ಸ್ಲಂ ಭರತ್ ಶಿಷ್ಯನ ಮುಂಗೈ ಕತ್ತರಿಸಿದ ಕಿರಾತಕರು ಎಸ್ಕೇಪ್
ಬೆಂಗಳೂರು, ಜೂ. 01: ಬೆಂಗಳೂರಿನಲ್ಲಿ ಗ್ಯಾಂಗ್ ವಾರ್ ಮತ್ತೆ ಶುರುವಾಗಿದೆ. ಡಿಯೋ ಬೈಕ್ ಸರ್ವೀಸ್ ನೀಡುವ ವಿಚಾರವಾಗಿ ಬೆಂಗಳೂರಿನ ಹಳೇ ರೌಡಿಗಳ ಶಿಷ್ಯಂದಿರು ಕೈ ಕತ್ತರಿಸಿಕೊಂಡಿದ್ದಾರೆ. ಸ್ಲಂ ಬರತ್ ಮತ್ತು ಟಿಂಬರ್ ಕಿಟ್ಟಿ ಎಂಬ ಪಾತಕಿಗಳ ಸಹಚರರ ನಡುವೆ ಮಾರಾಮಾರಿ ನಡೆದು ಲಾಂಗ್ ಗಳಿಂದ ಹೊಡೆದಾಡಿಕೊಂಡಿದ್ದಾರೆ. ಸ್ಲಂ ಭರತ್ ನ ಆಪ್ತ ಚಂದನ್ ಅಲಿಯಾಸ್ ಪಿನ್ಲೆ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ.
ಬ್ಯಾಟರಾಯನಪುರ ಪೊಲೀಸ್ ಠಾಣೆ ರೌಡಿ ಶೀಟರ್ ಆಗಿರುವ ಚಂದನ್ ಪಾತಕಿ ಸ್ಲಂ ಭರತ್ ನ ಗ್ಯಾಂಗ್ ನಲ್ಲಿ ಗುರುತಿಸಿಕೊಂಡಿದ್ದ. ಸ್ಲಂ ಭರತ್ ಎನ್ ಕೌಂಟರ್ ಬಳಿಕ ಆತನ ಶಿಷ್ಯ ಚಂದನ್ ಪಾತಕ ಲೋಕ ಬಿಟ್ಟು ಗಣಪತಿ ನಗರದಲ್ಲಿ ಬೈಕ್ ಶೋ ರೂಂ ತೆರೆದಿದ್ದ. ಸ್ಲಂ ಭರತ್ ಎದುರಾಳಿ ಗ್ಯಾಂಗ್ ಟಿಂಬರ್ ಕಿಟ್ಟಿ ಸಹಚರರು ಗುರುವಾರ ಬೆಳಗ್ಗೆ ಗಣಪತಿ ನಗರದಲ್ಲಿರುವ ಚಂದನ್ ಬೈಕ್ ಶೋ ರೂಂಗೆ ಹೋಗಿದ್ದಾರೆ. ಸರ್ವೀಸ್ ವಿಚಾರವಾಗಿ ಜಗಳ ನಡೆದಿದೆ. ಈ ವೇಳೆ ಟಿಂಬರ್ ಕಿಟ್ಟಿ ಕಡೆಯವರು ಎನ್ನಲಾದ ಯುವಕರು ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದಾರೆ. ತಪ್ಪಿಸಿಕೊಳ್ಳಲು ಕೈ ಅಡ್ಡ ಇಟ್ಟ ಚಂದನ್ ಮುಂಗೈ ಅರ್ಧ ಕಟ್ಟಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ಬ್ಯಾಟರಾಯನಪುರ ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Recommended Video
ಕೊರೊನಾ ಹಿನ್ನೆಲೆಯಲ್ಲಿ ಬೆಂಗಳೂರಿನ ಅಪರಾಧ ಲೋಕ ತಣ್ಣಗೆ ಮಲಗಿತ್ತು. ಇದೀಗ ಲಾಕ್ ಡೌನ್ ಸಡಿಲ ಆಗುತ್ತಿದ್ದಂತೆ ಪಾತಕ ಲೋಕ ಪುಟಿದೆದ್ದಿದೆ. ಹಾಡ ಹಗಲೇ ಬಿಬಿಎಂಪಿ ಮಾಜಿ ಸದಸ್ಯೆ ರೇಖಾ ಕದಿರೇಶ್ ರನ್ನು ಹತ್ಯೆ ಮಾಡಿದ್ದರು. ರೇಖಾ ಸಂಬಂಧಿಕರಿಂದ ಸುಪಾರಿ ಪಡೆದು ಹತ್ಯೆ ಮಾಡಿದ ಏಳು ಮಂದಿ ಪಾತಕಿಗಳು ಜೈಲಿಗೆ ಹೋಗಿದ್ದಾರೆ. ಇದೀಗ ಬೆಂಗಳೂರಿನಲ್ಲಿ ಎರಡು ರೌಡಿ ಪಡೆಗಳ ನಡುವಿನ ಕಾಳಗ ಬೆಂಗಳೂರು ಪಾತಕ ಲೋಕವನ್ನು ಅನಾವರಣಗೊಳಿಸಿದೆ.












Click it and Unblock the Notifications