Property: ಎಕ್ಸ್‌ಪ್ರೆಸ್‌ವೇ ಬೆಂಗಳೂರಿನಲ್ಲಿ ಚಿಗುರಿದ ರಿಯಲ್‌ ಎಸ್ಟೇಟ್‌: ಈ ಭಾಗಗಳಲ್ಲಿ ಭೂಮಿಗೆ ಬಂಪರ್ ಬೆಲೆ!

ಬೆಂಗಳೂರು ಹಾಗೂ ಬೆಂಗಳೂರಿನ ಹೊರ ವಲಯಗಳಲ್ಲಿನ ಭೂಮಿ ಹಾಗೂ ಮನೆಗಳಿಗೆ ಬಂಪರ್ ಬೆಲೆ ಬಂದಿದೆ. ಬೆಂಗಳೂರನ್ನು ಸಂಪರ್ಕಿಸುವ ಮಾರ್ಗವಾಗಿ ನಡೆದಿರುವ ಬೃಹತ್‌ ಯೋಜನೆಯಿಂದಾಗಿ ಭೂಮಿಗೆ ಭರ್ಜರಿ ಬೆಲೆ ಬಂದಿದೆ. ಬೆಂಗಳೂರಿನಲ್ಲಿ ಈಗಾಗಲೇ ರಿಯಲ್‌ ಎಸ್ಟೇಟ್‌ ಚಿಗುರೊಡೆದಿದೆ. ಇದೀಗ ಈ ಯೋಜನೆಯಿಂದ ಬೆಂಗಳೂರು ಮಾತ್ರವಲ್ಲದೆ ಸುತ್ತಮುತ್ತಲಿನ ಪ್ರದೇಶದಲ್ಲೂ ಭೂಮಿಗೆ ಗೋಲ್ಡ್‌ ಬೆಲೆ ಬಂದಿದೆ. ಬೆಂಗಳೂರಿನ ಎಲ್ಲೆಲ್ಲಿ ಹಾಗೂ ಯಾವ ಕಾರಣಕ್ಕೆ ಭೂಮಿ ಬೆಲೆ ಹೆಚ್ಚಳವಾಗಿದೆ ಎನ್ನುವ ವಿವರ ಇಲ್ಲಿದೆ.

ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ ಸಂಚಾರಕ್ಕೆ ಮುಕ್ತವಾಗುವ ಬೆನ್ನಲ್ಲೇ ಬೆಂಗಳೂರು ಹಾಗೂ ಹೊಸಕೋಟೆ ಮಾರ್ಗ ಸೇರಿ ವಿವಿಧ ಭಾಗದಲ್ಲಿ ಭೂಮಿಗೆ ಬಂಗಾರದ ಬೆಲೆ ಬಂದಿದೆ. ಬೆಂಗಳೂರು ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ ವಿವಿಧ ಯೋಜನೆಗಳಿಂದ ಬೆಂಗಳೂರಿನ ರಿಯಲ್‌ ಎಸ್ಟೇಟ್‌ ಚಿಗುರೊಡೆದಿದೆ. ಇದೀಗ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ ಯೋಜನೆಯು ಹೊಸ ವೇಗ ನೀಡಿದೆ. ಬೆಂಗಳೂರು - ತಮಿಳುನಾಡನ್ನು ಸಂಪರ್ಕಿಸುವ ಪ್ರದೇಶಗಳಲ್ಲಿ ಭೂಮಿಯ ಬೆಲೆ ಸಿಕ್ಕಾಪಟ್ಟೆ ಹೆಚ್ಚಳವಾಗಿದೆ.

Real Estate Booming Along Bengaluru - Chennai Expressway Land Prices in These Parts Bumper Price

ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ ಅನ್ನು 262 ಕಿ.ಮೀ ಉದ್ದವಿದೆ. ಅಲ್ಲದೇ ಈ ಯೋಜನೆಗೆ ಬರೋಬ್ಬರಿ 18,000 ಕೋಟಿ ರೂಪಾಯಿ ವೆಚ್ಚವಾಗಿದೆ. ಈ ಎಕ್ಸಪ್ರೆಸ್ ವೇಯಿಂದಾಗಿ ಬೆಂಗಳೂರು ಹಾಗೂ ಚೆನ್ನೈ ನಡುವಿನ ಪ್ರಯಾಣದ ಸಮಯವು 6ರಿಂದ 7 ಗಂಟೆಯಷ್ಟು ಕಡಿಮೆಯಾಗಲಿದೆ. ಆದರೆ ಈ ಯೋಜನೆಗೆ ಸಾಗಿ ಹೋಗಿರುವ ಮಾರ್ಗಗಳಲ್ಲಿ ಇದೀಗ ಉದ್ಯಮಗಳು ಪ್ರಾರಂಭವಾಗುತ್ತಿದ್ದು, ಭೂಮಿ ಬೆಲೆ ಭರ್ಜರಿ ಹೆಚ್ಚಳವಾಗಿದೆ ಎಂದು ಹೇಳಲಾಗಿದೆ.

ಭಾರತದ ದಕ್ಷಿಣ ಭಾಗದಲ್ಲಿ ಪ್ರಮುಖ ನಗರಗಳಾದ ಬೆಂಗಳೂರು ಹಾಗೂ ಚೆನ್ನೈ ನಗರಗಳಲ್ಲಿ ಕಳೆದ ಮೂರ್ನಾಲ್ಕು ದಶಕಗಳಿಂದ ಭೂಮಿಗೆ ಬಂಗಾರದ ಬೆಲೆ ಬಂದಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಭೂಮಿ ಮಾರಾಟ ಹಾಗೂ ಖರೀದಿ ಪ್ರಕ್ರಿಯೆ ಜೋರಾಗಿದೆ. ಭೂಮಿಗೆ ಇನ್ನಷ್ಟು ಒಳ್ಳೆಯ ಬೆಲೆ ಬಂದಿದೆ ಎಂದು ಹೇಳಲಾಗುತ್ತಿದೆ. ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇಯಿಂದ ರಿಯಲ್‌ ಎಸ್ಟೇಟ್‌ಗೆ ಸಾಕಷ್ಟು ಲಾಭವಾಗಿದೆ ಎಂದು 99 Acres ಹೇಳಿದೆ.

ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ 262 ಕಿ.ಮೀ. ಉದ್ದದ ಮಾರ್ಗವಾಗಿದೆ. ಎರಡು ನಗರಗಳ ನಡುವಿನ ಪ್ರಯಾಣದ ಸಮಯವನ್ನು 6ರಿಂದ7 ಗಂಟೆಗಳಷ್ಟು ಕಡಿಮೆ ಮಾಡಿದೆ. ಬೆಂಗಳೂರು ಹೊರ ವಲಯದ ಹೊಸಕೋಟೆಯಿಂದ ಪ್ರಾರಂಭವಾಗಿ ಚೆನ್ನೈನ ಶ್ರೀಪೆರಂಬುದೂರಿನ ವರೆಗೆ ಈ ಎಕ್ಸ್‌ಪ್ರೆಸ್‌ ವೇ ನಿರ್ಮಾಣವಾಗಿದ್ದು. ಇದಕ್ಕೆ ಬಜೆಟ್‌ನಲ್ಲಿ ಬರೋಬ್ಬರಿ 18,000 ಕೋಟಿ ರೂಪಾಯಿಗಳನ್ನು ಮೀಸಲಿರಿಸಲಾಗಿತ್ತು. ಇದು ನಾಲ್ಕು ಪಥದ ಎಕ್ಸ್‌ಪ್ರೆಸ್‌ವೇ ಆಗಿದೆ. ಇದಕ್ಕೆ ರಾಷ್ಟ್ರೀಯ ಎಕ್ಸ್‌ಪ್ರೆಸ್‌ವೇ (NE)-7 ಎಂದು ಕರೆಯಲಾಗುತ್ತದೆ. ಈ ಎಕ್ಸ್‌ಪ್ರೆಸ್‌ವೇಯಿಂದ ಕರ್ನಾಟಕದ ಪ್ರಮುಖ ಪ್ರದೇಶಗಳು , ಆಂಧ್ರಪ್ರದೇಶ ಹಾಗೂ ತಮಿಳುನಾಡು ಸೇರಿ ಮೂರು ರಾಜ್ಯಗಳಿಗೆ ಭರ್ಜರಿ ಲಾಭವಾಗಿದೆ ಎಂದೇ ಹೇಳಲಾಗುತ್ತಿದೆ.

ಬೆಂಗಳೂರು ಹಾಗೂ ಚೆನ್ನೈ ಎರಡು ನಗರಗಳಲ್ಲೂ ಪ್ರಮುಖ ಐಟಿ ಕಂಪನಿಗಳಿವೆ. ಬೆಂಗಳೂರಿನಲ್ಲಿ ಬೇರೆ ಬೇರೆ ಕಾರಣಗಳಿಗೆ ಈಗಾಗಲೇ ಭೂಮಿಯ ಬೆಲೆ ಹೆಚ್ಚಳವಾಗಿದೆ. ಐಟಿ ಕಾರಿಡಾರ್‌ನ ನಂತರ ಇದೀಗ ಚೆನ್ನೈ-ಬೆಂಗಳೂರು ಪ್ರದೇಶದಲ್ಲಿ ಕೈಗಾರಿಕಾ ಕಾರಿಡಾರ್ (CBIC) ಅಭಿವೃದ್ಧಿ ಜೋರಾಗಿದೆ. ಆಟೋಮೊಬೈಲ್ ಉದ್ಯಮ ಚುರುಕುಪಡೆದುಕೊಂಡಿದ್ದು. ಬಜಾಜ್, ನಿಸ್ಸಾನ್ ಹಾಗೂ ಮಹೀಂದ್ರಾ ಸೇರಿದಂತೆ ಹಲವು ಕಂಪನಿಗಳು ಈ ಮಾರ್ಗದಲ್ಲಿ ತಮ್ಮ ಘಟಕಗಳನ್ನು ಸ್ಥಾಪಿಸಲು ಮುಂದಾಗಿವೆ. ಇದು ಈ ಮಾರ್ಗದಲ್ಲಿರುವ ಭೂಮಿಗೆ ಡಬಲ್ ಧಮಾಕ ಸೃಷ್ಟಿ ಮಾಡಿದೆ ಎಂದೇ ಹೇಳಲಾಗುತ್ತಿದೆ.

ಈ ಎಕ್ಸ್‌ಪ್ರೆಸ್ ವೇ ಕರ್ನಾಟಕದ ಬೆಂಗಳೂರಿನ ಹೊರ ವಲಯ, ಹೊಸಕೋಟೆ ಹಾಗೂ ಮಾಲೂರು ಮಾರ್ಗಗಳ ಮೂಲಕ ಸಾಗುತ್ತದೆ. ಈ ಭಾಗದಲ್ಲಿ ಭೂಮಿಯ ಬೆಲೆ ಇದೀಗ ಕೈಗೆಟುಕುವಂತೆ ಇದೆಯಾದರೂ ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಳವಾಗುವುದು ಫಿಕ್ಸ್‌ ಅಂತಲೇ ಹೇಳಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+