• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರೌಡಿ ಶೀಟರ್ ಲಕ್ಷ್ಮಣ ಹತ್ಯೆ ಪ್ರಕರಣ ಸಿಸಿಬಿಗೆ ವರ್ಗಾವಣೆ

|

ಬೆಂಗಳೂರು, ಮಾರ್ಚ್ 9: ರೌಡಿ ಶೀಟರ್ ಲಕ್ಷ್ಮಣ ಹತ್ಯೆ ಪ್ರಕರಣವನ್ನು ನಗರ ಪೊಲೀಸ್ ಆಯುಕ್ತರು ಸಿಸಿಬಿಗೆ ವರ್ಗಾಯಿಸಿದ್ದಾರೆ.

ಕಳೆದ ಎರಡು ದಿನಗಳ ಹಿಂದೆ ಇಸ್ಕಾನ್ ದೇವಸ್ಥಾನ ಬಳಿ ರೌಡಿ ಶೀಟರ್ ಲಕ್ಷ್ಮಣನ ಕೊಲೆಯಾಗಿತ್ತು. ಹಾಡ ಹಗಲೇ ರಸ್ತೆಯಲ್ಲೇ ಆತನನ್ನು ಕೊಲೆ ಮಾಡಿದ್ದರು. ಕಳೆದ 15 ದಿನಗಳ ಹಿಂದಷ್ಟೇ ಆತ ಜೈಲಿನಿಂದ ಬಿಡುಗಡೆಯಾಗಿದ್ದ.

ಕುಣಿಗಲ್‌ನ ಲಕ್ಷ್ಮಣ ಬೆಂಗಳೂರಿನ ಶ್ರೀಮಂತ ರೌಡಿಯಾದ ಕಥೆ!

ಲಕ್ಷ್ಮಣ ಇಸ್ಕಾನ್ ಬಳಿ ಇರುವ ಹೋಟೆಲ್ ಗೆ ಬರುವುದು ಮುಂಚಿತವಾಗಿಯೇ ದುಷ್ಕರ್ಮಿಗಳಿಗೆ ತಿಳಿಸಿದೆ. ಹೊಂಚು ಹಾಕಿ ಕುಳಿತಿದ್ದ ಆರೋಪಿಗಳು ಲಕ್ಷ್ಮಣನನ್ನು ಕೊಲೆ ಮಾಡಿದ್ದರು. ಲಕ್ಷ್ಮಣ ಮೃತ ದೇಹದ ಬಳಿ ಆತ ಬುಕ್ ಮಾಡಿದ್ದ ಹೋಟೆಲ್‌ ರೂಮಿನ ಕೀ ಕೂಡ ದೊರೆತಿತ್ತು.

ಲಕ್ಷ್ಮಣ ಮೊಬೈಲ್ ಕಾಲ್ ಡೀಟೇಲ್ಸ್‌ಗಳನ್ನು ಪಡೆಯುತ್ತಿದ್ದಾರೆ. ಆತ ಜಾಮೀನಿನ ಮೇಲೆ ಹೊರ ಬಂದ ಬಳಿಕ ಬೆದರಿಕೆ ಕರೆ ಏನಾದರೂ ಬಂದಿದೆಯೇ ಎನ್ನುವ ಕುರಿತು ಮಾಹಿತಿ ಕಲೆ ಹಾಕುತ್ತಿದ್ದಾರೆ.

ಲಕ್ಷ್ಮಣನಿಗೆ ಬಾಡಿಗಾರ್ಡ್, ಚಾಲಕ ಇಬ್ಬರನ್ನು ಕರೆತರದೆ ಒಬ್ಬನೇ ಬರಲು ಯಾರೋ ತಿಳಿಸಿರುವ ಅನುಮಾನ ಬಂದಿದೆ. ಕಳೆದ 15 ವರ್ಷಗಳಿಂದ ಲಕ್ಷ್ಮಣ ಹಾಗೂ ಆತನ ಸಹೋದರ ರಾಮ ಅನೇಕ ಅಪರಾಧಗಳನ್ನು ಭಾಗಿಯಾಗಿದ್ದಾರೆ. ಹಾಗೆಯೇ ಅನೇಕ ರಾಜಕೀಯ ಪಕ್ಷಗಳೊಂದಿಗೂ ಕೂಡ ಸಂಪರ್ಕವಿದೆ. ಮಹಾಲಕ್ಷ್ಮೀಪುರ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದರು ಇದೀಗ ಪ್ರಕರಣವನ್ನು ಸಿಸಿಬಿಗೆ ರವಾನಿಸಿದೆ.

English summary
The city police commissioner has issued orders transferring rowdy sheeter Lakshmana's murder probe to the CCB.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X