Ranya Rao: ಬಂಧಿತ ನಟಿಯ ₹138 ಹೂಡಿಕೆ ಕಂಪನಿಗೆ ಸರ್ಕಾರದಿಂದ 12 ಎಕರೆ ಭೂಮಿ: KIADB
ಬೆಂಗಳೂರು, ಮಾರ್ಚ್ 10: ಕನ್ನಡದಲ್ಲಿ ಕಿಚ್ಚ ಸುದೀಪ್ ಜೊತೆಗೆ ನಟಿಸಿದ್ದ ನಟಿ ರನ್ಯಾ ರಾವ್ ಚಿನ್ನದ ಕಳ್ಳಸಾಗಣೆ ಪ್ರಕರಣದಲ್ಲಿ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. ಈ ನಟಿಯ ₹138 ಹೂಡಿಕೆ ಕಂಪನಿಗೆ ಕಂಪನಿಗೆ ರಾಜ್ಯ ಸರ್ಕಾರ ವರ್ಷಗಳ ಹಿಂದೆ 12 ಎಕರೆ ಭೂಮಿ ಮಂಜೂರು ಮಾಡಿತ್ತು. ಈ ಬಗ್ಗೆ ಇದೀಗ ಒಂದಷ್ಟು ಗಂಭೀರ ಚರ್ಚೆಗಳು ಕೇಳಿ ಬಂದ ಬೆನ್ನಲ್ಲೆ ಕರ್ನಾಟಕ ರಾಜ್ಯ ಕೈಗಾರಿಕೆ ಪ್ರದೇಶಾಭಿವೃದ್ಧಿ ಮಂಡಳಿ (KIADB) ಸ್ಪಷ್ಟನೆ ನೀಡಿದೆ.
ಅಕ್ರಮವಾಗಿ ಚಿನ್ನ ಸಾಗಾಣೆ ಆರೋಪ ಬಂಧಿತೆಯಾಗಿರುವ ಕನ್ನಡ ಚಿತ್ರನಟಿ ರನ್ಯಾ ರಾವ್ ಅವರ ಮೆಸರ್ಸ್ ಕ್ಸಿರೋದ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಗೆ 12 ಎಕರೆ ಭೂಮಿ 2023ರ ಜನವರಿ 2ರಂದು ಮಂಜೂರಾಗಿದೆ. ಈ ಕುರಿತು ಕರ್ನಾಟಕ ರಾಜ್ಯ ಕೈಗಾರಿಕೆ ಪ್ರದೇಶಾಭಿವೃದ್ಧಿ ಮಂಡಳಿ (KIADB) ಸಿಇಒ ಡಾ. ಮಹೇಶ್ ಭಾನುವಾರ ಮಾಹಿತಿ ನೀಡಿದ್ದಾರೆ.

ಹಿಂದಿನ ಸರ್ಕಾರ ಅಧಿಕಾರದಲ್ಲಿ ಇದ್ದಾಗ, 2023ರ ಜನವರಿ 2ರಂದು ನಡೆದ 137ನೇ ರಾಜ್ಯ ಮಟ್ಟದ ಸಿಂಗಲ್ ವಿಂಡೋ ಕ್ಲಿಯರೆನ್ಸ್ ಕಮಿಟಿ (ಎಸ್ ಎಲ್ ಎಸ್ ಡಬ್ಲ್ಯು ಸಿ ಸಿ) ಸಭೆಯಲ್ಲಿ ತುಮಕೂರು ವ್ಯಾಪ್ತಿಯಲ್ಲಿ ಭೂಮಿ ನೀಡಲಾಗಿತ್ತು. ಜಿಲ್ಲೆಯ ಸಿರಾ ಕೈಗಾರಿಕಾ ಪ್ರದೇಶದಲ್ಲಿ ಸದರಿ ಭೂಮಿ ಮಂಜೂರಾತಿಗೆ ಈ ಅನುಮೋದನೆ ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಉಕ್ಕಿನಿಂದ ತಯಾರಿಸಲಾಗುವ ಟಿಎಂಟಿ ಪಟ್ಟಿ, ಸರಳು ಹಾಗೂ ಸಹ-ಉತ್ಪನ್ನಗಳ ಘಟಕವನ್ನು 138 ಕೋಟಿ ಹೂಡಿಕೆಯಲ್ಲಿ ಸ್ಥಾಪಿಸಲಾಗುವುದು. ಇದರಿಂದ, ಸುಮಾರು 160 ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಕಂಪನಿ ಪ್ರಸ್ತಾವ ಸಲ್ಲಿಸಿತ್ತು ಎಂದು ಅವರು ಪ್ರಕಟಣೆ ಮೂಲಕ ವಿವರಿಸಿದ್ದಾರೆ.
2023 ಮೇ ತಿಂಗಳಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ಅದಕ್ಕೂ ಹಿಂದೆ ಬಿಜೆಪಿ ಸರ್ಕಾರವು ಅಧಿಕಾರಕ್ಕೆ ಬಂದಿತ್ತು. ಆ ವರ್ಷ ಜನವರಿಯಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿತ್ತು. ಹೀಗಾಗಿ ಹಿಂದಿದ್ದ ಬಿಜೆಪಿ ಸರ್ಕಾರವೇ ಬಂಧಿತ ನಟಿಯ ಕಂಪನಿಗೆ ಭೂಮಿ ನೀಡಿದೆ ಎಂದು ಸ್ಪಷ್ಟನೆ ನೀಡಿದೆ. ಅಂದರೆ ಈ ಬಗ್ಗೆ ಏನೊಂದು ಆರೋಪಗಳನ್ನು ಬಿಜೆಪಿ ಮಾಡದಂತೆ ಮೊದಲೇ ಸರ್ಕಾರ ಸ್ಪಷ್ಟನೆ ನೀಡಿದೆ. ಇತ್ತ ಈ ಬಗ್ಗೆ ಬಿಜೆಪಿಯೇ ಜನರಿಗೆ ಉತ್ತರ ನೀಡಬೇಕಿದೆ. ಅಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಿಎಂ ಆಗಿದ್ದರು. ಸದ್ಯ ಇದಕ್ಕೆ ಬಿಜೆಪಿ ಏನು ಪ್ರತಿಕ್ರಿಯೆ ಕೊಡಲಿದೆ ಎಂದು ರಾಜ್ಯದ ಜನರು ಕಾಯುತ್ತಿದ್ದಾರೆ.
ಒಟ್ಟು 14 ಕೆ.ಜಿ. ಗೂ ಅಧಿಕ ಚಿನ್ನವನ್ನು ಸಾಗಾಣೆ ಮಾಡುತ್ತಿದ್ದ ನಟಿ ರನ್ಯಾ ರಾವ್ ರನ್ನು ಬೆಂಗಳೂರ ಏರ್‌ಪೋರ್ಟ್‌ನಲ್ಲಿ ಬಂಧಿಸಿದ್ದ ವಿಚಾರಣೆ ನಡೆಸಲಾಗಿದೆ. ತಾನು ವಿವಿಧ ದೇಶಗಳಿಗೆ ಭೇಟಿ ಕೊಟ್ಟಿದ್ದೆ. ಚಿನ್ನ ಸಾಗಾಣೆ ಸೇರಿದಂತೆ ಹಲವು ವಿಚಾರಗಳನ್ನು ತನಿಖಾಧಿಕಾರಿಗಳು ಮುಂದೆ ಬಂಧಿತ ನಟಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈ ನಟಿಗೆ ಸೇರಿ ಕಂನಿಗೆ ಸರ್ಕಾರ ನೀಡಿದ ಈ ಭೂಮಿ ಕುರಿತು ಕುತೂಹಲ ಸೃಷ್ಟಿಯಾಗಿದೆ. ಇದು ಕಾನೂನು ಬದ್ಧವಾಗಿದ್ದರೆ ಯಾವುದೇ ಸಮಸ್ಯೆ ಉಂಟಾಗದು ಎಂದಿದ್ದಾರೆ ತಜ್ಞರು.
ನಟ ರನ್ಯಾ ರಾವ್ ಅವರ ಈ ಪ್ರಕರಣದಲ್ಲಿ ಪ್ರಮುಖ ರಾಜಕಾರಣಗಳ ಕೈವಾಡ ಇದೆ ಎಂಬ ಶಂಕೆ ವ್ಯಕ್ತವಾಗಿದೆ. ಅಲ್ಲದೇ ಹವಾಲಾ ಹಣ ವರ್ಗಾವಣೆಗೂ ಲಿಂಕ್ ಇದೆ ಎಂಬ ಶಂಕೆ ವ್ಯಕ್ತವಾಗಿದೆ. ಸದ್ಯ ಈ ಆರೋಪಿ ಡಿಆರ್‌ಐ ಪೊಲೀಸ್ ತನಿಖಾಧಿಕಾರಿಗಳ ವಶದಲ್ಲಿದ್ದಾರೆ. ತೀವ್ರ ವಿಚಾರಣೆ ನಡೆಸಲಾಗಿದೆ. ಇತ್ತ ವಿಪಕ್ಷ ನಾಯಕರು ಈ ಚಿನ್ನ ಕಳ್ಳ ಸಾಗಾಣೆ ಹಿಂದೆ ಯಾರೆಲ್ಲ ಇದ್ದಾರೆ ಎಂದು ಜನರ ಮುಂದಿಡಬೇಕು ಎಂದು ಆಗ್ರಹಿಸಿದ್ದಾರೆ.












Click it and Unblock the Notifications