ಬಸ್‌ಗಳಿಂದ 'ವಿಮಲ್' ತಂಬಾಕು ಉತ್ಪನ್ನಗಳ ಜಾಹೀರಾತುಗಳನ್ನು ತೆಗೆದುಹಾಕಲು ಮನವಿ
ಬೆಂಗಳೂರು, ಮೇ. 03: ರಾಜ್ಯದ ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಪ್ರತಿದಿನ ಲಕ್ಷಾಂತರ ಜನ ಪ್ರಯಾಣ ಮಾಡುತ್ತಾರೆ. ಒಂದಲ್ಲ ಒಂದು ಕಾರಣಕ್ಕೆ ಬಸ್‌ಗಳ ಹಿಂದಿರುವ ಜಾಹೀರಾತುಗಳ ಮೇಲೆ ಗಮನ ಹೋಗಿಯೇ ಹೋಗುತ್ತದೆ. ಇಲ್ಲಿ ಹಾಕುವ ಜಾಹೀರಾತುಗಳ ಬಗ್ಗೆ ಗಮನ ಹರಿಸುವಂತೆ ಮತ್ತು ತಂಬಾಕು ಉತ್ಪನ್ನಗಳ ಬಾಡಿಗೆ ಜಾಹೀರಾತು ನಿಷೇಧಿಸುವಂತೆ ಮನವಿ ಬಂದಿದೆ.
ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ 'ವಿಮಲ್ ಎಲೈಚಿ' ಜಾಹೀರಾತು ಹಾಕುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಸಾರ್ವಜನಿಕ ಆರೋಗ್ಯ ಹೋರಾಟಗಾರರು ಮತ್ತು ಆರೋಗ್ಯ ಸೇವಾ ಸಂಘಗಳ ಒಕ್ಕೂಟವಾದ ತಂಬಾಕು ಮುಕ್ತ ಕರ್ನಾಟಕ (ಸಿಎಫ್‌ಟಿಎಫ್‌ಕೆ) ಒಕ್ಕೂಟವು ಬಸ್‌ನ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಕಳುಹಿಸಿದೆ.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಮತ್ತು ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳ ನಿಗಮಗಳು ಇಂತಹ ತಂಬಾಕು ಉತ್ಪನ್ನದ ಬಳಕೆಯನ್ನು ಉತ್ತೇಜಿಸುವ ಜಾಹೀರಾತುಗಳನ್ನು ಬಸ್‌ಗಳಿಂದ ತೆಗೆದುಹಾಕಬೇಕು ಎಂದು ಸಿಎಫ್‌ಟಿಎಫ್‌ಕೆ ಒತ್ತಾಯಿಸಿದೆ.
"ಭಾರತದಲ್ಲಿ ತಂಬಾಕು ಮತ್ತು ಆಲ್ಕೋಹಾಲ್ ಉತ್ಪನ್ನಗಳ ಜಾಹೀರಾತುಗಳನ್ನು ನಿಷೇಧಿಸಲಾಗಿದೆ. ತಯಾರಕರು ಇವುಗಳ ಬಾಡಿಗೆ ಉತ್ಪನ್ನಗಳಂತಹ ಜಾಹೀರಾತುಗಳ ಸೃಜನಶೀಲ ವಿಧಾನಗಳನ್ನು ಬಳಸಿ ತಯಾರಿಸುತ್ತುದ್ದುಮ ಇವುಗಳನ್ನು ಜನರ ಮುಂದೆ ಇಡಲಾಗುತ್ತಿದೆ ಎಂದು ಒಕ್ಕೂಟ ಆರೋಪಿಸಿದೆ.
ತಂಬಾಕು ಉತ್ಪನ್ನಗಳಾದ ಕಮಲಾ ಪಸಂದ್, ವಿಮಲ್ ಪಾನ್ ಮಸಾಲಾ, ರಜನಿಗಂಧ ಮತ್ತು ಇಂಪೀರಿಯಲ್ ಬ್ಲೂ ಮತ್ತು ಸ್ಟರ್ಲಿಂಗ್ ರಿಸರ್ವ್‌ನಂತಹ ಆಲ್ಕೋಹಾಲ್ ಪಾನೀಯಗಳನ್ನು ಮಾರಾಟ ಮಾಡುವ ಕಂಪನಿಗಳಿಗೆ ಅಂತಹ ಜಾಹೀರಾತುಗಳ ವಿರುದ್ಧ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರವು ನೋಟಿಸ್ ನೀಡಿದೆ ಎಂದು ಸಿಎಫ್‌ಟಿಎಫ್‌ಕೆ ಸಂಚಾಲಕ ಎಸ್ ಜೆ ಚಂದರ್ ಹೇಳಿದ್ದಾರೆ.
"ಏಲಕ್ಕಿ ಮಾರಾಟದ ನೆಪದಲ್ಲಿ ವಿಮಲ್ ಜಗಿಯುವ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವ ಉದ್ದೇಶದಿಂದ ಜಾಹೀರಾತು ಮಾಡಲಾಗಿದೆ. ಸಿಗರೇಟ್ ಮತ್ತು ತಂಬಾಕು ಉತ್ಪನ್ನಗಳ ನೇರ ಮತ್ತು ಪರೋಕ್ಷ ಜಾಹೀರಾತು ನಿಷೇಧಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.
ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಲಕ್ಷಗಟ್ಟಲೆ ಜನರು ಬಳಸುತ್ತಾರೆ ಮತ್ತು ರಸ್ತೆಯಲ್ಲಿರುವ ಅನೇಕರು, ವಿಶೇಷವಾಗಿ ಮಕ್ಕಳು ಮತ್ತು ಯುವಕರ ಮೇಲೆ ಈ ಜಾಹೀರಾತುಗಳೂ ಭಾರೀ ಪ್ರಭಾವ ಬೀರುತ್ತದೆ. ಆರೋಗ್ಯದ ಮೇಲೆ ಈ ಉತ್ಪನ್ನಗಳ ಘೋರ ಪರಿಣಾಮವನ್ನು ಪರಿಗಣಿಸಿ, ಬಸ್ ನಿಗಮಗಳು ಅದರ ಜಾಹೀರಾತುಗಳನ್ನು ನಿರ್ಬಂಧಿಸಬೇಕು ಮತ್ತು ಪಾನ್ ಮಸಾಲಾ ಕಂಪನಿಗಳೊಂದಿಗೆ ತಮ್ಮ ಒಪ್ಪಂದವನ್ನು ರದ್ದುಗೊಳಿಸಬೇಕು ಎಂದು ಸಿಎಫ್‌ಟಿಎಫ್‌ಕೆ ಸಂಚಾಲಕ ಎಸ್ ಜೆ ಚಂದರ್ ಹೇಳಿದ್ದಾರೆ.
ರಾಜ್ಯ ಆರೋಗ್ಯ ಆಯುಕ್ತ ಡಿ ರಂದೀಪ್ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಜತೆಗೆ ಮಾತನಾಡಿದ್ದು, "ಆರೋಗ್ಯ ಇಲಾಖೆಯು ಇತ್ತೀಚೆಗೆ ಸ್ಟಾಪ್ ಟೊಬ್ಯಾಕೊ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಜನರು ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನದ ಬಗ್ಗೆ ದೂರು ನೀಡಬಹುದು ಮತ್ತು ನಾವು ಅನೇಕ ಗ್ರಾಮಗಳನ್ನು ತಂಬಾಕು ಮುಕ್ತಗೊಳಿಸಿದ್ದೇವೆ. ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಎರಡಕ್ಕೂ ಬಾಡಿಗೆ ಜಾಹೀರಾತನ್ನು ತೆಗೆದುಹಾಕಲು ನಾವು ವಿನಂತಿಸುತ್ತೇವೆ" ಎಂದಿದ್ದಾರೆ.












Click it and Unblock the Notifications