ಮರ್ಯಾದೆ ಪ್ರಶ್ನೆ: ಯುವ ಜನತೆ ನೋಡಲೇಬೇಕಾದ ನಾಟಕ

ಬೆಂಗಳೂರು, ನ.19: ರಂಗಾಸಕ್ತರಿಗೆ ರಂಗ ಶಂಕರ ದ ಪರಿಚಯ ಮಾಡಿಕೊಡಬೇಕಾಗಿಲ್ಲ. ಕಳೆದ ಹತ್ತು ವರ್ಷಗಳಿಂದ ಬೆಂಗಳೂರಿನ ನಾಟಕದ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿದ ರಂಗ ಶಂಕರ, ರಂಗ ಪ್ರಯೋಗಗಳಿಗೆ ಸ್ಥಳಾವಕಾಶ ಮಾಡಿಕೊಡುವುದಲ್ಲದೇ ತನ್ನ ಸ್ವತಂತ್ರ ರಂಗ ಪ್ರಯೋಗಗಳನ್ನೂ ಪ್ರಸ್ತುತ ಪಡಿಸುತ್ತಾ ಬಂದಿದೆ.

ಕಳೆದ ವರ್ಷ ಜೂನ್ ನಲ್ಲಿ ಮೊದಲ ಪ್ರಯೋಗ ಕಂಡ 'ಮರ್ಯಾದೆ ಪ್ರಶ್ನೆ' ನಾಟಕ ಯುವ ಪೀಳಿಗೆಯ ಮನಸಿನ ತೊಳಲಾಟಗಳನ್ನು ಮತ್ತು ಸಮಾಜದ ಮೌಲ್ಯ ಗಳು ಅವರ ಮೇಲೆ ಬೀರುವ ಪರಿಣಾಮಗಳನ್ನು ಮತ್ತು ಅವರ ಆಸೆ ಹಂಬಲ, ಆಕಾಂಕ್ಷೆ, ತಲ್ಲಣ, ಪ್ರೀತಿ-ಪ್ರೇಮಗಳನ್ನು ಬಿಂಬಿಸುವ ನಾಟಕವಾಗಿದೆ. ಜರ್ಮನ್‌ ಮೂಲದ ನಾಟಕಕಾರ ಲ್ಯುಟ್ಸ್‌ ಹ್ಯುಬ್ನರ್‌ ರಚಿಸಿದ ಈ ನಾಟಕವನ್ನು ಎಸ್‌ ಸುರೇಂದ್ರನಾಥ್‌ ಕನ್ನಡಕ್ಕೆ ತಂದು ನಿರ್ದೇಶಿಸಿದ್ದಾರೆ.

Maryade Prashne Kannada Play

ಯುವ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಅವರ ಆಸೆ, ಹಂಬಲ, ಆಕಾಂಕ್ಷೆ, ತಲ್ಲಣ, ಪ್ರೀತಿ-ಪ್ರೇಮಗಳನ್ನು ಕುರಿತು ನಾಟಕ ಬರೆಯುತ್ತಿರುವವರಲ್ಲಿ ಜರ್ಮನಿಯ ಲ್ಯುಟ್ಸ್‌ ಹ್ಯುಬ್ನರ್‌ ಸಾಲಿನ ಮೊದಲಲ್ಲಿ ನಿಲ್ಲುತ್ತಾರೆ. ಯುವಜನತೆ ಕುರಿತಾದ ಅವರ ಹಲವಾರು ನಾಟಕಗಳಲ್ಲಿ ಒಂದು ಮುಖ್ಯವಾದ ನಾಟಕ. ಜಗತ್ತಿನ ಹಲವಾರು ಭಾಷೆಗಳಲ್ಲಿ ಪ್ರಯೋಗ ಕಾಣುತ್ತಿರುವ ಈ ನಾಟಕದ ಕನ್ನಡ ರೂಪ ಮರ್ಯಾದೆ ಪ್ರಶ್ನೆ.

ನಾಲ್ವರು ಕಾಲೇಜು ವಿದ್ಯಾರ್ಥಿಗಳು. ಒಂದು ಜಾಲಿ ಡ್ರೈವ್ ಎಂದು ಮೈಸೂರಿಗೆ ಹೊರಡುತ್ತಾರೆ. ರಸ್ತೆಯಲ್ಲಿ ಸಂಬಂಧಗಳು ಏರುಪೇರಾಗುತ್ತವೆ. ಗೆಳೆತನ ಹಳಸುತ್ತದೆ. ಅನುಮಾನಗಳು ಕಾಡುತ್ತವೆ. ಸಿಟ್ಟು-ಸೆಡವು-ಅಹಂ ಪೈಪೋಟಿಯಲ್ಲಿ ಎದುರಾಗುತ್ತವೆ. ಖುಷಿ ಕೊಡಬೇಕಾಗಿದ್ದ ಒಂದು ಡ್ರೈವ್ ದುರಂತದಲ್ಲಿ ಕೊನೆಗೊಳ್ಳುತ್ತದೆ.

ಪಾತ್ರಗಳಲ್ಲಿ: ಬಿ ವಿ ಶೃಂಗ, ಸಂದೀಪ್ ಜೈನ್, ಉಜ್ವಲ ರಾವ್, ವರ್ಷ ಹೆಗಡೆ, ಕೃಷ್ಣ ಹೆಬ್ಬಾಲೆ.

Maryade Prashne Kannada Play

ಮರ್ಯಾದೆ ಪ್ರಶ್ನೆ
ರಚನೆ ಮೂಲ: ಜರ್ಮನ್ ಮೂಲದ ನಾಟಕಕಾರ ಲ್ಯುಟ್ಸ್ ಹ್ಯುಬ್ನರ್
ಕನ್ನಡ ಅನುವಾದ ಮತ್ತು ನಿರ್ದೇಶನ: ಎಸ್.ಸುರೇಂದ್ರನಾಥ್
ಪ್ರಸ್ತುತಿ: ರಂಗ ಶಂಕರ
ಸ್ಥಳ: ರಂಗಶಂಕರ
ದಿನಾಂಕ ಮತ್ತು ಸಮಯ: 20/11/2015 ಸಂಜೆ 7:30ಕ್ಕೆ
21/11/2015 ಮಧ್ಯಾಹ್ನ 3:30ಕ್ಕೆ ಮತ್ತು ಸಂಜೆ 7:30ಕ್ಕೆ
ಟಿಕೆಟ್ ದರ : ರೂ. 100/-
ಆನ್ ಲೈನ್ ಬುಕ್ಕಿಂಗ್ ಗಾಗಿ: www.bookmyshow.com
ಟಿಕೆಟ್ ಗಳು ರಂಗ ಶಂಕರ ದಲ್ಲಿ ದೊರೆಯುತ್ತವೆ. (ಒನ್ ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+