Rapido Viral: ಯುವತಿನ ಕೂರಿಸಿಕೊಳ್ಳದೇ 10 ಕಿ.ಮೀ ಬೈಕ್ ಓಡಿಸಿದ ಚಾಲಕ: ಗಾಳಿಪಟ ಸಿನಿಮಾ ನೆನಪಿಸಿಕೊಂಡ ಕನ್ನಡಿಗರು, ಆಗಿದ್ದೇನು

ರ‍್ಯಾಪಿಡೋ (Rapido) ಬೈಕ್ ಚಾಲಕನೊಬ್ಬ ಯುವತಿಯೊಂದಿಗೆ ರೈಡ್‌ನಲ್ಲಿ ನಡೆದು೧ಕೊಂಡ ವಿಧಾನವು ಭಾರೀ ವೈರಲ್ ಆಗಿದೆ. ಆದರೆ ರ‍್ಯಾಪಿಡೋ ಯುವಕರ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿಲ್ಲ. ಆದರೆ, ಯುವತಿಯನ್ನು ಬೈಕ್‌ನಲ್ಲಿ ಕೂರಿಸಿಕೊಂಡಲೇ ಇಲ್ಲ, ಒಟಿಪಿ ತೆಗೆದುಕೊಂಡು ಹೆಲ್ಮೆಟ್ ಕೊಟ್ಟು 10 ಕಿ.ಮೀ ದೂರ ಹೋಗಿದ್ದಾರೆ. ಈ ವಿಷಯವು ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ರ‍್ಯಾಪಿಡೋ ಬೈಕ್ ಡ್ರೈವರ್ ಬಂದರು, ನಾನು ಅವರಿಗೆ ನನ್ನ ಒಟಿಪಿ ಕೊಟ್ಟೆ, ಅವರು ಕೊಟ್ಟ ಹೆಲ್ಮೆಟ್ ಹಾಕಿಕೊಂಡೆ ಮತ್ತು ಮುಂದೆ ನನಗೆ ತಿಳಿದಿರುವಂತೆ, ಅವರು ಪ್ರಯಾಣವನ್ನು ಪ್ರಾರಂಭಿಸಿದನು. ನನ್ನನ್ನು ಬಿಟ್ಟು ಬೈಕ್ ಚಾಲಕ ಕಳೆದ 10 ನಿಮಿಷಗಳಿಂದ ಗಾಡಿ ಓಡಿಸುತ್ತಿದ್ದಾರೆ. ಅವನ ಹಿಂದೆ ಯಾರೂ ಇಲ್ಲ ಎಂದು ತಿಳಿಯದೆ ಚಾಲನೆ ಮಾಡುತ್ತಿದ್ದಾನೆ ಅಂತ retired sports fan (@kreepkroop) ಎನ್ನುವವರು ತಮ್ಮ ಸೋಶಿಯಲ್ ಮೀಡಿಯಾ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಈ ಬರಹವು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಈ ಪೋಸ್ಟ್‌ ನೋಡಿ ಕನ್ನಡಿಗರು ಗಾಳಿಪಟ ಸಿನಿಮಾ ನೆನಪಿಸಿಕೊಂಡಿದ್ದಾರೆ.

Rapido Viral Driver Rides 10 Km Without Passenger Reminding Kannadigas of Galipata What Happened

ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾದ ಪೋಸ್ಟ್‌

ಇನ್ನು ಈ ಪೋಸ್ಟ್‌ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸ್ವಾರಸ್ಯಕರ ಚರ್ಚೆಗೆ ಕಾರಣವಾಗಿದೆ. ನನಗೂ ಇದೇ ರೀತಿ ಅನುಭವ ಆಯಿತು. ಗಾಡಿ ಪಂಕ್ಚರ್ ಆಗಿದೆಯೇ ಅಂತ ಪರಿಶೀಲಿಸಲು ಕೆಳಗೆ ಇಳಿದ ನಂತರ ಅವನು ಕಾರನ್ನು ಚಲಾಯಿಸಿಕೊಂಡು ಹೋದರು. ಆದರೆ ಉಬರ್‌ಗೆ ದೂರು ನೀಡಿದ ನಂತರ ಅವರು ಹಿಂತಿರುಗಿ ಬಂದರು. ಕಾರು ಚಲಿಸುವಾಗ ಸಸ್ಪೆನ್ಷನ್ ಕೆಳಗೆ ಕುಗ್ಗಿದ್ದನ್ನು ನೋಡಿ, ನಾನು ಕಾರಿನೊಳಗೆ ಕುಳಿತಿದ್ದೇನೆ ಎಂದು ಅವರು ಭಾವಿಸಿದ್ದರು. ಹಾಗಾಗಿ ಅವರು ಕಾರನ್ನು ಓಡಿಸಿದರು. ಅವರು ಒಳ್ಳೆಯ ವ್ಯಕ್ತಿ, ಬಳಿಕ ನನ್ನ ಬಳಿ ಕ್ಷಮೆ ಕೇಳಿದರು ಎಂದು ಮತ್ತೊಬ್ಬ ಗ್ರಾಹಕರು ತಮಗೆ ಆದ ಅನುಭವ ಹಂಚಿಕೊಂಡಿದ್ದಾರೆ. ಇನ್ನೂ ಕೆಲವರು ಇದೊಂದು ಸುಳ್ಳು ಕಥೆ ರ‍್ಯಾಪಿಡೋ ಕಂಪನಿಯ ಸೇವೆಗಳನ್ನು ಹಾಳು ಮಾಡಲು ಮತ್ತು ಪ್ರೊಫೈಲ್‌ನ ಗಮನ ಸೆಳೆಯಲು ಅಂತಲೂ ಕೆಲವರು ಹೇಳಿದ್ದಾರೆ.

ಅವನಿಗೆ ತನ್ನ ತಪ್ಪಿನ ಅರಿವಾಗಿರಬೇಕು ಆದರೆ ಹಿಂತಿರುಗಿ ಬರಲು ತುಂಬಾ ಮುಜುಗರವಾಗುತ್ತದೆ, ಆದ್ದರಿಂದ ಅವನು ಪರ್ವತಗಳಿಗೆ ಹೋಗಿ ಸನ್ಯಾಸಿಯಾಗಿ ಜೀವನ ನಡೆಸಲು ನಿರ್ಧರಿಸಿರಬೇಕು ಎಂದೂ ಕೆಲವರು ವ್ಯಂಗ್ಯವಾಡಿದ್ದಾರೆ. ಆದರ್ಶ ಎನ್ನುವವರು ನನಗೆ ಉಬರ್ ಬೈಕ್‌ನಲ್ಲಿ ಇದೇ ರೀತಿ ಅನುಭವ ಆಯ್ತು. ಅವನ ಹೆಲ್ಮೆಟ್ ಅನ್ನು ಹೇಗೆ ಹಿಂದಿರುಗಿಸುವುದು ಎಂದು ಯೋಚಿಸುತ್ತಿದ್ದೆ.. ಹಾಗಾಗಿ ನಾನು ಹತ್ತಿರದ ಅಂಗಡಿಗೆ ಹೋಗಿ ಬೇರೆ ಬೈಕ್ ಬುಕ್ ಮಾಡಿದೆ. ಇದು ನನಗೆ ಮಾತ್ರ ಆಯ್ತು ಅಂತ ಅಂದುಕೊಂಡೆ ಅಂತ ಹೇಳಿದ್ದಾರೆ.

ಇನ್ನೂ ಕೆಲವರು ಈ ರೀತಿ ಆಗುವುದು ಸಹಜ ಅಂತಲೂ ಹೇಳಿದ್ದಾರೆ. ನೆಟ್ಟಿಗರೊಬ್ಬರು ನನ್ನ ಅಪ್ಪ ಒಮ್ಮೆ ನನ್ನ ಅಮ್ಮನೊಂದಿಗೆ ಹೀಗೆ ಮಾಡಿದ್ದರು. ಅವರು ಕಾರು ಚಲಾಯಿಸುವಾಗ ಮಾತನಾಡುತ್ತಲೇ ಇದ್ದರು ಮತ್ತು ಸ್ವಲ್ಪ ಸಮಯದ ನಂತರ ಅವಳು ಉತ್ತರಿಸದ ಕಾರಣ ಕೋಪಗೊಂಡರು. ಆಗ ಅವರ ಗಮನಕ್ಕೆ ಬಂದಿದೆ ಅಮ್ಮ ಕಾರಿನಲ್ಲಿ ಇಲ್ಲ ಅಂತ! ಅವರು ವಾಪಸ್ ಹೋಗಿ ನೋಡಿದಾಗ ಅಮ್ಮ ಬಿದ್ದು ಬಿದ್ದು ನಗುತ್ತಿದ್ದರಂತೆ ಅಂತ ನೆಟ್ಟಿಗರೊಬ್ಬರು ಹೇಳಿಕೊಂಡಿದ್ದಾರೆ.

https://kannada.oneindia.com/news/india/pm-kisan-24th-instalment-when-will-farmers-get-2-000-check-eligibility-payment-date-e-kyc-requir-469081.html

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+