ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸುರಕ್ಷಿತ ಬೆಂಗಳೂರಿಗಾಗಿ ನಿಮ್ಮ ಸಲಹೆ ನೀಡಿ

|
Google Oneindia Kannada News

ಬೆಂಗಳೂರು, ಜುಲೈ 24 : ರಾತ್ರಿ 12 ಗಂಟೆಯ ನಂತರ ಬೆಂಗಳೂರು ಸುರಕ್ಷಿತವೇ?, ಆಟೋಕ್ಕೆ ಮೀಟರ್‌ಗಿಂತ ಹೆಚ್ಚಿಗೆ ಹಣ ಕೊಟ್ಟರೂ ನಾನು ಸುರಕ್ಷಿತವಾಗಿ ಮನೆ ಸೇರಬಹುದೇ? ಇಂತಹ ಹಲವು ಪ್ರಶ್ನೆಗಳಿವೆ. ಮಹಿಳೆಯರ ಮೇಲೆ ಆಗುತ್ತಿರುವ ದೌರ್ಜನ್ಯ ತಡೆಗಟ್ಟಲು ಬೆಂಗಳೂರು ಪೊಲೀಸರು ನೂತನ ಅಭಿಯಾನವನ್ನು ಆರಂಭಿಸಲಿದ್ದಾರೆ.

'ಗೆಟ್ ರೆಡಿ ಟು ರಿಪೋರ್ಟ್' ಹೆಸರಿನ ಈ ಅಭಿಯಾನಕ್ಕೆ ಜುಲೈ 25ರ ಶನಿವಾರ ಬೆಳಗ್ಗೆ 11 ಗಂಟೆಗೆ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಚಾಲನೆ ದೊರೆಯಲಿದೆ. ಬೆಂಗಳೂರು ಪೊಲೀಸರು ಮತ್ತು Amnesty International India ಜಂಟಿಯಾಗಿ ಈ ಅಭಿಯಾನವನ್ನು ಆರಂಭಿಸಿವೆ. [ಮಾನವೀಯತೆ ಮೆರೆದ ಪೊಲೀಸ್]

bangalore police

ಮಹಿಳೆಯರ ಮೇಲೆ ಆಗುವ ದೌರ್ಜನ್ಯವನ್ನು ತಡೆಗಟ್ಟಲು ಸಹಾಯಕವಾಗುವಂತೆ ಈ ಅಭಿಯಾನವನ್ನು ಆರಂಭಿಸಲಾಗಿದೆ. ಬೆಂಗಳೂರಿನ ಜನರು ದೌರ್ಜನ್ಯಗಳನ್ನು ತಡೆಗಟ್ಟಲು ಸಲಹೆಗಳನ್ನು ನೀಡಬಹುದು, ಅದನ್ನು ನೇರವಾಗಿ ಪೊಲೀಸರೊಂದಿಗೆ ಹಂಚಿಕೊಳ್ಳಬಹುದಾಗಿದೆ.

ಬೆಂಗಳೂರಿನ 10 ಪೊಲೀಸ್ ಠಾಣೆಯಲ್ಲಿ ಪ್ರಾಯೋಗಿಕವಾಗಿ ಈ ಅಭಿಯಾನ ಜಾರಿಗೆ ಬರುತ್ತಿದೆ. ಈ ಅಭಿಯಾನದಡಿ ಜನರು ಪೊಲೀಸ್ ಠಾಣೆಗೆ ಬಂದು ತಮ್ಮ ಸಲಹೆಗಳನ್ನು ನೀಡಬಹುದು. ತಮ್ಮ ಹಕ್ಕುಗಳ ಬಗ್ಗೆ ತಿಳಿದುಕೊಳ್ಳಬಹುದಾಗಿದೆ.

English summary
Bangalore City Police and Amnesty International India presents 'Ready to Report’ campaign to ensure safe reporting of sexual violence. A community event at Ashok Nagar Police Station on July 25, Saturday, 10 police stations identified as pilot stations. It will give an opportunity for the public to interact with police officials and learn more about what they do.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X