• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರವಿಶಂಕರ್ ಗುರೂಜಿ ಆಶ್ರಮ: ಬಿಬಿಎಂಪಿ ವಿರುದ್ಧ ಕೊವಿಡ್ ಕೇರ್ ಸೆಂಟರ್ ಸಿಬ್ಬಂದಿ ಪ್ರತಿಭಟನೆ

|

ಬೆಂಗಳೂರು, ಸೆಪ್ಟೆಂಬರ್ 7: ರವಿ ಶಂಕರ್ ಗುರೂಜಿ ಆಶ್ರಮದಲ್ಲಿ ಬಿಬಿಎಂಪಿ ನಡೆಸುತ್ತಿರುವ ಕೊವಿಡ್ ಆರೈಕೆ ಕೇಂದ್ರದ ಸಿಬ್ಬಂದಿ ಪ್ರತಿಭಟನೆ ನಡೆಸಿದ್ದಾರೆ.

   Sputnik V Vaccine ಎಲ್ಲಾ ಪ್ರಯೋಗಗಳಲ್ಲೂ ಯಶಸ್ಸು ,Russiaದ ಮತ್ತೊಂದು ಮೈಲುಗಲ್ಲು | Oneindia Kannada

   ಜಾಗತಿಕ ವ್ಯಾಕ್ಸಿನ್ ವಾರ್: ಭಾರತವೇ ಯುದ್ಧ ಕೇಂದ್ರ..!

   ಕೊವಿಡ್ ಕೇರ್ ಸೆಂಟರ್‌ನ ಸಿಬ್ಬಂದಿಗೆ ವೇತನ ನೀಡದ ಹಿನ್ನೆಲೆಯಲ್ಲಿ ರವಿಶಂಕರ್ ಗುರೂಜಿ ಆಶ್ರಮದ ಕೊವಿಡ್ ಕೇರ್ ಸೆಂಟರ್ ಸಿಬ್ಬಂದಿ ಬಿಬಿಎಂಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

   ಬೆಂಗಳೂರಿನ ಕನಕಪುರ ರಸ್ತೆಯಲ್ಲಿರುವ ರವಿಶಂಕರ್ ಗುರೂಜಿ ಆಶ್ರಮದಲ್ಲಿ ಬಿಬಿಎಂಪಿಯು ಕೊವಿಡ್ ಕೇರ್ ಕೇಂದ್ರವನ್ನು ತೆರೆದಿದೆ. ಅಲ್ಲಿ 140 ಮಂದಿ ಕೊರೊನಾ ಸೋಂಕಿತರನ್ನು ಇರಿಸಲಾಗಿದೆ.

   ಅವರಿಗೆ ಸರಿಯಾಗಿ ಊಟ ಕೊಡುತ್ತಿಲ್ಲ. ಕುಡಿಯಲು ನೀರಿಲ್ಲದೆ ಪರದಾಡುತ್ತಿದ್ದಾರೆ. ಒನ್‌ಇಂಡಿಯಾ ಜೊತೆಗೆ ಮಾತನಾಡಿದ ಅಲ್ಲಿರುವ ಕೋವಿಡ್ ಸೋಂಕಿತರೊಬ್ಬರು ಹೇಳುವ ಪ್ರಕಾರ ಪಾಸಿಟಿವ್ ಬಂದವರನ್ನು ಅಲ್ಲಿರಿಸಿ ಬಿಬಿಎಂಪಿ ಚಿಕಿತ್ಸೆ ಕೊಡಿಸುತ್ತಿದೆ. ಒಟ್ಟು ಸುಮಾರು 8 ಜನ ಹೌಸ್‌ಕೀಪಿಂಗ್ ಸಿಬ್ಬಂದಿ ಇದ್ದಾರೆ.

   ಅವರಿಗೆ ಕಳೆದ ಎರಡು ತಿಂಗಳಿನಿಂದ ಸಂಬಳ ಆಗಿಲ್ಲ. ಹೀಗಾಗಿ ಬಿಬಿಎಂಪಿ ಕಳುಹಿಸುವ ಊಟವನ್ನು ಅವರು ಸೋಂಕಿತರಿಗೆ ಕೊಡುತ್ತಿಲ್ಲ.

   ಅಲ್ಲಿ ಕೊರೊನಾ ಸೋಂಕಿತರಿಗಾಗಿ ರವಿಶಂಕರ್ ಆಶ್ರಮದ ಕಟ್ಟಡವನ್ನು ನೀಡಿದೆ. ಸೋಂಕಿತರನ್ನು ನೋಡಿಕೊಳ್ಳುವ ಜವಾಬ್ದಾರಿ ಬಿಬಿಎಂಪಿಯದು, ಅವರು ಹೌಸ್‌ಕಿಪಿಂಗ್‌ಗೆ ಸಂಬಳ ಕೊಟ್ಟಿಲ್ಲ. ಹೀಗಾಗಿ ಸಮಸ್ಯೆ ಎದುರಾಗಿದೆ.

   ಬಿಬಿಎಂಪಿ ಊಟ ಕಳುಹಿಸಿದೆ., ಆದರೆ ಅದನ್ನು ಪಿಪಿಇ ಕಿಟ್ ಹಾಕಿಕೊಂಡು ಅವರಿಗೆ ಊಟವನ್ನು ಕೊಡಲು ಸಿಬ್ಬಂದಿ ಇಲ್ಲ.ಜೊತೆಗೆ ಸಿಬ್ಬಂದಿಗೆ ವೇತನ ನೀಡದ ಹಿನ್ನೆಲೆಯಲ್ಲಿ ಪ್ರತಿಭಟನೆ ಆರಂಭವಾಗಿದೆ.

   ಮನೆಗೆ ಹೋಗಿ ಗೃಹ ಬಂಧನಕ್ಕೆ ಒಳಗಾಗುತ್ತೇವೆ ಎಂದರೂ ಕೂಡ ಬಿಬಿಎಂಪಿ ಅನುವು ಮಾಡಿಕೊಡುತ್ತಿಲ್ಲ ಎಂದು ಕೊರೊನಾ ಸೋಂಕಿತರೊಬ್ಬರು ತಮ್ಮ ಅಳಲು ತೋಡಿಕೊಂಡಿದ್ದಾರೆ. ಸೋಂಕಿತರನ್ನು ನೋಡಿಕೊಳ್ಳುವ ಸಿಬ್ಬಂದಿಗೆ 2 ತಿಂಗಳಿನಿಂದ ವೇತನ ನೀಡಿಲ್ಲ.

   English summary
   Ravishankar Guruji Ashram BBMP running Covid care centre Staff And Corona Infected People Protest Against BBMP In Bengaluru.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X