ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರೈಲಿನಲ್ಲಿ ದರೋಡೆಗೆ ಸಹಾಯ ಮಾಡುವವರು ಇಲಾಖೆಯಲ್ಲೇ ಇದ್ದಾರೆ!

|
Google Oneindia Kannada News

ಬೆಂಗಳೂರು, ಜೂನ್ 3: ಬೆಂಗಳೂರು ರೈಲಿನಲ್ಲಿ ಆಗಾಗ ದರೋಡೆ ನಡೆಯುತ್ತಿರುವ ವಿಷಯಗಳು ಬೆಳಕಿಗೆ ಬರುತ್ತಿವೆ ಆದರೆ ಆ ದರೋಡೆಗೆ ಸಹಾಯ ಮಾಡುವವರು ಇಲಾಖೆಯಲ್ಲೇ ಇದ್ದಾರೆ ಎನ್ನುವ ಮಾಹಿತಿ ನಿಮಗೇನಾದರೂ ತಿಳಿದಿದೆಯೇ?

ಹೌದು ರೈಲ್ವೆ ಭದ್ರತಾ ಪಡೆ(ಆರ್‌ಪಿಎಫ್) ಈ ಕುರಿತು ತನಿಖೆ ನಡೆಸಿ ಹಲವು ವಿಚಾರಗಳನ್ನು ಬಯಲಿಗೆಳೆದಿದೆ.ರೈಲು ನಿಲ್ದಾಣಗಳಲ್ಲಿ ಅಥವಾ ಸಂಚರಿಸುತ್ತಿರುವ ರೈಲಿನಲ್ಲಿ ದರೋಡೆ ನಡೆಯಲು ರೈಲ್ವೆ ಇಲಾಖೆಯ ಸಿಬ್ಬಂದಿಗಳೇ ಸಹಾಯ ಮಾಡುತ್ತಿದ್ದಾರೆ ಎನ್ನುವ ಆತಂಕಕಾರಿ ವಿಚಾರ ಬೆಳಕಿಗೆ ಬಂದಿದೆ.

ಬೆಂಗಳೂರಲ್ಲಿ ರೈಲ್ವೆ ಪ್ರಯಾಣಿಕರ ಮೊಬೈಲ್ ಕದಿಯೋದು ಇವರೇ ನೋಡಿ ಬೆಂಗಳೂರಲ್ಲಿ ರೈಲ್ವೆ ಪ್ರಯಾಣಿಕರ ಮೊಬೈಲ್ ಕದಿಯೋದು ಇವರೇ ನೋಡಿ

ಇದಕ್ಕೆ ಪುಷ್ಠಿಯೆಂಬಂತೆ ಸಿಸಿಟಿವಿ ಕ್ಯಾಮರಾಗಳಲ್ಲಿಯೂ ದರೋಡೆ ಕುರಿತು ಯಾವುದೇ ಮಾಹಿತಿ ಸಿಗದಿರುವುದು ಅನುಮಾನವನ್ನು ದೃಢಪಡಿಸಿದೆ.

ಸಿಸಿಟಿವಿ ಕ್ಯಾಮರಾದಲ್ಲೂ ದರೋಡೆಕೋರರ ಸುಳಿವಿಲ್ಲ

ಸಿಸಿಟಿವಿ ಕ್ಯಾಮರಾದಲ್ಲೂ ದರೋಡೆಕೋರರ ಸುಳಿವಿಲ್ಲ

ರೈಲ್ವೆ ನಿಲ್ದಾಣಗಳಲ್ಲಿರುವ ಯಾವುದಾದರೊಂದು ಸಿಸಿಟಿವಿ ಕ್ಯಾಮರದಲ್ಲಾದರೂ ದರೋಡೆಕೋರರ ಸುಳಿವು ಸಿಗಬೇಕು ಆದರೆ ಯಾವ ಕ್ಯಾಮರಾದಲ್ಲೂ ಒಂದೇ ಒಂದು ಸುಳಿವು ಕೂಡ ಇಲ್ಲ, ಸಿಸಿಟಿವಿ ನಿರ್ವಹಣೆ ಮಾಡುವವರು ಕೂಡ ಈ ದರೋಡೆಯಲ್ಲಿ ಭಾಗಿಯಾಗಿರಬಹುದು ಎಂದು ಅನುಮಾನ ವ್ಯಕ್ತಪಡಿಸಲಾಗಿದೆ.

ದರೋಡೆ ನಡೆಯುವ ಸಮಯದಲ್ಲಿ ಕ್ಯಾಮರಾ ಕೇಬಲ್ ಕಟ್

ದರೋಡೆ ನಡೆಯುವ ಸಮಯದಲ್ಲಿ ಕ್ಯಾಮರಾ ಕೇಬಲ್ ಕಟ್

ಯಶವಂತಪುರ ಹಾಗೂ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣಗಳಲ್ಲಿ ದರೋಡೆ ನಡೆಯುವ ಸಂದರ್ಭದಲ್ಲಿ ಸಿಸಿಟಿವಿ ಕ್ಯಾಮರಾದ ಕೇಬಲ್‌ಗಳನ್ನು ಕಟ್ ಮಾಡಲಾಗಿದೆ. ಅಷ್ಟೇ ಅಲ್ಲದೆ ಕ್ಯಾಮರಾಗಳ ದಿಕ್ಕನ್ನೇ ಬದಲಿಸಲಾಗಿದೆ.ಹಾಗಾಗಿ ದರೋಡೆಕೋರರು ಯಾರೆಂಬುದು ಕ್ಯಾಮರಾದಲ್ಲಿ ದಾಖಲಾಗಿಲ್ಲ.

ರೈಲು ನಿಲ್ದಾಣಗಳಲ್ಲಿ ಮುಖ ಗುರುತು ಹಿಡಿಯುವ ಕ್ಯಾಮರಾ ಅಳವಡಿಕೆರೈಲು ನಿಲ್ದಾಣಗಳಲ್ಲಿ ಮುಖ ಗುರುತು ಹಿಡಿಯುವ ಕ್ಯಾಮರಾ ಅಳವಡಿಕೆ

ಏಪ್ರಿಲ್‌ನಲ್ಲಿ ನಾಲ್ಕು ಘಟನೆಗಳು ಬೆಳಕಿಗೆ

ಏಪ್ರಿಲ್‌ನಲ್ಲಿ ನಾಲ್ಕು ಘಟನೆಗಳು ಬೆಳಕಿಗೆ

ರೈಲುಗಳಲ್ಲಿ ದರೋಡೆ ಕುರಿತು ತನಿಖೆ ನಡೆಸಿದಾಗ ಯಶವಂತಪುರ ರೈಲಿನಲ್ಲಿ ಏಪ್ರಿಲ್ ತಿಂಗಳಲ್ಲಿ ನಾಲ್ಕು ಘಟನೆಗಳು ನಡೆದಿರುವ ಕುರಿತು ವರದಿಯಾಗಿದೆ. ರೈಲ್ವೆ ಪೊಲೀಸರು ಐದು ಮಂದಿಯ ಗ್ಯಾಂಗ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ದರೋಡೆಕೋರರು ರೈಲಿನ ಯಾವ ಭಾಗದಲ್ಲಿರುತ್ತಾರೆ

ದರೋಡೆಕೋರರು ರೈಲಿನ ಯಾವ ಭಾಗದಲ್ಲಿರುತ್ತಾರೆ

ದರೋಡೆಕೋರರು ಪ್ರಯಾಣಿಕರಿಗೆ ಮೀಸಲಿರಿಸಿರುವ ಆಸನಗಳಲ್ಲಿ ತಾವೂ ಕೂಡ ಪ್ರಯಾಣಿಕರಂತೆ ಕುಳಿತುಕೊಂಡಿರುತ್ತಾರೆ. ಬಳಿಕ ಉಳಿದ ಪ್ರಯಾಣಿಕರ ಬಳಿ ತಾವು ತಂದಿರುವ ಕುರುಕಲು ತಿಂಡಿಗಳು ಇನ್ನಿತರೆ ಆಹಾರ ಪದಾರ್ಥಗಳು ಬೇಕೇ ಎಂದು ಪ್ರಶ್ನಿಸುತ್ತಾರೆ. ಆತ್ಮೀಯರಂತೆ ನಡೆದುಕೊಳ್ಳುತ್ತಾರೆ. ಕಳೆದ ತಿಂಗಳು ಈ ಕುರಿತು ಪ್ರಯಾಣಿಕರೊಬ್ಬರು ವಿಡಿಯೋ ಮಾಡಿ ರೈಲ್ವೆ ಇಲಾಖೆ ನೀಡಿದ್ದರು. ಬಳಿಕ ಅವರು ಯಶವಂತಪುರಕ್ಕೆ ಬಂದಾಗ ಅವರನ್ನು ಹಿಡಿದು ಬಂಧಿಸಲಾಗಿತ್ತು.

ರೈಲ್ವೆ ಗುತ್ತಿಗೆದಾರರು ಶಾಮೀಲು

ರೈಲ್ವೆ ಗುತ್ತಿಗೆದಾರರು ಶಾಮೀಲು

ಅವರಿಬ್ಬರ ಫೋನ್‌ಗಳನ್ನು ಚೆಕ್ ಮಾಡಿದಾಗ ವಾಟ್ಸಪ್‌ನಲ್ಲಿದ್ದ ಫೋಟೊ ನೋಡಿದಾಗ ಈತನನ್ನು ಎಲ್ಲೋ ನೋಡಿದ್ದೇವೆ ಎಂದೆನಿಸಿತು ಬಳಿಕ ವಿಚಾರಿಸಿದಾಗ ಆತ ರೈಲ್ವೆ ಗುತ್ತಿಗೆದಾರ ಎನ್ನುವುದು ಸ್ಪಷ್ಟವಾಯಿತು. ಇನ್ನಷ್ಟು ವಿಚಾರಗಳನ್ನು ಕೆದಕಿದಾಗ ಆತ ಆಂಜನೇಯನಗರದ ಗ್ಯಾಂಗ್ ಒಂದರಲ್ಲಿ ಸೇರಿಕೊಂಡಿದ್ದ, ಪ್ರತಿ ದರೋಡೆಯಲ್ಲೂ ಆತ ಗ್ಯಾಂಗ್‌ಗೆ ಸಹಾಯ ಮಾಡುತ್ತಿದ್ದ ಎನ್ನುವುದು ಬಹಿರಂಗಗೊಂಡಿದೆ.

English summary
In a shocker the RPF has learnt that a railway contractor has been facilitating looting of passengers on board trains departing from Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X