RCB vs CSK match: ಟಿಕೆಟ್‌ಗಾಗಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗಲಾಟೆ
ಬೆಂಗಳೂರು ಏಪ್ರಿಲ್ 17: ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯದ ಟಿಕೆಟ್‌ಗಾಗಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಭಿಮಾನಿಗಳ ನಡುವೆ ಗಲಾಟೆ ನಡೆದಿದೆ. ಸೋಮವಾರ ರಾತ್ರಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸ್ಪರ್ಧೆ ಮಾಡಲಿದೆ. ಹೀಗಾಗಿ ಬೆಂಗಳೂರಿನಲ್ಲಿ ಐಪಿಎಲ್ ಪಂದ್ಯ ವೀಕ್ಷಣೆಗೆ ಜನ ಗಲಾಟೆ ಮಾಡಿಕೊಂಡಿದ್ದಾರೆ. ಕ್ರೀಡಾಂಗಣದಲ್ಲಿ ಸ್ಥಾನಗಳು ಭರ್ತಿಯಾದ ಬೆನ್ನಲ್ಲೆ ಜನ ಟಿಕೆಟ್ ಕೌಂಟರ್‌ನ ಹೊರಗೆ ಜಗಳ ಮಾಡಿದ್ದಾರೆ.
ಶನಿವಾರ ರಾತ್ರಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ RCB ಜಯಗಳಿಸಿದ್ದು ಇಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಸ್ಪರ್ಧೆ ನಡೆಯಲಿದೆ.

ಇದಕ್ಕಾಗಿ ಭಾನುವಾರ ತೆರೆಯಬೇಕಿದ್ದ ಆಫ್‌ಲೈನ್ ಟಿಕೆಟ್ ಕೌಂಟರ್‌ನ ಹೊರಗೆ ಸರತಿ ಸಾಲಿನಲ್ಲಿ ಜನ ನಿಲ್ಲಲು ಪ್ರಾರಂಭಿಸಿದರು. ಕಳೆದ ವಾರ ಬೆಂಗಳೂರು ಮೂಲದ ಫ್ರಾಂಚೈಸಿ ಎಲ್ಲಾ ಆನ್‌ಲೈನ್ ಮತ್ತು ಆಫ್‌ಲೈನ್ ಟಿಕೆಟ್‌ಗಳು ಮಾರಾಟವಾಗಿವೆ ಎಂದು ಟ್ವೀಟ್ ಮಾಡಿತ್ತು. ಟಿಕೆಟ್ ಕೌಂಟರ್‌ನ ಹೊರಗೆ ಮಾರಾಟವಾದ ಸೂಚನಾ ಫಲಕಗಳು ಟಿಕೆಟ್ ಬುಕ್ಕಿಂಗ್ ಮಾಡಲು ಬಂದಿದ್ದ ಜನರ ಆಕ್ರೋಶಗೊಳ್ಳುವಂತೆ ಮಾಡಿದೆ.
ಶನಿವಾರ ತಡರಾತ್ರಿ ಪೊಲೀಸರು ಮಧ್ಯಪ್ರವೇಶಿಸಿ ಆಕ್ರೋಶಗೊಂಡ ಅಭಿಮಾನಿಗಳನ್ನು ಸಮಾಧಾನ ಪಡಿಸಬೇಕಾಯಿತು. ಕೌಂಟರ್ ತೆರೆಯುವ ಮೊದಲು ಟಿಕೆಟ್‌ಗಳು ಹೇಗೆ ಮಾರಾಟವಾಗಿವೆ ಎಂಬುದನ್ನು ತಿಳಿಯಲು ಜನ ಬಯಸಿದ್ದಾರೆ. ಇದರಿಂದ ಕ್ರೀಡಾಂಗಣದತ್ತ ಮುಗಿಬಿದ್ದು ಜನ ನಿರಾಸೆಯಿಂದ ಮರಳಬೇಕಾಯಿತು.

"ಟಿಕೆಟ್‌ಗಳು ಎಲ್ಲಿ ಕಣ್ಮರೆಯಾಗಿವೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಲು ವಿಫಲರಾಗಿದ್ದೇವೆ. ಗ್ಯಾಲರಿಯು 4,000-5,000 ಜನರನ್ನು ಹಿಡಿದಿಟ್ಟುಕೊಳ್ಳುತ್ತದೆ ಮತ್ತು ಅದಕ್ಕಾಗಿ ಟಿಕೆಟ್‌ಗಳನ್ನು ಯಾವಾಗಲೂ ಕ್ರೀಡಾಂಗಣದ ಬಾಕ್ಸ್ ಆಫೀಸ್‌ನಲ್ಲಿ ಮಾರಾಟ ಮಾಡಲಾಗುತ್ತದೆ. ಈ ಬಾರಿ ಏನಾಯಿತು?" ಎಂದು ಮುಂಜಾನೆ 5.30ರ ಸುಮಾರಿಗೆ ಸ್ಟೇಡಿಯಂ ತಲುಪಿದ ಕಾಲೇಜು ವಿದ್ಯಾರ್ಥಿ ಅಶ್ವಿನ್‌ಕುಮಾರ್ ಹತಾಶೆಯಿಂದ ಪ್ರಶ್ನಿಸಿದರು. ಶರ್ವಣನ್ ಮತ್ತು ಅವರ ಇಬ್ಬರು ಸ್ನೇಹಿತರು ಸೇಲಂನಿಂದ ರಾತ್ರಿಯಿಡೀ ಪ್ರಯಾಣ ಬೆಳೆಸಿ, ಭಾನುವಾರ ಮಧ್ಯಾಹ್ನದ ವೇಳೆಗೆ ಟಿಕೆಟ್ ಬಿಕ್ಇಂಗ್ ಫುಲ್ ಆಗಿದೆ ಎನ್ನುವುದನ್ನು ಕೇಳಿ ಬೇಸರ ಹೊರಹಾಕಿದ್ದಾರೆ.
"ತಲಾ (ಎಂಎಸ್ ಧೋನಿ) ಮತ್ತು ವಿರಾಟ್ ಕೊಹ್ಲಿ ಅವರನ್ನು ನೋಡಲು ಇದು ನಮಗಿರುವ ಏಕೈಕ ಅವಕಾಶವಾಗಿದೆ. ಧೋನಿ ಮುಂದಿನ ದಿನಗಳಲ್ಲಿ ಆಡುತ್ತಾರೆಯೇ ಎಂದು ನಮಗೆ ತಿಳಿದಿಲ್ಲ. ಹಾಗಾಗಿ, ನಾವು ಈ ಪಂದ್ಯವನ್ನು ವೀಕ್ಷಿಸಲು ಬಯಸಿದ್ದೇವೆ. ಟಿಕೆಟ್ ಮಾರಾಟ ಮಾಡುವ ಜನರಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಟಿಕೆಟ್‌ನ ಐದು ಪಟ್ಟು ಬೆಲೆ ಇದೆ. ಆದರೆ ನಾವು ಅವರನ್ನು ನಂಬಬಹುದೇ ಎಂದು ನಮಗೆ ಖಚಿತವಿಲ್ಲ" ಎಂದು ಶರ್ವಣನ್ ಹೇಳಿದರು.
ಇದರಿಂದ ಜನರನ್ನು ಚದುರಿಸಲು ಪೊಲೀಸರು ಸಾಕಷ್ಟು ಶ್ರಮ ಪಟ್ಟಿದ್ದಾರೆ. ಈ ವೇಳೆ ಯಾವುದೇ ಅಹಿತಕರ ಘಟನೆ ಸಂಭವಿಸಿಲ್ಲ ಮತ್ತು ಪರಿಸ್ಥಿತಿಯನ್ನು ಪರಿಹರಿಸಲಾಗಿದೆ ಎಂದು ಉಪ ಪೊಲೀಸ್ ಆಯುಕ್ತ (ಕೇಂದ್ರ) ಶ್ರೀನಿವಾಸ್ ಗೌಡ ಆರ್ ತಿಳಿಸಿದ್ದಾರೆ.












Click it and Unblock the Notifications