಂದ ನೊಂದ ಶಾಂತರಾಜು ಸ್ನೇಹಿತನ ಸಹಾಯದಿಂದ ಅವರಿಗೆ 2.5 ಲಕ್ಷ ರೂ ನೀಡಿದ್ದ. ಅವರನ್ನು ಗ್ಯಾಂಗ್ ಬಿಟ್ಟು ಕಳುಹಿಸಿತ್ತು.
ಆದರೆ ಶಾಂತರಾಜು ಇದನ್ನು ಯಾರೊಟ್ಟಿಗೂ ಹೇಳಿರಲಿಲ್ಲ, ಸ್ನೇಹಿತರ ಜೊತೆ ಕುಡಿಯುವಾಗ ಈ ವಿಷಯ ಹೊರಬಿದ್ದಿದೆ, ಬಳಿಕ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.












Click it and Unblock the Notifications