ರೋಷನ್ ಬೇಗ್ ಅವರು ರಾಷ್ಟ್ರ ಸೇವೆಗೆ ಹೋಗಲಿ: ಸಿದ್ದರಾಮಯ್ಯ
ಬೆಂಗಳೂರು, ಜೂನ್ 10: ಗ್ರಾಮೀಣಾಭಿವೃದ್ಧಿ ಸಚಿವ ರೋಷನ್ ಬೇಗ್ ಅವರು, ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ, ಆ ಮೂಲಕ ಅವರು ರಾಷ್ಟ್ರ ಸೇವೆಗೆ ಹೋಗಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಜೂನ್ 10ರಂದು ಶಿವಾಜಿನಗರದಲ್ಲಿ ಆಧುನೀಕರಣಗೊಳಿಸಿರುವ ವಿ.ಕೆ.ಒಬೇದುಲ್ಲಾ ಖಾನ್ ಸರ್ಕಾರಿ ಮಾದರಿ ಶಾಲೆ ಉದ್ಘಾಟನಾ ಸಮಾರಂಭದ ವೇಳೆ ಮಾತನಾಡಿದ ಅವರು, ರೋಷನ್ ಬೇಗ್ ಅವರು ಹಲವಾರು ವರ್ಷಗಳಿಂದ ಜನಸೇವೆ ಮಾಡಿ ರಾಜ್ಯಮಟ್ಟದಲ್ಲಿ ಹೆಸರು ಗಳಿಸಿದ್ದಾರೆ. ಅವರಿನ್ನು ರಾಷ್ಟ್ರ ಸೇವೆಗೆ ಹೋಗಬೇಕು. ಅವರಿಗೂ ಅದು ಇಷ್ಟ.ಹಾಗಾಗಿ, ಅವರು, ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿ ಎಂದರು.

ರೋಷನ್ ಬೇಗ್ ಅವರು ರಾಷ್ಟ್ರ ಸೇವೆಗೆ ಹೋದರೆ, ಅವರ ಪುತ್ರ ರುಮಾಲ್ ಬೇಗ್ ಅವರು, ವಿಧಾನಸಭೆಗೆ ಸ್ಪರ್ಧಿಸಲಿ ಎಂದು ಮುಖ್ಯಮಂತ್ರಿ ಆಶಯ ವ್ಯಕ್ತಪಡಿಸಿದರು.
ಆದರೆ, ಇದು ಕೇವಲ ಆಶಯವಲ್ಲ, ಮುಂದಿನ ಚುನಾವಣೆಯ ಕಾರ್ಯತಂತ್ರ ಎಂಬುದು ಅಲ್ಲಿದ್ದ ಕೆಲವರಿಗೆ ಅನ್ನಿಸಿದ್ದಂತೂ ಸುಳ್ಳಲ್ಲ.












Click it and Unblock the Notifications