• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಏರೋ ಇಂಡಿಯಾದಲ್ಲಿ ಭಸ್ಮವಾದ ಕಾರುಗಳ ರೋಡ್ ಟ್ಯಾಕ್ಸ್ ಹಿಂದಕ್ಕೆ

|

ಬೆಂಗಳೂರು, ಫೆಬ್ರವರಿ 27: ಯಲಹಂಕದ ವಾಯುನೆಲೆಯಲ್ಲಿ ಐದು ದಿನಗಳ ಕಾಲ ನಡೆದ ಏರೋ ಇಂಡಿಯಾ ವೈಮಾನಿಕ ಪ್ರದರ್ಶನಕ್ಕೆ ಈಗಾಗಲೇ ಸಿಹಿ-ಕಹಿ ತೆರೆ ಬಿದ್ದಿದೆ. ಪಾರ್ಕಿಂಗ್ ಪ್ರದೇಶದಲ್ಲಿ ಉಂಟಾದ ಅಗ್ನಿ ಅನಾಹುತದಲ್ಲಿ ಭಸ್ಮವಾದ ಕಾರುಗಳ ರೋಡ್ ತೆರಿಗೆಯನ್ನು ವಾಪಸ್ ನೀಡಲಾಗುತ್ತಿದೆ.

ಏರೋ ಇಂಡಿಯಾಗೆ ಬಾರದವರಿಗೆ ಟಿಕೆಟ್ ಹಣ ಮರುಪಾವತಿ

ಸುಟ್ಟು ಹೋಗಿರುವ ಕಾರುಗಳ ನೋಂದಣಿ ಸಂಖ್ಯೆಯನ್ನು ರದ್ದುಪಡಿಸಲಾಗುತ್ತಿದೆ. ಹೀಗಾಗಿ ಕಾರುಗಳ ಬಾಕಿ ಉಳಿದ ಅವಧಿಯ ರಸ್ತೆ ತೆರಿಗೆಯನ್ನು ಮಾಲೀಕರಿಗೆ ಹಿಂದಿರುಗಿಸಲಾಗುತ್ತಿದೆ.

2021ರ ಏರೋ ಇಂಡಿಯಾ ಎಲ್ಲಿ ನಡೆಯಲಿದೆ, ಬೆಂಗಳೂರಲ್ಲೇ ಇರುತ್ತಾ?

ಅಂದರೆ ಕಾರು ಖರೀದಿಸುವಾಗ 15 ವರ್ಷಗಳ ಅವಧಿಗೆ ರಸ್ತೆ ತೆರಿಗೆಯನ್ನು ಸಂಗ್ರಹಿಸಲಾಗಿರುತ್ತದೆ. ಕಾರು ಖರೀದಿಸಿ ಮೂರು ವರ್ಷವಾಗಿದ್ದರೆ ಬಾಕಿ ಉಳಿದ ವರ್ಷಗಳ ತೆರಿಗೆಯನ್ನು ವಾಪಸ್ ಕೊಡಲಾಗುತ್ತದೆ. ಇಂತಿಷ್ಟು ವರ್ಷವಾಗಿದ್ದರೆ ಇಷ್ಟು ಪ್ರಯಾಣಿಕರಿಗೆ ಇಷ್ಟು ಪ್ರಮಾಣದ ತೆರಿಗೆ ವಾಪಸ್ ಮಾಡುವ ನಿಯಮವಿದೆ. ಅದರಂತೆ ನೀಡಲಾಗುತ್ತದೆ.

ಏರೋ ಇಂಡಿಯಾ ಬೆಂಕಿ ಅನಾಹುತ: ಕಾರು ಮಾಲೀಕರಿಗೆ ಸಹಾಯವಾಣಿ

ಯಲಹಂಕ ವಾಯುನೆಲೆಯಲ್ಲಿ ಫೆ.20ರಿಂದ 24ರವರೆಗೆ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ನಡೆಯುತು. ಫೆ.23ರಂದು ಏರೋ ಇಂಡಿಯಾದ ಗೇಟ್ ನಂಬರ್ 5ರ ಬಳಿ ಇರುವ ಪಾರ್ಕಿಂಗ್ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡು ಸುಮಾರು 300 ಕಾರುಗಳು ಅಗ್ನಿಗೆ ಆಹುತಿಯಾಗಿದ್ದವು.

English summary
Transport department has decided to return the road tax to the owner who lost the car in Aero india parking fire.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X