Rcb Controversy: ಕನ್ನಡಿಗರನ್ನು ಕೆಣಕಿ ಹಿಂದಿ ತಂದ ಆರ್‌ಸಿಬಿ: ಕನ್ನಡಿಗರ ಆಕ್ರೋಶಕ್ಕೆ ಕಾರಣವೇನು ?
Rcb controversy: ಕರ್ನಾಟಕದ ಆಟಗಾರರನ್ನು ಕೈಬಿಟ್ಟು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು - ಆರ್‌ಸಿಬಿ (Royal Challengers Bengaluru - rcb) ಫ್ರಾಂಚೈಸಿ ಇದೀಗ ಇನ್ನೊಂದು ವಿಷಯಕ್ಕೆ ಕನ್ನಡಿಗರ ಕೋಪಕ್ಕೆ ಗುರಿಯಾಗಿದೆ. ಆರ್‌ಸಿಬಿ ಮ್ಯಾನೇಜ್ಮೆಂಟ್ ಹಾಗೂ ಅದರ ನಿರ್ಧಾರಗಳ ಬಗ್ಗೆ ಈಗಾಗಲೇ ಕನ್ನಡಿಗರು ಕೊತಕೊತ ಅಂತ ಕುದಿಯುತ್ತಿದ್ದಾರೆ. ಈ ರೀತಿ ಇರುವಾಗಲೇ ಆರ್‌ಸಿಬಿ ಇನ್ನೊಂದು ಎಡವಟ್ಟು ಮಾಡಿಕೊಂಡಿದೆ. 17 ವರ್ಷಗಳಿಂದ ಆರ್‌ಸಿಬಿ ಪುರುಷರ ತಂಡದ ಕಪ್ ಗೆದ್ದಿಲ್ಲ. ಆದರೂ ಕನ್ನಡಿಗರು ಹಾಗೂ ಆರ್‌ಸಿಬಿ ಅಭಿಮಾನಿಗಳು ಆರ್‌ಸಿಬಿಯನ್ನು ಬೆಂಬಲಿಸುವುದರಿಂದ ಹಿಂದೆ ಸರಿದಿಲ್ಲ. ಆದರೆ, ಕನ್ನಡಿಗರನ್ನು ಆರ್‌ಸಿಬಿ ಲೆಕ್ಕಕ್ಕೆ ತೆಗೆದುಕೊಳ್ಳದೆ ನಿರ್ಧಾರ ತೆಗೆದುಕೊಳ್ಳುತ್ತಿದೆಯೇ ಎನ್ನುವ ಅನುಮಾನ ಎದುರಾಗಿದೆ.
ಆರ್‌ಸಿಬಿಯು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಹಿಂದಿ ಪೇಜ್ ತೆಗೆದಿದ್ದು, ಇದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಆರ್‌ಸಿಬಿಯ ಹಿಂದಿ ಪೇಜ್ ಪ್ರಾರಂಭಕ್ಕೆ ಕನ್ನಡಿಗರು ಕಿಡಿಕಾರಿದ್ದಾರೆ. ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಟಿ.ಎ ನಾರಾಯಣಗೌಡ ಅವರು ಆರ್‌ಸಿಬಿ ಅವರು ಬೆಂಗಳೂರು ಹೆಸರನ್ನು ಕೈಬಿಡಬೇಕು ಇಲ್ಲವೇ ಕರ್ನಾಟಕ ಬಿಟ್ಟು ತೊಲಗಬೇಕು ಎಂದು ಕಿಡಿಕಾರಿದ್ದಾರೆ. ಇನ್ನು ಈ ವಿಷಯವಾಗಿ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲೂ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಕನ್ನಡಿಗರನ್ನು ತಂಡಕ್ಕೆ ಆಯ್ಕೆ ಮಾಡಲ್ಲ, ಒಳ್ಳೆಯ ಆಟಗಾರರಿಗೆ ಬಿಡ್ ಮಾಡಲ್ಲ. ಆದರೆ, ಕನ್ನಡಿಗರನ್ನು ಕೆರಳಿಸುವ ಕೆಲಸವನ್ನು ಮಾತ್ರ ಆರ್‌ಸಿಬಿ ಮ್ಯಾನೇಜ್ಮೆಂಟ್ ವ್ಯವಸ್ಥಿತವಾಗಿ ಮಾಡುತ್ತದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಕನ್ನಡಿಗರು ಆಕ್ರೋಶ ಹೊರ ಹಾಕಿದ್ದಾರೆ.

ಆರ್‌ಸಿಬಿಯು ಯಾವ ಕಾರಣಕ್ಕೆ ಹಿಂದಿ ಪೇಜ್ ತೆಗೆದಿದೆ ಎನ್ನುವುದನ್ನು ಸ್ಪಷ್ಟಪಡಿಸಬೇಕು. ಕನ್ನಡಿಗರ ಮೇಲೆ ಹಿಂದಿ ಹೇರಿಕೆ ಮಾಡುವುದೇ ಇವರ ಉದ್ದೇಶವಾಗಿದ್ದರೆ, ಕರ್ನಾಟಕ ಬಿಟ್ಟು ತೊಲಗಬೇಕು ಎಂದು ನಾರಾಯಣಗೌಡ ಅವರು ಗುಡುಗಿದ್ದಾರೆ. ಹಿಂದಿ ಗುಲಾಮಗಿರಿಯನ್ನು ಕನ್ನಡಿಗರ ಮೇಲೆ ಹೇರುವುದು ನಮಗೆ ಬೇಕಾಗಿಲ್ಲ.
ಹಿಂದಿಯಲ್ಲಿ ಮಾತ್ರ ಯಾಕೆ: ಆರ್‌ಸಿಬಿ ತಂಡಕ್ಕೆ ಬೆಂಗಳೂರಿನಲ್ಲಿ ಮಾತ್ರವಲ್ಲ ದೇಶದಾದ್ಯಂತ ಅಭಿಮಾನಿಗಳು ಇದ್ದಾರೆ. ದೇಶದಲ್ಲಿ ಕೋಟ್ಯಾಂತರ ಜನ ಆರ್‌ಸಿಬಿ ಅಭಿಮಾನಿಗಳು ಇದ್ದಾರೆ. ಇನ್ನು ಐಪಿಎಲ್‌ನ ಮೂರನೇ ಶ್ರೀಮಂತ ಪಕ್ಷವಾಗಿ ಆರ್‌ಸಿಬಿ ಇದೆ. ಆದರೆ, ಇದೀಗ ಕೇಲವ ಹಿಂದಿಯಲ್ಲಿ ಮಾತ್ರ ಪೇಜ್ ಯಾಕೆ ಎಂದು ಕನ್ನಡಿಗರು ಕೇಳಿದ್ದಾರೆ. ದೇಶದ ವಿವಿಧ ಭಾಗದಲ್ಲಿ ಆರ್‌ಸಿಬಿ ಅಭಿಮಾನಿಗಳು ಇದ್ದಾರೆ. ಅವರ ಅನುಕೂಲಕ್ಕಾಗಿ ಈ ರೀತಿ ಪೇಜ್ ತೆಗೆಯಲಾಗಿದೆ ಎನ್ನುವುದೇ ಆರ್‌ಸಿಬಿಯ ವಾದವಾಗಿದ್ದರೆ, ಇನ್ನುಳಿದ ಭಾರತದ ಭಾಷೆಗಳಲ್ಲೂ ಪೇಜ್ ಪ್ರಾರಂಭಿಸಬೇಕಿತ್ತು ಎನ್ನುವ ಆಗ್ರಹ ವ್ಯಕ್ತವಾಗಿದೆ.
ನಿಮಗೆ ಬೆಂಬಲ ಕೊಡ್ತಿರೋದು
— ರೂಪೇಶ್ ರಾಜಣ್ಣ(RUPESH RAJANNA) (@rajanna_rupesh) November 27, 2024
ಬೆಂಗಳೂರು ಅನ್ನೋ ಹೆಸರಿಗೆ.
ನಮ್ಮ ತಂಡ ಅಂತ ಪ್ರಾಣ ಕೊಟ್ಟು ಪ್ರೀತಿಸೋ ಕನ್ನಡಿಗರ ಪ್ರೀತಿಯನ್ನು ದುರುಪಯೋಗ ಪಡಿಸಿಕೊಳ್ಳಬೇಡಿ.
ನಿಮ್ಮ ಐಪಿಎಲ್ ಕಪ್,ಆರ್ ಸಿ ಬಿ ಗಿಂತಲೂ ನಮಗೆ ನಮ್ಮ ಕನ್ನಡ,ಕನ್ನಡ ನೆಲದ ಸ್ವಾಭಿಮಾನವೆ ಹೆಚ್ಚು.
Remove Hindi page of rcb immediately
ನಮಗೆ ಅದು ಬೇಕಾಗಿಲ್ಲ.@RCBTweets pic.twitter.com/MsMykfnhzm
ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ಅವರು ಸಹ ಈ ವಿಷಯಕ್ಕೆ ಕಿಡಿಕಾರಿದ್ದಾರೆ. ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ನಿಮಗೆ ಬೆಂಬಲ ಕೊಡ್ತಿರೋದು , ಬೆಂಗಳೂರು ಅನ್ನೋ ಹೆಸರಿಗೆ. ಈ ರೀತಿ ನಮ್ಮ ತಂಡ ಅಂತ ಪ್ರಾಣ ಕೊಟ್ಟು ಪ್ರೀತಿಸೋ ಕನ್ನಡಿಗರ ಪ್ರೀತಿಯನ್ನು ದುರುಪಯೋಗ ಪಡಿಸಿಕೊಳ್ಳಬೇಡಿ ಎಂದು ಹೇಳಿದ್ದಾರೆ. ಅಲ್ಲದೇ ನಿಮ್ಮ ಐಪಿಎಲ್ ಕಪ್,ಆರ್‌ಸಿಬಿ ಗಿಂತಲೂ ನಮಗೆ ನಮ್ಮ ಕನ್ನಡ,ಕನ್ನಡ ನೆಲದ ಸ್ವಾಭಿಮಾನವೆ ಹೆಚ್ಚು ಎಂದು ಹೇಳಿದ್ದಾರೆ. ಅಲ್ಲದೇ Remove Hindi page of rcb immediately ನಮಗೆ ಅದು ಬೇಕಾಗಿಲ್ಲ ಎಂದು ಹೇಳಿದ್ದಾರೆ.












Click it and Unblock the Notifications