ಬೆಂಗಳೂರು-ಮೈಸೂರು ಮೆಮು ರೈಲಿನಲ್ಲಿ ದರೋಡೆ: ನಾಲ್ವರು ಆರೋಪಿಗಳನ್ನು ಹೆಡೆಮುರಿ ಕಟ್ಟಿದ ರೈಲ್ವೆ ಪೊಲೀಸರು
ಬೆಂಗಳೂರು, ಫೆಬ್ರವರಿ, 12: ಬೆಂಗಳೂರು-ಮೂಸೂರು ರೈಲಿನಲ್ಲಿ ಪ್ರಾಯಾಣಿಸುತ್ತಿದ್ದ ಖದೀಮರ ಗ್ಯಾಂಗ್ ಅನ್ನು ರೈಲ್ವೆ ಪೊಲೀಸರು ಬಂಧಿಸಿ ಘಟನೆ ನಡೆದಿದೆ. ಹಾಗಾದರೆ ಇವರನ್ನು ಬಂಧಿಸಿದ ಪರಿ ಹೇಗಿತ್ತು ಹಾಗೂ ಎಲ್ಲಿಂದ ಎಲ್ಲಿ ಪ್ರಯಾಣ ಮಾಡುತ್ತಿದ್ದರು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ದರೋಡೆ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಹಾಗಂತ ಪೊಲೀಸರೇನು ಸುಮ್ಮ ಕುಳಿತುಕೊಂಡಿಲ್ಲ. ಬದಲಾಗಿ ದರೋಡೆಕೋರರನ್ನ ಬಂಧಿಸಿ ಅವರಿಂದ ದೋಚಿದ ವಸ್ತಗಳನ್ನು ವಶಪಡಿಸಿಕೊಂಡು ಕಳೆದುಕೊಂಡವರಿಗೆ ತಲುಪಿಸುವ ಕೆಲಸವನ್ನು ಕೂಡ ಮಾಡುತ್ತಿದ್ದಾರೆ.

ಪ್ರತಿನಿತ್ಯ ಸಾವಿರಾರು ಮಂದಿ ಪ್ರಯಾಣಿಕರು ಪ್ರಯಾಣ ಮಾಡುವ ಬೆಂಗಳೂರು, ಮೈಸೂರು ರೈಲಿನಲ್ಲಿ ದರೋಡೆ ಮಾಡಿದ್ದ ಗ್ಯಾಂಗ್ ಅನ್ನು ರೈಲ್ವೆ ಪೊಲೀಸರು ಬಂಧಿಸಿದ್ದಾರೆ. ಕಳೆದ ಫೆಬ್ರವರಿ 10ರಂದು ರಾತ್ರಿ 11 ಗಂಟೆಗೆ ಮೈಸೂರಿನಿಂದ ಬೆಂಗಳೂರಿಗೆ ಬರುತ್ತಿದ್ದ ಮೆಮು ರೈಲಿಗೆ ಈ ದರೋಡೆಕೋರರು ಹತ್ತಿದ್ದರು ಎಂದು ತಿಳಿದುಬಂದಿದೆ.
ಪರಾರಿಯಾಗಿದ್ದ ಆರೋಪಿಗಳು: ಮೈಸೂರಿನಲ್ಲಿ ರೈಲು ಹತ್ತಿರುವ ಆರೋಪಿಗಳು ಮೆಮು ರೈಲು ಮಂಡ್ಯ ಬಳಿ ಬಂದಾಗ ಮಾರಕಾಸ್ತ್ರ ತೋರಿಸಿ ದರೋಡೆ ಮಾಡಿದ್ದರು. ಈ ನಾಲ್ವರು ಆರೋಪಿಗಳು ಚಲಿಸುತ್ತಿದ್ದ ರೈಲಿನಲ್ಲಿ ಬಟನ್ ಚಾಕು, ತಲ್ವಾರ್ ತೋರಿಸಿ ಕಾಲಿನಿಂದ ಒದ್ದು ದರೋಡೆ ಮಾಡಿದ್ದರು. ಈ ಮಾಹಿತಿ ತಿಳಿದ ರೈಲ್ವೆ ಪೊಲೀಸರು ಚನ್ನಪಟ್ಟಣದಲ್ಲಿ ಹಿಡಿಯಲು ಹೋದಾಗ ತಪ್ಪಿಸಿಕೊಂಡಿದ್ದರು.
ಬಳಿಕ ರೈಲ್ವೆ ಪೊಲೀಸರು ಮೈಸೂರು-ಬೆಂಗಳೂರು ಮೆಮು ರೈಲಿನಲ್ಲಿ ನಡೆದಿದ್ದ ದರೋಡೆ ಪ್ರಕರಣದಲ್ಲಿ ತಪ್ಪಿಸಿಕೊಂಡ ನಾಲ್ವರು ಆರೋಪಿಗಳನ್ನು 2 ದಿನ ಕಳೆಯುವುದರೊಳಗೆ ಬಂಧಿಸಿದ್ದಾರೆ. ಶೈಕ್ ಸೋಹೈಬ್, ಶಾಹಿಲ್ ಖಾನ್, ಮಹಮ್ಮದ್ ಯಾಸಿನ್, ಓರ್ವ ಅಪ್ರಾಪ್ತ ನಾಲ್ವರು ಆರೋಪಿಗಳಾಗಿದ್ದಾರೆ. ಇವರು ಚಲಿಸುತ್ತಿದ್ದ ರೈಲಿಗೆ ಪ್ರಯಾಣಿಕರ ನೆಪದಲ್ಲಿ ಹತ್ತಿದ್ದರು. ಬಳಿಕ ಪ್ರಯಾಣಿಕರಿಗೆ ಮಾರಕಾಸ್ತ್ರ ತೋರಿಸಿ ದರೋಡೆ ಮಾಡಿ ತಪ್ಪಿಸಿಕೊಂಡಿದ್ದರು. ಇದೀಗ ಬಂಧಿತರಿಂದ 6,830 ರೂಪಾಯಿ ನಗದು, 6 ಮೊಬೈಲ್ ಸೇರಿ ಒಟ್ಟು 1ಲಕ್ಷ ಮೌಲ್ಯದ ವಸ್ತುಗಳನ್ನು ವಶವಡಿಸಿಕೊಂಡಿದ್ದಾರೆ.
ಬಂಧಿತ ನಾಲ್ವರು ಆರೋಪಿಗಳು ರೈಲ್ವೆ ಪ್ರಯಾಣಿಕರನ್ನೆೇ ಗುರಿಯಾಗಿಸಿಕೊಂಡು ದರೋಡೆ ಮಾಡುತ್ತಿದ್ದರು. ರಾತ್ರಿ ವೇಳೆ ದೂರದ ಊರಿನಿಂದ ಬರುತ್ತಿದ್ದ ಪ್ರಯಾಣಿಕರಿಗಾಗಿ ಇವರು ಕಾಯುತ್ತಿದ್ದರು. ಆಟೋದಲ್ಲಿ ಪಿಕ್ ಅಫ್ ಮಾಡಿ ಯಾರು ಇಲ್ಲದ ಪ್ರದೇಶಕ್ಕೆ ಕರೆದೊಯ್ದು ಅವರಿಗೆ ಬೆದರಿಕೆ ಹಾಕಿ ಹಣ, ಆಭರಣ ಸೇರಿದಂತೆ ಇನ್ನಿತರೆ ವಸ್ತುಗಳನ್ನು ದೋಚುತ್ತಿದ್ದರು. ಮಹಮ್ಮದ್ ನೂಪೈಲ್, ಮಹಮ್ಮದ್ ಜಾವಿದ್ ಖಾನ್ ಪ್ರಯಾಣಿಕರ ಬಳಿ ಹಣ ಹಾಗೂ ಚಿನ್ನವನ್ನು ದರೋಡೆ ಮಾಡುತ್ತಿದ್ದರು ಎಂದು ಪೊಲೀಸರ ತನಿಖೆ ಬಳಿಕ ತಿಳಿದುಬಂದಿದೆ.












Click it and Unblock the Notifications