Get Updates
Get notified of breaking news, exclusive insights, and must-see stories!

ಕಿರುಕುಳದಿಂದ ರಕ್ಷಣೆ ನೀಡುವಂತೆ ಬೈಕ್ ಟ್ಯಾಕ್ಸಿ ಚಾಲಕರ ಪ್ರತಿಭಟನೆ

ಬೆಂಗಳೂರು, ಮಾರ್ಚ್‌ 27: ಬೆಂಗಳೂರು ನಗರದಲ್ಲಿ ಆಟೋ ರಿಕ್ಷಾ ಚಾಲಕರಿಂದ ತಮಗೆ ಆಗುತ್ತಿರುವ ಕಿರುಕುಳದ ವಿರುದ್ಧ ಉಬರ್ ಮತ್ತು ರ‍್ಯಾಪಿಡೊದ 1000ಕ್ಕೂ ಹೆಚ್ಚು ಬೈಕ್ ಟ್ಯಾಕ್ಸಿ ಚಾಲಕರು ಸೋಮವಾರ ಫ್ರೀಡಂ ಪಾರ್ಕ್‌ನಲ್ಲಿ ಜಮಾಯಿಸಿ ಪ್ರತಿಭಟನೆ ನಡೆಸಿದರು.

ಬೈಕ್ ಟ್ಯಾಕ್ಸಿ ಅಸೋಸಿಯೇಷನ್‌ನಿಂದ ಆಯೋಜಿಸಲಾಗಿದ್ದ ಮುಷ್ಕರವು ಬೆಳಿಗ್ಗೆ 9 ಗಂಟೆಗೆ ಪ್ರಾರಂಭವಾಯಿತು. ಪ್ರತಿಭಟನೆಯಲ್ಲಿ ಉಬರ್ ಮತ್ತು ರ‍್ಯಾಪಿಡೊ ಬೈಕ್ ಟ್ಯಾಕ್ಸಿ ಚಾಲಕರು ಸುರಕ್ಷಿತ ಕೆಲಸದ ವಾತಾವರಣ ಮತ್ತು ತಮಗೆ ಆಗುತ್ತಿರುವ ಕಿರುಕುಳದಿಂದ ರಕ್ಷಣೆ ನೀಡಬೇಕು. ನಮಗೆ ಯಾವುದೇ ಅಪಾಯವಿಲ್ಲದಂತೆ ತಮ್ಮ ಜೀವನೋಪಾಯ ನಡೆಸಲು ಅನುವು ಮಾಡಿಕೊಡಬೇಕೆಂದು ಮನವಿ ಮಾಡಿದರು.

Rapido and Uber bike taxi drivers Protest in Bengaluru

ಬೈಕ್ ಟ್ಯಾಕ್ಸಿ ಚಾಲಕರು ಫಲಕಗಳನ್ನು ಹಿಡಿದು ಒಗ್ಗಟ್ಟಿನಿಂದ ಘೋಷಣೆಗಳನ್ನು ಕೂಗಿದರು. ಬೈಕ್ ಟ್ಯಾಕ್ಸಿಗಳನ್ನು ಉಳಿಸಿ, ನಮ್ಮ ಜೀವನೋಪಾಯವನ್ನು ಉಳಿಸಿ, ನಾಮಗೆ ಆಗುತ್ತಿರುವ ಕಿರುಕುಳವನ್ನು ತಪ್ಪಿಸಿ, ನಮ್ಮ ಜೀವನೋಪಾಯವನ್ನು ಪಡೆಯುವ ಹಕ್ಕು ನಮಗಿದೆ, ನಮಗೆ ರಕ್ಷಣೆ ಬೇಕು ಮುಂತಾದ ಸಂದೇಶಗಳನ್ನು ಫಲಕಗಳಲ್ಲಿ ಪ್ರದರ್ಶಿಸಲಾಯಿತು.

ಬೈಕ್ ಟ್ಯಾಕ್ಸಿ ಚಾಲಕರಿಗೆ ಕಿರುಕುಳ ನೀಡುವ ದುರುಳ ಆಟೋರಿಕ್ಷಾ ಚಾಲಕರ ವಿರುದ್ಧ ಸರಕಾರ ಕ್ರಮ ಕೈಗೊಳ್ಳಬೇಕು. ನಾವು ಕಾನೂನಿನ ಮಿತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದೇವೆ. ಆದರೆ ನಮ್ಮ ಮೇಲೆ ಕನಿಕರವಿಲ್ಲದೆ ಆಟೋ ಚಾಲಕರಿಂದ ಹಲ್ಲೆ ಮಾಡಲಾಗುತ್ತಿದೆ. ಏನಾಗುತ್ತಿದೆ ಎಂದು ಸರ್ಕಾರಕ್ಕೆ ಕಾಣಿಸುತ್ತಿಲ್ಲವೇ? ನಮ್ಮ ಜೀವನೋಪಾಯಕ್ಕಾಗಿ ನಮಗೆ ಹಕ್ಕಿಲ್ಲವೇ? ಎಂದು ಎಂದು ಬೈಕ್ ಟ್ಯಾಕ್ಸಿ ಚಾಲಕ ಹರೀಶ್ ಕುಮಾರ್ ಪ್ರಶ್ನಿಸಿದರು.

ಇತರ ಚಾಲಕರು ಧ್ವನಿಗೂಡಿಸಿ, "ಸಾರ್ವಜನಿಕರು ಅವರು ಯಾವುದರ ಮೇಲೆ ಸವಾರಿ ಮಾಡಬೇಕೆಂದು ಆಯ್ಕೆ ಮಾಡಿಕೊಳ್ಳಲಿ. ನಾವು ಆಟೋ ಚಾಲಕರ ಆಕ್ರೋಶವನ್ನು ಏಕೆ ಎದುರಿಸಬೇಕು ಎಂದು ಕೇಳಿದರು. ಮಧ್ಯಾಹ್ನ 3ರವರೆಗೆ ಮುಷ್ಕರ ನಡೆಯಿತು. ಬಳಿಕ ಬೈಕ್ ಟ್ಯಾಕ್ಸಿ ಅಸೋಸಿಯೇಷನ್ ​​ಸದಸ್ಯರು ಪೊಲೀಸ್ ಆಯುಕ್ತರಿಗೆ ಮನವಿ ಪತ್ರ ಸಲ್ಲಿಸಲಿದರು.

Rapido and Uber bike taxi drivers Protest in Bengaluru

ಕರ್ನಾಟಕ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಕರ್ನಾಟಕ ರಾಜ್ಯ ಸರ್ಕಾರಕ್ಕೆ ಪ್ರತಿಭಟನೆಗಳ ಬಿಸಿ ಹೆಚ್ಚಾಗಿ ತಟ್ಟುತ್ತಿದೆ. ಮೀಸಲಾತಿ, ವೇತನ ಪರಿಷ್ಕರಣೆ ವಿಚಾರದಲ್ಲಿ ಪ್ರತಿಭಟನೆ ಕಾವು ತಟ್ಟಿಸಿಕೊಂಡಿದ್ದ ಸರ್ಕಾರ ಒಂದು ಹಂತದಲ್ಲಿ ಬೇಡಿಕೆ ಈಡೇರಿಸಿ ಜನರನ್ನು, ನೌಕರರನ್ನು ಮನವೋಲಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ ಈಗ ಬೈಕ್ ಟ್ಯಾಕ್ಸಿ ಚಾಲಕರಿಂದ ಪ್ರತಿಭಟನೆ ನಡೆದಿದೆ. ಬೆಂಗಳೂರಿನಲ್ಲಿ ಆಟೋ ಚಾಲಕರ ಹಾಗೂ ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಚಾಲಕರ ನಡುವಿನ ಹಗ್ಗಜಗ್ಗಾಟ ಸರ್ಕಾರದ ತಲೆಬಿಸಿಯನ್ನು ಮತ್ತೆ ಹೆಚ್ಚಿಸಿದೆ.

ಒಂದೆಡೆ ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಬ್ಯಾನ್ ಮಾಡಬೇಕು ಎಂದು ಬೆಂಗಳೂರು ಆಟೋ ಚಾಲಕರು ಸರ್ಕಾರವನ್ನು ಒತ್ತಾಯಿಸುತ್ತಿದ್ದರೆ, ಇನ್ನೊಂದೆಡೆ, ಆಟೋ ಚಾಲಕರ ದೌರ್ಜನ್ಯ ಖಂಡಿಸಿ ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಚಾಲಕರು ಧರಣಿ ನಡೆಸುವ ಮೂಲಕ ಆಟೋ ಚಾಲಕರಿಗೆ ರಕ್ಷಣೆ ಒದಗಿಸುವಂತೆ ಮನವಿ ಮಾಡಿದ್ದಾರೆ. ಬೈಕ್ ಟ್ಯಾಕ್ಸಿ ಚಾಲಕರ ಏಕೈಕ ಸಂಘಟನೆ ಬೈಕ್ ಟ್ಯಾಕ್ಸಿ ಅಸೋಸಿಯೇಶನ್ ಈ ಪ್ರತಿಭಟನೆ ನಡೆಸಿದೆ. ತಮ್ಮ ಸದಸ್ಯರ ಮೇಲೆ ಆಗುತ್ತಿರುವ ನಿರಂತರ ದೌರ್ಜನ್ಯ ಪ್ರಶ್ನಿಸಿ ಪ್ರತಿಭಟನೆ ನಡೆಸಿದೆ. ಈ ಹಿಂದೆ ಹೆಚ್​ಎಸ್​ಆರ್​ ಲೇಔಟ್​ನಲ್ಲಿ ಬೈಕ್ ಚಾಲಕನ ಹೆಲ್ಮೆಟ್ ಅನ್ನು ಆಟೋ ಡ್ರೈವರ್ ಒಡೆದು ಹಾಕಿದ್ದ ಘಟನೆ ನಡೆದಿತ್ತು. ನಂತರ ಬೈಕ್​​ ಟ್ಯಾಕ್ಸಿ ರೈಡರ್ ವಾಣಿಜ್ಯ ಉದ್ದೇಶಗಳಿಗಾಗಿ ತನ್ನ ವಾಹನವನ್ನು ಬಳಸಿದ್ದಕ್ಕಾಗಿ ಆತನನ್ನು ಅವಾಚ್ಯವಾಗಿ ನಿಂದಿಸಿದಲ್ಲದೇ, ಬೈಕ್​ ಸುಡುವುದಾಗಿ ಬೆದರಿಕೆ ಹಾಕಿದ್ದ ವಿಡಿಯೋ ಕೂಡ ವೈರಲ್ ಆಗಿತ್ತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+