ದರ್ಶನ್‌ ಬಂಧನ: ನ್ಯಾಯಾಲಯಕ್ಕೆ ನೀಡಿದ ರಿಮಾಂಡ್‌ ನೋಟ್‌ನಲ್ಲಿ ಏನೆಲ್ಲಾ ಇದೆ?

ರೇಣುಕಾಸ್ವಾಮಿ ಕೊಲೆ ಪ್ರಕರಣ ಸದ್ಯ ರಾಜ್ಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹಲವರ ವಿಚಾರಣೆ ನಡೆಸಿದ್ದು, ಪವಿತ್ರಾ ಗೌಡ ಸೇರಿದಂತೆ ಕೆಲವರು ನ್ಯಾಯಂಗ ಬಂಧನದಲ್ಲಿದ್ದಾರೆ. ದರ್ಶನ್‌ ಶನಿವಾರ ಕೋರ್ಟ್‌ ಮುಂದೆ ಮತ್ತೊಮ್ಮೆ ಹಾಜರಾಗಲಿದ್ದಾರೆ.

ಈ ಪ್ರಕರಣದಲ್ಲಿ ಪವಿತ್ರಾ ಗೌಡ್‌ರನ್ನು ಎ1 ಆರೋಪಿ ಎಂದು ಮಾಡಲಾಗಿದ್ದು, ನಟ ದರ್ಶನ್‌ ಎ2 ಆರೋಪಿ. ಪೊಲೀಸ್‌ ರಿಮಾಂಡ್‌ ನೋಟ್‌ನಲ್ಲಿರುವ ಮಾಹಿತಿಯ ಪ್ರಕಾರ ರೇಣುಕಾಸ್ವಾಮಿ ಕೊಲೆಯಾದ ಸ್ಥಳದಲ್ಲಿ ಪವಿತ್ರಾ ಗೌಡ ಇದ್ರು ಎಂದು ತಿಳಿಸಲಾಗಿದೆ. ಅಲ್ಲದೆ ಇದೇ ವೇಳೆ ಪವಿತ್ರಾ ರೇಣುಕಾಸ್ವಾಮಿಗೆ ಚಪ್ಪಲಿಯಿಂದ ಥಳಿಸಿದ್ದಾರೆ ಎಂದು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದ ಪೊಲೀಸರು ರಿಮಾಂಡ್‌ನಲ್ಲಿ ಹೇಳಿದ್ದಾರೆ.

Regarding Darshan s arrest What does the remand note presented to the court state

ಈ ಪ್ರಕರಣದ ಬಳಿಕ ದರ್ಶನ್‌ ಹಲವರ ಜೊತೆ ಸಂಪರ್ಕದಲ್ಲಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಇನ್ನು ಕೊಲೆ ಗೀಡಾದ ರೇಣುಕಾಸ್ವಾಮಿ ಅವರಿಗೆ ವಿದ್ಯುತ್ ಶಾಕ್‌ ನೀಡಲಾಗಿತ್ತು ಎಂದು ವಿಚಾರಣೆಯ ವೇಳೆ ಒಬ್ಬ ಬಂಧಿತ ತಪ್ಪು ಒಪ್ಪಿಕೊಂಡಿದ್ದಾನೆ. ಇನ್ನು ನೀಡಲು ಬಳಸಲಾಗಿದ್ದ ಉಪಕರಣವನ್ನು ಪೊಲೀಸರು ಬಂಧಿತನ ಮನೆಯಿಂದ ವಶಕ್ಕೆ ಪಡೆದಿದ್ದಾರೆ. ಈ ಪ್ರಕರಣದಿಂದ ಪಾರಾಗಲು ದರ್ಶನ್‌ ಸಾಕ್ಷ್ಯ ನಾಶಕ್ಕೂ ಮುಂದಾಗಿದ್ದರು. ಇದಕ್ಕಾಗಿ 40 ಲಕ್ಷ ಸಾಲ ಪಡೆದಿದ್ದರು ಎಂದು ಹೇಳಲಾಗುತ್ತಿದೆ. ಈ ಹಣವನ್ನು ಸಹ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ವಿದ್ಯುತ್ ಶಾಕ್‌ ನೀಡುವ ಉಪಕರಣವನ್ನು ಬಂಧಿತ ಎಲ್ಲಿಂದ ತಂದಿದ್ದ ಎಂದು ಹೇಳಿಲ್ಲ ಎಂದು ತಿಳಿದು ಬಂದಿದೆ. ಹೀಗಾಗಿ ಗುರುವಾರ ಕೋರ್ಟ್‌ ಮುಂದೆ ಪೊಲೀಸರು ತಿಳಿಸಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಾಜಿಕ ತಾಣದಲ್ಲಿ ಹಂಚಿಕೊಂಡ ಫೋಟೋಗಳನ್ನು ಡಿಲೀಟ್ ಮಾಡಲಾಗಿದ್ದು, ಅವುಗಳನ್ನು ರಿಟ್ರೀವ್ ಮಾಡಲು ಇನ್‌ ಸ್ಟಾಗ್ರಾಮ್‌ ಮಾತೃಸಂಸ್ಥೆ ಸಂಪರ್ಕಿಸುವ ಯೋಚನೆ ನಡೆಸಿದ್ದಾರೆ ಎಂದು ಮೂಗಳಿಂದ ತಿಳಿದು ಬಂದಿದೆ.

ದರ್ಶನ್‌ ಈ ಪ್ರಕರಣದ ಸಾಕ್ಷ್ಯ ನಾಶ ಮಾಡಲು ತನ್ನ ಸ್ನೇಹಿತ ಮೋಹನ್ ರಾಜ್ 40 ಲಕ್ಷ ರೂಪಾಯಿ ಪಡೆದಿದ್ದರು ಎಂದು ಪರಿಷ್ಕೃತ ಹೇಳಿಕೆಯಲ್ಲಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರಿಂದ ತಿಳಿದು ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಒಂದು ಮನೆಯಿಂದ 37.4 ಲಕ್ಷ ರೂ. ಹಾಗೂ ಇನ್ನೊಂದು ಮನೆಯಿಂದ 3 ಲಕ್ಷ ವಶಕ್ಕೆ ಪಡೆಯಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+