ಬೆಂಗಳೂರಿನಲ್ಲಿ ಬಾಡಿಗೆ ಮನೆ ಪಡೆಯಲು ಇಂಟರ್‌ವ್ಯೂ ಪಾಸಾಗಲೇಬೇಕು..! ಆಫರ್‌ ಲೆಟರ್‌ಗೆ ಕಾಯಲೇಬೇಕು!

ಬೆಂಗಳೂರು, ನವೆಂಬರ್‌ 09: ಸಿಲಿಕಾನ್ ಸಿಟಿಯಲ್ಲಿ ಮನೆ ಪಡೆಯುವುದು ಎಷ್ಟು ಕಷ್ಟದ ವಿಚಾರ ಎನ್ನುವುದು ಬ್ಯಾಚುಲರ್ಸ್‌ಗೆ ಮಾತ್ರವಲ್ಲ ಸಕುಟುಂಬ ಸಮೇತ ಮನೆ ಹುಡುಕುವವರಿಗೂ ಸಹ ಗೊತ್ತಿದೆ. ಇದೀಗ ಬೆಂಗಳೂರು ನಗರದಲ್ಲಿ ಬಾಡಿಗೆ ಮನೆ ಪಡೆಯಲು ಆಫರ್ ಲೆಟರ್ ಕೂಡ ಬೇಕು ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ.

ಹಿಂದೆಲ್ಲಾ ಬೆಂಗಳೂರಿನಲ್ಲಿ ಕೆಲಸ ಹುಡುಕುವುದೇ ಕಷ್ಟ ಎನ್ನುತ್ತಿದ್ದರು. ಈಗ ಕೆಲಸ ಬೇಕಾದರೂ ಸಿಗಬಹುದು ಆದರೆ ಬಾಡಿಗೆ ಮನೆ ಸಿಗುವುದು ಕಷ್ಟ ಎನ್ನುವಂತಾಗಿದೆ. ಕೊರೊನಾ ಬಳಿಕ ಮನೆ ಬಾಡಿಗೆಗೆ ಪಡೆಯಲು ಹೊಸ ನಿಯಮಗಳು ಬಂದಿವೆ. ಅದರಲ್ಲಿ ಆಫರ್ ಲೆಟರ್ ಕೂಡ ಒಂದಾಗಿದೆ.

Rent House In Bengaluru: You Have To Pass An Interview To Get A House On Rent In Bengaluru

ನಿಮಗೆ ಬಾಡಿಗೆ ಮನೆ ಸಿಗಬೇಕು ಅಂದರೆ ರೆಸ್ಯೂಮ್‌, ಲಿಂಕ್ಡ್‌ಇನ್ ಪ್ರೊಫೈಲ್‌ ಜೊತೆಗೆ ಆಫರ್ ಲೆಟರ್ ಕೂಡಾ ಕೆಲವು ಕಡೆ ಕಡ್ಡಾಯವಾಗಿದೆಯಂತೆ. ಬೆಂಗಳೂರಿನಲ್ಲಿ ಮನೆ ಪಡಿಬೇಕು ಅಂದರೆ ನೀವು ಮೊದಲು ಇಂಟರ್‌ವ್ಯೂ ಪಾಸ್‌ ಆಗಬೇಕು. ಮನೆಯ ಮಾಲೀಕ ನಡೆಸುವ ಸಂದರ್ಶನದಲ್ಲಿ ಪಾಸಾಗಬೇಕು. ಬಳಿಕ ಶಾರ್ಟ್ಲಿಸ್ಟ್ ಆಗಬೇಕು. ಬಳಿಕ ಮನೆ ಮಾಲೀಕರು ಆಫರ್ ಲೆಟರ್ ಕಳುಹಿಸುತ್ತಾರಂತೆ. ಈ ರೀತಿ ಆಯ್ಕೆಯಾದ ಮಹಿಳೆಯೊಬ್ಬರು ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ.

ಮನೆ ಹುಡುಕಿ ಸುಸ್ತಾದ ಮಹಿಳೆಯೊಬ್ಬಳು ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರವನ್ನು ಶೇರ್ ಮಾಡಿಕೊಂಡಿದ್ದಾರೆ. ಜೊತೆಗೆ ಒಂದು ಸ್ಕ್ರೀನ್‌ ಶಾರ್ಟ್‌ ಕೂಡ ಹಂಚಿಕೊಂಡಿದ್ದು, ಸದ್ಯ ವೈರಲ್‌ ಆಗುತ್ತಿದೆ.

ಮನೆ ಮಾಲೀಕರು ನೀಡಿ ಆಫರ್‌ ಲೆಟರ್‌ನಲ್ಲಿ ಏನಿದೆ..?

'ಆ ದಿನ ನಿಮ್ಮಿಬ್ಬರನ್ನೂ ಭೇಟಿಯಾಗಿ ಸಂತೋಷವಾಯಿತು. ನಮ್ಮ ಭೇಟಿಯ ಸಮಯದಲ್ಲಿ ನಾನು ಹೇಳಿದಂತೆ, ನಮ್ಮ ಫ್ಲಾಟ್ ಮೇಲೆ ಆಸಕ್ತಿ ವ್ಯಕ್ತಪಡಿಸಿದ ಎಲ್ಲರನ್ನೂ ಭೇಟಿಯಾಗಲೂ ಆಗಿಲ್ಲವಾದರೂ ಅವರಲ್ಲಿ ಯಾರು ಬೆಸ್ಟ್ ಎಂದು ಗುರುತಿಸಲು ಒಂದಷ್ಟು ಬೆಸ್ಟ್ ರಿಸನ್ ಸರ್ಚ್ ಮಾಡಿದೆ . ನನ್ನ ಶಾರ್ಟ್‌ಲಿಸ್ಟ್‌ನಲ್ಲಿ ನಿಮ್ಮಿಬ್ಬರಿಗೆ ಮೊದಲ ಆಫರ್ ನೀಡಲು ಬಯಸುವೆ ಎಂದು ಮನೆ ಮಾಲೀಕರು ಮಹಿಳೆಗೆ ಮೆಸೇಜ್ ಮೂಲಕ ಆಫರ್‌ ಲೆಟರ್‌ ನೀಡಿದ್ದಾರೆ.

Rent House In Bengaluru: You Have To Pass An Interview To Get A House On Rent In Bengaluru

ಮಹಿಳೆ ಹಂಚಿಕೊಂಡ ಈ ಪೋಸ್ಟ್‌ಗೆನೆಟ್ಟಿಗರು ಪರಿಪರಿಯಾಗಿ ಕಾಮೆಂಟ್ ಮಾಡುತ್ತಿದ್ದಾರೆ. ನೀವು ಕೆಲಸ ಮಾಡುವ ಕಂಪನಿಯನ್ನು ಆಧರಿಸಿ ಓನರ್ ಶಾರ್ಟ್‌ಲಿಸ್ಟ್ ಮಾಡುತ್ತಾರೆ ಎಂದು ಒಬ್ಬರು ಕಾಮೆಂಟ್ ಮಾಡಿದೆ, ನಿಮಗೆ ತಡವಾಗಿ ಈ ತರಹ ಅನುಭವ ಆಗಿದೆ. ಕೋವಿಡ್ ನಂತರ ಇದು ಕಾಮನ್. ಬೆಂಗಳೂರಿನಲ್ಲಿ ಮನೆ ಪಡೆಯುವುದಕ್ಕಿಂತ ಕೆಲಸ ಪಡೆಯುವುದೇ ಸುಲಭ ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ಬೆಂಗಳೂರಿನಲ್ಲಿ ಬಾಡಿಗೆ ಮನೆ ಪಡೆಯುವುದು ದೊಡ್ಡ ಹರಸಾಹಸವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+