GBA: ಒತ್ತುವರಿ ತೆರವು ಸಹಿತ ಕಾರ್ಯಾಚರಣೆಗೆ ಇಳಿದ ಗ್ರೇಟರ್ ಬೆಂಗಳೂರು ಪ್ರಾಧಿಕಾರ

ಬೆಂಗಳೂರು, ಸೆಪ್ಟಂಬರ್ 07: ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಪಾದಚಾರಿ ಮಾರ್ಗದಲ್ಲಿ ಅನಧಿಕೃತವಾಗಿ ಅಳವಡಿಸಿರುವ ಶಾಶ್ವತ ಪೆಟ್ಟಿಗೆಗಳನ್ನು ಮುಲಾಜಿಲ್ಲದೆ ತೆರವುಗೊಳಿಸಲು ಆಯುಕ್ತ ರಮೇಶ್ ಡಿ.ಎಸ್ ರವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ನಗರದ ಪಾಲಿಕೆ ವ್ಯಾಪ್ತಿಯ ಪ್ರದೇಶಗಳು, ಪಾದಾಚಾರಿ ಮಾರ್ಗಗಳ ಒತ್ತುವರಿ ವಿರುದ್ಧ ಪಾಲಿಕೆ ಅಧಿಕಾರಿಗಳು ಸಮರ ಸಾರಿದ್ದಾರೆ.

ಭಾನುವಾರ ಬೆಳಗ್ಗೆ ಬೆಳ್ಳಂದೂರು ವಾರ್ಡ್ ವ್ಯಾಪ್ತಿಯ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಆಯುಕ್ತ ರಮೇಶ್ ಡಿ.ಎಸ್. ಅವರು ವಿಪ್ರೋ ಬಳಿಯ ಪಾದಚಾರಿ ಮಾರ್ಗದಲ್ಲಿ ಶಾಶ್ವತವಾಗಿ ಅಳವಡಿಸಿಕೊಂಡಿರುವ ಪೆಟ್ಟಿಗೆಗಳನ್ನು ಗಮನಿಸಿದರು. ಸ್ಥಳದಲ್ಲಿಯೇ ಜೆಸಿಬಿ ಮೂಲಕ ತೆರವುಗೊಳಿಸಲಾಯಿತು. ಮತ್ತೆ ಈ ರೀತಿ ಪಾದಚಾರಿ ಮಾರ್ಗ ಒತ್ತುವರಿ ಮಾಡಿಕೊಂಡರೆ ಕಾನೂನು ಕ್ರಮ ಜರುಗಿಸುವುದುದಾಗಿ ಅವರು ಎಚ್ಚರಿಸಿದರು.

Remove Unauthorized Permanent Stalls from Footpaths Without Hesitation Ramesh D S

ಆಟೋ ಟಿಪ್ಪರ್ ಮಸ್ಟರಿಂಗ್ ಕೇಂದ್ರಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಅನಂತರ ಅಪಾರ್ಟ್ ಮೆಂಟ್ ಗಳಿಂದ ಸಂಗ್ರಹಿಸುವ ಬಲ್ಕ್ ವೇಸ್ಟ್‌ ಪ್ರಕ್ರಿಯೆ ಸಹ ವೀಕ್ಷಿಸಿದರು. ಪಾಕಶಾಲ ಹೋಟೆಲ್ ನಲ್ಲಿರುವ ಅಡುಗೆ ಕೋಣೆಗೆ ಭೇಟಿ ನೀಡಿ ಶುಚಿತ್ವ ಕಾಪಾಡಿಕೊಂಡಿರುವುದನ್ನು ಪರಿಶೀಲಿಸಿದರು. ಶುಚಿತ್ವ ಇಲ್ಲದಿರುವುದನ್ನು ಗಮನಿಸಿ ಹೋಟೆಲ್ ಮಾಲೀಕರಿಗೆ ರೂ.25,000/- ದಂಡ ವಿಧಿಸಿ ಮತ್ತೆ ಈ ರೀತಿ ಆಗದಂತೆ ತಿಳಿ ಹೇಳಿದರು.

ಪ್ರವಾಹ ಪೀಡಿತ ಪ್ರದೇಶಗಳು

ಬೆಂಗಳೂರು ಪೂರ್ವ ನಗರ ಪಾಲಿಕೆಯ ಅಪರ ಆಯುಕ್ತರಾದ ಲೋಖಂಡೆ ಸ್ನೇಹಲ್ ಸುಧಾಕರ್ ರವರು ಇಂದು ಕೆ.ಆರ್ ಪುರಂ ವ್ಯಾಪ್ತಿಯಲ್ಲಿ ಬೃಹತ್ ನೀರುಗಾಲುವೆಗಳಲ್ಲಿ ಹೂಳೆತ್ತುವ, ಪ್ರವಾಹ ಪೀಡಿತ ಪ್ರದೇಶಗಳ ಪರಿಶೀಲನೆ ನಡೆಸಿ ತ್ವರಿತಗತಿಯಲ್ಲಿ ಕಾರ್ಯ ನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಪೈ ಲೇಔಟ್ ನಲ್ಲಿ ರಾಜಕಾಲುವೆ ಪರಿಶೀಲಿಸಿ, ಸ್ಥಳದಲ್ಲಾಗುವ ಪ್ರವಾಹವನ್ನು ತಪ್ಪಿಸಲು ಸಿ.ವಿ. ರಾಮನ್ ನಗರದ ಕಡೆಯಿಂದ ಬರುವ ಮಳೆ ನೀರುಗಾಲುವೆಯ ಗೋಡೆ ಎತ್ತರಿಸಬೇಕು. ಜೊತೆಗೆ ರೈಲ್ವೆ ಹಳಿ ಕೆಳಭಾಗದ ವೆಂಟ್ ಅಗಲೀಕರಣ ಮಾಡಬೇಕು ಎಂದರು.

ಇನ್ನೂ ವಾರ್ಡ್ ಗಳಲ್ಲಿ ರಸ್ತೆಗಳ ಸ್ವಚ್ಛತೆ ಕಾಪಾಡುವ ಜೊತೆಗೆ ರಸ್ತೆಗುಂಡಿಗಳನ್ನು ಗುರುತಿಸಿ ತ್ವರಿತಗತಿಯಲ್ಲಿ ಮುಚ್ಚುಬೇಕು. ಹಳೇ ಮದ್ರಾಸ್ ರಸ್ತೆ ಯಲ್ಲಿ ಮಳೆ ಸಂದರ್ಭದಲ್ಲಿ ಜಲಾವೃತವಾಗುವುದನ್ನು ತಪ್ಪಿಸಲು, ಪೈಪ್ ಕಲ್ವರ್ಟ್ ಅನ್ನು ಸ್ವಚ್ಛಗೊಳಿಸಿ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಬೇಕು.

ರಾಮಮೂರ್ತಿ ನಗರ ಹಾಗೂ ಯರಣ್ಣ ಪಾಳ್ಯದಲ್ಲಿ ರಾಜಕಾಲುವೆ ಕಾಮಗಾರಿ ನಡೆಯುತ್ತಿದ್ದು, ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು. ಟಿನ್ ಫ್ಯಾಕ್ಟರಿ ಬಳಿ ಹಾಳಾಗಿರುವ ರಸ್ತೆ ದುರಸ್ಥಿಪಡಿಸಲು ಹಾಗೂ ಸಾರ್ವಜನಿಕ ಶೌಚಾಲಯ ನಿರ್ಮಿಸಬೇಕು. ವೆಂಗಯ್ಯನ ಕೆರೆ ಬಳಿ ಜಲಾವೃತವಾಗುತ್ತಿದ್ದು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರೊಂದಿಗೆ ಮಾತನಾಡಿ ಸಮಸ್ಯೆ ಬಗೆರಹಿಸಬೇಕು ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+